Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕುರುಕ್ಷೇತ್ರ ಹಿಂದಕ್ಕೆ ಪೈಲ್ವಾನ್ ಮುಂದಕ್ಕೆ ಹೋಗಲು ಅಸಲಿ ಕಾರಣ ಬೇರೆ.!
Recommended Video
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ ಎಂದು ಬಹಳ ದಿನಗಳ ಹಿಂದೆಯೇ ನಿರ್ದೇಶಕ ಕೃಷ್ಣ ಹೇಳಿಕೊಂಡಿದ್ದರು. ಅದಕ್ಕಾಗಿ ಎಲ್ಲಾ ತಯಾರಿಯೂ ನಡೆಯುತ್ತಿದೆ. ಪೈಲ್ವಾನ್ ಎಂಟ್ರಿಗೆ ಅಖಾಡ ಸಿದ್ಧಗೊಳಿಸುತ್ತಿರುವಾಗಲೇ ಮುನಿರತ್ನ ಕುರುಕ್ಷೇತ್ರ ಶಾಕಿಂಗ್ ಸುದ್ದಿ ನೀಡಿತ್ತು.
ಕುರುಕ್ಷೇತ್ರ ಚಿತ್ರವೂ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತವೇ ಬರಲಿದೆ ಎಂದು ನಿರ್ಮಾಪಕ ಮುನಿರತ್ನ, ರಿಲೀಸ್ ದಿನಾಂಕವನ್ನ ಕೂಡ ಅಧಿಕೃತವಾಗಿ ಘೋಷಿಸಿಬಿಟ್ಟರು. ಅಲ್ಲಿಯವರೆಗೂ ಕೂಲ್ ಆಗಿದ್ದ ಗಾಂಧಿನಗರ ಕುರುಕ್ಷೇತ್ರ ಸುದ್ದಿ ಕೇಳಿ ಅಚ್ಚರಿಯಾಯಿತು.
ದುರ್ಯೋಧನ
ಮತ್ತು
ಪೈಲ್ವಾನ
ಇಬ್ಬರಲ್ಲಿಯೂ
ಒಂದು
ಶಕ್ತಿ
ಇದೆ-
ನಾಗೇಂದ್ರ
ಪ್ರಸಾದ್
ಒಂದೇ ದಿನ ಎರಡು ಬಿಗ್ ಬಜೆಟ್ ಚಿತ್ರಗಳು, ಅದರಲ್ಲೂ ಸ್ನೇಹಿತರ ಚಿತ್ರಗಳು ಬಂದ್ರೆ, ಇದರಿಂದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಾಗೂ ಚಿತ್ರಮಂದಿರಗಳ ಹಂಚಿಕೆಯಲ್ಲೂ ಫೈಟ್ ಆಗುತ್ತೆ ಎಂಬ ವಾದ, ಚರ್ಚೆ ನಡೆಯಿತು. ಅದಾದ ಬಳಿಕ ಎರಡೂ ಚಿತ್ರಗಳು ಬಿಡುಗಡೆ ದಿನಾಂಕವನ್ನ ಹಿಂದಕ್ಕೆ ಮುಂದಕ್ಕೆ ಹಾಕಿಕೊಂಡಿತ್ತು. ಮೇಲ್ನೋಟಕ್ಕೆ ಇದು ಪೈಲ್ವಾನ್ ವರ್ಸಸ್ ಕುರುಕ್ಷೇತ್ರ ಆಗಿದ್ದರೂ, ಈ ಎರಡು ಚಿತ್ರಕ್ಕೂ ಬೇರೆಯದ್ದೆ ಆತಂಕ ಇತ್ತು. ಏನದು? ಮುಂದೆ ಓದಿ.....

ಕುರುಕ್ಷೇತ್ರ ಹಿಂದಕ್ಕೆ ಬಂದಿದ್ದೇಕೆ?
ಪೈಲ್ವಾನ್ ಸಿನಿಮಾ ಆಗಸ್ಟ್ 8ಕ್ಕೆ ಬರುತ್ತೆ ಎಂದು ಗೊತ್ತಿದ್ದರೂ ಅದೇ ದಿನಾಂಕವನ್ನ ಮುನಿರತ್ನ ಕುರುಕ್ಷೇತ್ರಕ್ಕೆ ಯಾಕೆ ನಿಗದಿ ಮಾಡಿದ್ದರು ಎಂಬುದು ಪ್ರಶ್ನೆ. ನಾವು ದಿನಾಂಕ ಬದಲಾಯಿಸಿಲ್ಲ, ಅವರೇ ಬೇಕಾದರೂ ಪೋಸ್ಟ್ ಪೋನ್ ಮಾಡಿಕೊಳ್ಳಲಿ ಎನ್ನುವ ರೀತಿಯಲ್ಲಿ ಮಾತನಾಡಿದ್ದ ಮುನಿರತ್ನ ಇದ್ದಕ್ಕಿದ್ದಂತೆ ಒಂದು ವಾರ ಹಿಂದಕ್ಕೆ ಬಂದರು. ಅದೂ ಯಾಕೆ ಎಂದು ಅರ್ಥವಾಗಿಲ್ಲ.
ರಾಜಕೀಯ
ಕೆಸರೆರಚಾಟದಲ್ಲಿ
ಕೊಚ್ಚಿ
ಹೋಗುತ್ತಿದ್ಯಾ
ಸ್ಯಾಂಡಲ್
ವುಡ್?

ಪೈಲ್ವಾನ್ ಯಾಕೆ ಮುಂದಕ್ಕೆ ಹೋಯ್ತು?
ಆಗಸ್ಟ್ 8ಕ್ಕೆ ಬರುವುದಾಗಿ ಹೇಳಿದ್ದ ಕುರುಕ್ಷೇತ್ರ ಸಿನಿಮಾ ಒಂದು ವಾರ ಹಿಂದೆ ಆಗಸ್ಟ್ 2ಕ್ಕೆ ತನ್ನ ದಿನಾಂಕ ನಿಗದಿ ಮಾಡಿಕೊಂಡಿತು. ಬಳಿಕ ಪೈಲ್ವಾನ್ ಅಂದುಕೊಂಡಂತೆ ಆಗಸ್ಟ್ 8ಕ್ಕೆ ಬರಬಹುದಾಗಿತ್ತು. ಆದ್ರೆ, ಪೈಲ್ವಾನ್ ಚಿತ್ರವೂ ಎರಡು ವಾರ ಮುಂದಕ್ಕೆ ಹೋಗಿದ್ದು ಯಾಕೆ ಎಂಬ ಪ್ರಶ್ನೆ? ಸದ್ಯಕ್ಕೆ ಆಗಸ್ಟ್ 29ರಂದು ಪೈಲ್ವಾನ್ ಎಂಟ್ರಿ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಎರಡೂ ಚಿತ್ರಕ್ಕೂ ಅದೊಂದು ಆತಂಕ
ಕುರುಕ್ಷೇತ್ರ ಮತ್ತು ಪೈಲ್ವಾನ್ ಎರಡೂ ಸಿನಿಮಾಗಳು ಬಹುಭಾಷೆಯಲ್ಲಿ ಬರ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಈ ಚಿತ್ರಗಳು ಕ್ಲಾಶ್ ಆಗಿದ್ದರೇ ಹೇಗೋ ಮ್ಯಾನೇಜ್ ಮಾಡಬಹುದಿತ್ತು. ಆದರೆ, ಒಂದೇ ದಿನ ಹೊರರಾಜ್ಯಗಳಲ್ಲೂ ತೆರೆಕಂಡ್ರೆ ಅಲ್ಲಿಯೂ ಹೊಡೆತ ಬೀಳುವುದು ಖಚಿತ ಎಂದು ಮನವರಿಕೆ ಆಗಿದೆ. ಹಾಗಾಗಿ, ಇಬ್ಬರು ಮುಂದಕ್ಕೆ ಹಿಂದಕ್ಕೆ ಹೋಗಲು ನಿರ್ಧರಿಸಿದ್ದಾರೆ.
ಆಗಸ್ಟ್
29ರಂದು
ಚಿತ್ರಮಂದಿರಕ್ಕೆ
ಸುದೀಪ್
ಪೈಲ್ವಾನ್
ಎಂಟ್ರಿ.!

ಇನ್ನೊಂದು ಕಾರಣ ಇರಬಹುದು
ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರ್ತಿದೆ. ಈ ಚಿತ್ರದ ಹಿಂದೆ ಮತ್ತು ಮುಂದೆ ಬರುವುದರಿಂದ ಸಹಜವಾಗಿ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ. ಯಾಕಂದ್ರೆ, ಬಾಹುಬಲಿ ನಂತರ ಪ್ರಭಾಸ್ ಸ್ಟಾರ್ ವ್ಯಾಲ್ಯೂ ತುಂಬಾ ದೊಡ್ಡದಿದೆ. ಎಲ್ಲಾ ಭಾಷೆಯಲ್ಲೂ ಪ್ರಭಾಸ್ ಚಿತ್ರಕ್ಕಾಗಿ ಕಾಯುವಂತ ಪ್ರೇಕ್ಷಕರಿದ್ದಾರೆ. ಸುಮ್ಮನೇ ಅದೇ ಸಮಯದಲ್ಲಿ ಬಿಟ್ಟು ಕೈ ಸುಟ್ಟುಕೊಳ್ಳುವುದು ಬೇಡ ಎಂಬ ನಿರ್ಧಾರವೂ ಇರಬಹುದು. ಹಾಗಾಗಿಯೇ ಸಾಹೋ ಬರುವುದಕ್ಕೂ ಎರಡು ವಾರ ಮುಂಚೆ ಕುರುಕ್ಷೇತ್ರ, ಎರಡು ವಾರದ ನಂತರ ಪೈಲ್ವಾನ್ ಫಿಕ್ಸ್ ಆಗಿದ್ದಾರೆ.