twitter
    For Quick Alerts
    ALLOW NOTIFICATIONS  
    For Daily Alerts

    ಆ ನಟರು ಮಾಡಿದರೆ ತಪ್ಪಲ್ಲ, ಧನಂಜಯ್ ಮಾಡಿದರೆ ತಪ್ಪೆ? ನೆಟ್ಟಿಗರ ಪ್ರಶ್ನೆ

    |

    ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ 'ಹೆಡ್ ಬುಷ್' ಸಿನಿಮಾ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದಲ್ಲಿ ವೀರಗಾಸೆಯವರಿಗೆ ಅಪಮಾನ ಮಾಡಲಾಗಿದೆ, ಕರಗಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಕೆಲವು ಹಿಂದುಪರ ಸಂಘಟನೆಗಳು ಧನಂಜಯ್ ವಿರುದ್ಧ ದೂರು ಸಹ ನೀಡಿದ್ದಾರೆ.

    'ಹೆಡ್ ಬುಷ್' ಸಿನಿಮಾದಲ್ಲಿ ಜಯರಾಜ್ ಪಾತ್ರದಲ್ಲಿ ನಟಿಸಿರುವ ಧನಂಜಯ್, ದೃಶ್ಯವೊಂದರಲ್ಲಿ ವೀರಗಾಸೆ ವೇಷ ಧರಿಸಿ ಬರುವ ರೌಡಿಗಳನ್ನು ಚಚ್ಚುವ ದೃಶ್ಯವಿದೆ, ಆ ದೃಶ್ಯದ ಬಗ್ಗೆ ವೀರಗಾಸೆ ಕಲಾವಿದರು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದು ಸಂಘಟನೆಗಳ ಸದಸ್ಯರು ಸಹ ಈ ಬಗ್ಗೆ ಆರೋಪ ಮಾಡುತ್ತಿದ್ದಾರೆ.

    'ಹೆಡ್‌ ಬುಷ್' ವೀರಗಾಸೆ ವಿವಾದ: 'ಸಂವಾದಕ್ಕೂ ಸಿದ್ಧ.. ಜಗಳಕ್ಕೂ ಸಿದ್ಧ'ವೆಂದು ಕಿಡಿಕಾರಿದ ಅಗ್ನಿ ಶ್ರೀಧರ್! 'ಹೆಡ್‌ ಬುಷ್' ವೀರಗಾಸೆ ವಿವಾದ: 'ಸಂವಾದಕ್ಕೂ ಸಿದ್ಧ.. ಜಗಳಕ್ಕೂ ಸಿದ್ಧ'ವೆಂದು ಕಿಡಿಕಾರಿದ ಅಗ್ನಿ ಶ್ರೀಧರ್!

    ಆದರೆ ಸಾಮಾಜಿಕ ಜಾಲತಾಣದಲ್ಲಿ ಧನಂಜಯ್‌ ಪರವಾಗಿ ಹಲವರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಈ ಹಿಂದೆ ಕೆಲವು ನಾಯಕ ನಟರು ತಮ್ಮ ಸಿನಿಮಾಗಳಲ್ಲಿ ಜನಪದ ಕಲಾವಿದರ ವೇಷದಲ್ಲಿರುವವರಿಗೆ ಹೊಡೆದ ದೃಶ್ಯಗಳನ್ನು ಉಲ್ಲೇಖಿಸಿ, ಅವರ ಮೇಲೆ ಏಕೆ ಪ್ರತಿಭಟನೆ ಇಲ್ಲ, ಧನಂಜಯ್ ಅನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಏಕೆ ಎಂದು ಪ್ರಶ್ನಿಸಿದ್ದಾರೆ.

    ಹುಲಿ ವೇಷಧಾರಿಗೆ ಹೊಡೆಯುವ ದೃಶ್ಯವಿದೆ

    ಹುಲಿ ವೇಷಧಾರಿಗೆ ಹೊಡೆಯುವ ದೃಶ್ಯವಿದೆ

    'ಉಳಿದವರು ಕಂಡಂತೆ' ಕನ್ನಡದ ಜನಪ್ರಿಯ ಸಿನಿಮಾಗಳಲ್ಲಿ ಒಂದು ಆ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಹುಲಿ ವೇಷ ಧರಿಸಿರುವ ಅಚ್ಯುತ್ ಕುಮಾರ್‌ಗೆ ಹಿಂಬದಿಯಿಂದ ತಲೆಗೆ ಹೊಡೆದು ಬೀಳಿಸುವ ದೃಶ್ಯವಿದೆ. ಆ ದೃಶ್ಯವನ್ನು ಹೀರೋ ಎಲಿವೇಶನ್ ನೀಡಿ ಮಾಸ್ ಆಗಿಯೇ ಚಿತ್ರಿಸಲಾಗಿದೆ. ಹುಲಿ ವೇಷ ಸಹ ಕಲೆ, ಹುಲಿ ವೇಷಧಾರಿಯ ಮೇಲೆ ಹಲ್ಲೆ ಮಾಡುವ ದೃಶ್ಯಕ್ಕೆ ಯಾಕೆ ಯಾರೂ ವಿವಾದ ಮಾಡಲಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ಗಣೇಶನ ವಿಗ್ರಹಕ್ಕೆ ಮಾಡಿದ ಅಪಮಾನ ಎನ್ನಲಿಲ್ಲವೇಕೆ?

    ಗಣೇಶನ ವಿಗ್ರಹಕ್ಕೆ ಮಾಡಿದ ಅಪಮಾನ ಎನ್ನಲಿಲ್ಲವೇಕೆ?

    ಇನ್ನು 'ಎ' ಸಿನಿಮಾದಲ್ಲಿ ಉಪೇಂದ್ರ ಗಣೇಶನ ವಿಗ್ರಹದೊಂದಿಗೆ ಮಾತನಾಡುವ ದೃಶ್ಯ ಬಹಳ ಜನಪ್ರಿಯ. ಗಣೇಶ ವಿಗ್ರಹಕ್ಕೆ ಗನ್ ತೋರಿಸುವ ಉಪೇಂದ್ರ, ಗಣೇಶನ ಶಕ್ತಿ ಬಗ್ಗೆ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಕೇಳುತ್ತಾರೆ ಆ ಬಳಿಕ ದೇವರುಗಳೇ ವ್ಯರ್ಥ ಎಂಬಂತೆಯೂ ಮಾತನಾಡಿ ದೇವರ ವಿಗ್ರಹವನ್ನು ಬಾವಿಗೆ ಬಿಸಾಡುತ್ತಾರೆ. ಆ ದೃಶ್ಯದ ಬಗ್ಗೆಯೂ ಯಾರೂ ಮಾತನಾಡಿರಲಿಲ್ಲ. ಆದರೆ ಈಗ ಏಕೆ ಪ್ರಶ್ನೆ ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಕೇಳಿರುವ ಕೆಲವರು ಉಪೇಂದ್ರದ ಜಾತಿ ಅವರನ್ನು ಪ್ರಶ್ನಾತೀತರನ್ನಾಗಿಸಿದೆಯೇ ಎಂದು ಸಹ ಕೇಳಿದ್ದಾರೆ.

    ಅಯ್ಯಪ್ಪ ಮಾಲಾಧಾರಿಗಳಿಗೆ ಹೊಡೆವ ದೃಶ್ಯವಿದೆ

    ಅಯ್ಯಪ್ಪ ಮಾಲಾಧಾರಿಗಳಿಗೆ ಹೊಡೆವ ದೃಶ್ಯವಿದೆ

    'ಬೊಂಬಾಟ್' ಸಿನಿಮಾದಲ್ಲಿ ನಟ ಗಣೇಶ್, ಅಯ್ಯಪ್ಪ ಮಾಲೆ ಧರಿಸಿದ ವ್ಯಕ್ತಿಗಳಿಬ್ಬರನ್ನು ಹಿಡಿದು ಥಳಿಸುತ್ತಾರೆ. ಅವರಿಬ್ಬರೂ ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದಾರೆ ಎಂದು ಹೇಳಿ ಆ ಇಬ್ಬರು ಮಾಲಾಧಾರಿಗಳನ್ನು ಹೊಡೆಯುತ್ತಾರೆ. ಆಗಲೂ ಆ ದೃಶ್ಯದ ವಿವರಣೆ ಅರ್ಥೈಸಿಕೊಂಡು ಯಾರೂ ಪ್ರಶ್ನೆ ಮಾಡಿರಲಿಲ್ಲ. ಆದರೆ ಈಗ, 'ಹೆಡ್ ಬುಷ್' ಸಿನಿಮಾದಲ್ಲಿ ವೀರಗಾಸೆ ಕಲಾವಿದರ ವೇಷ ಧರಿಸಿ ಬರುವ ರೌಡಿಗಳನ್ನು ಹೊಡೆದಾಗ ಪ್ರಶ್ನೆ ಮಾಡುತ್ತಿದ್ದಾರೆ ಏಕೆ? ಎಂದು ನೆಟ್ಟಿಗರು ಕೇಳಿದ್ದಾರೆ.

    ಹಲವು ಸಿನಿಮಾಗಳಲ್ಲಿ ಇಂಥಹಾ ದೃಶ್ಯಗಳಿವೆ

    ಹಲವು ಸಿನಿಮಾಗಳಲ್ಲಿ ಇಂಥಹಾ ದೃಶ್ಯಗಳಿವೆ

    ಕನ್ನಡದ ಹಲವು ಸಿನಿಮಾಗಳಲ್ಲಿ ಹಲವು ಕಲೆಗಳನ್ನು ಬೇರೆ-ಬೇರೆ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಕೆಲವೊಮ್ಮೆ ನಿರ್ದೇಶಕ ಕ್ರಿಯಾತ್ಮಕ ಸ್ವಾತಂತ್ರ್ಯ ಬಳಸಿ ತಿದ್ದುವ, ತಿರುಚು ಕಾರ್ಯಗಳನ್ನು ಮಾಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಕೆಲವು ಸಮಯದಾಯದವರನ್ನು ಕಳಪೆ ಹಾಸ್ಯಕ್ಕೆ ಬಳಸಿಕೊಂಡು ಉದಾಹರಣೆಗಳೂ ಇವೆ. ಆದರೆ ಇತ್ತೀಚೆಗೆ ಮಾತ್ರ ಜನರು ಎಲ್ಲದರಲ್ಲೂ ತಪ್ಪು ಹುಡುಕುವ ಕೆಲಸಕ್ಕೆ ಇಳಿದಿದ್ದಾರೆ. ಅದರಲ್ಲಿಯೂ ಕೆಲವು ನಟ-ನಿರ್ದೇಶಕರ ಸಿನಿಮಾಗಳಲ್ಲಿ ಕಡ್ಡಾಯವಾಗಿ ತಪ್ಪು ಹುಡುಕಲು ಯತ್ನಿಸುತ್ತಿದ್ದಾರೇನೋ ಎಂಬ ಅನುಮಾನವನ್ನೂ ಕೆಲವು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

    English summary
    Why Other Movies In Which Hero Misbehave With God And Cultural Artists not Create Controversy. Here is the list.
    Thursday, October 27, 2022, 12:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X