Don't Miss!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- News
ಜನವರಿ 28ರಂದು 300 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pan India Film: 'ಪುಷ್ಪ', '83', 'ರಾಧೆ ಶ್ಯಾಮ್' ಕನ್ನಡದಲ್ಲಿ ಬರಲಿಲ್ಲವೇಕೆ? ಪ್ಯಾನ್ ಇಂಡಿಯಾ ಎಂದರೆ ಇದೇನಾ?
ಕನ್ನಡ ಚಿತ್ರರಂಗದಲ್ಲಿ ಸದ್ಯ ಡಬ್ಬಿಂಗ್ ವಿವಾದ ಭುಗಿಲೆದ್ದಿದೆ. RRR ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಕನ್ನಡಿಗರು ಈ ಸಿನಿಮಾವನ್ನು ವಿರೋಧ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಎಂದು ಹೇಳಿಕೊಂಡಿರುವ 'RRR' ಸಿನಿಮಾದ ಕೇವಲ ಬೆರಳೆಣಿಕೆಯ ಶೋಗಳಷ್ಟೆ ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
RRR ಚಿತ್ರದ ಪ್ರಚಾರ ಕಾರ್ಯಕ್ರಮ ಕರ್ನಾಟಕದಲ್ಲಿ ಜೋರಾಗಿ ನಡೆಯಿತು. ಕನ್ನಡದಲ್ಲೂ ಸಿನಿಮಾವನ್ನು ಡಬ್ ಮಾಡಲಾಗಿದೆ. ನಾಯಕರಾದ ರಾಮ್ ಚರಣ್ ಮತ್ತು ಜೂನಿಯ್ ಎನ್‌ಟಿಆರ್ ಇಬ್ಬರು ಕನ್ನಡದಲ್ಲೇ ಡಬ್ ಮಾಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ಈಗ ಚಿತ್ರದ ರಿಲೀಸ್ ಹತ್ತಿರ ಬಂದರೂ ಕನ್ನಡದಲ್ಲಿ ಸಿನಿಮಾ ರಿಲೀಸ್ ಇಲ್ಲ.
RRR
Ticket
Rates
:
ಯಾವ
ನಗರಗಳಲ್ಲಿ
ಟಿಕೆಟ್
ದರ
ಎಷ್ಟಿದೆ:
ಕರ್ನಾಟಕದಲ್ಲಿ
ಎಷ್ಟು?
ಹಾಗಾಗಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಕನ್ನಡಿಗರು ಈ ಚಿತ್ರದ ವಿರುದ್ಧ ತೊಡೆ ತಟ್ಟಿ ಹೋರಾಟಕ್ಕೆ ಇಳಿದಿದ್ದಾರೆ. 'RRR' ಮಾತ್ರವಲ್ಲ ಇತ್ತೀಚೆಗೆ ಬಂದ ಯಾವುದೇ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆ ಆಗಿಲ್ಲ. ಹಾಗಿದ್ದಮೇಲೆ 'ಪ್ಯಾನ್ ಇಂಡಿಯಾ' ಎಂಬ ಟ್ಯಾಗ್ ಲೈನ್ ಯಾಕೆ? ಹೀಗೆ ಪ್ಯಾನ್ ಇಂಡಿಯಾ ಟ್ಯಾಗ್ ಲೈನ್ ನಲ್ಲಿ ತಮ್ಮದೇ ಭಾಷೆಗಳಲ್ಲಿ ಬಿಡುಗಡೆ ಆದ ಸಿನಿಮಾಗಳ ಮಾಹಿತಿ ಇಲ್ಲಿದೆ ನೋಡಿ.

ರಶ್ಮಿಕಾ ಇದ್ದರೂ 'ಪುಷ್ಪ' ಕನ್ನಡದಲ್ಲಿ ಬರಲಿಲ್ಲ!
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರ ಕನ್ನಡದಲ್ಲಿ ರಿಲೀಸ್ ಆಗಿಲ್ಲ. ಚಿತ್ರದ ಟ್ರೇಲರ್ ಮಾತ್ರ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಯ್ತು. ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ ಎಂದು ಬೀಗಿದ ಚಿತ್ರತಂಡ ಆ ಯೋಜನೆಯನ್ನು ಪೂರ್ಣ ಮಾಡಲೇ ಇಲ್ಲ. ಪುಷ್ಪ ಚಿತ್ರ ಕನ್ನಡದಲ್ಲಿ ತೆರೆಗೆ ಬರಲಿಲ್ಲ. ಹಿಂದಿ, ತೆಲುಗು, ತಮಿಳಿನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತು. ನಂತರ ಓಟಿಟಿಯಲ್ಲಿ ಕನ್ನಡ ಅವರಣಿಕೆ ಬಂದರು, ಚಿತ್ರಮಂದಿರದಲ್ಲಿ ರಿಲೀಸ್ ಆಗಲಿಲ್ಲ.

ಕನ್ನಡದಲ್ಲಿ ರಿಲೀಸ್ ಆಗಲಿಲ್ಲ 'ರಾಧೆ ಶ್ಯಾಮ್'!
ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಟ್ರೇಲರ್, ಪೋಸ್ಟರ್ ಎಲ್ಲವೂ ಕನ್ನಡದಲ್ಲಿ ರಿಲೀಸ್ ಆದವು. ಆಗ ಈ ಚಿತ್ರ ಕನ್ನಡದಲ್ಲಿ ತೆರೆಗೆ ಬರುತ್ತೆ, ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗಿತ್ತು. ಆದರೆ ಈ ಚಿತ್ರ ಕನ್ನಡದಲ್ಲಿ ಅದ್ಯಾವಾಗ ಥಿಯೇಟರ್‌ನಲ್ಲಿ ತೆರೆಗೆ ಬಂತೂ ಅನ್ನೋದೇ ಗೊತ್ತಾಗಲಿಲ್ಲ. ಆದರೆ ಈ ಚಿತ್ರವೂ ಕನ್ನಡದಲ್ಲಿ ಬಿಡುಗಡೆ ಆಗಲೇ ಇಲ್ಲ. 'ರಾಧೆ ಶ್ಯಾಮ್' ಪ್ಯಾನ್ ಇಂಡಿಯಾ ಎನ್ನುವುದು ಕೇವಲ ಬಿಲ್ಡಪ್‌ಗೆ ಸೀಮಿತ ಆಗಿ ಬಿಟ್ಟಿತು.

'83' ಕನ್ನಡದಲ್ಲಿ ಬಂದಿದ್ದು ಒಟಿಟಿಯಲ್ಲಿ!
ಇನ್ನು ಬಾಲಿವುಡ್‌ನಲ್ಲಿ ಬಂದ ರಣ್ವೀರ್ ಸಿಂಗ್ ಅಭಿನಯದ '83' ಚಿತ್ರ ಕೂಡ ಪ್ಯಾನ್ ಇಂಡಿಯಾ ಚಿತ್ರ ಎಂದು ಭರ್ಜರಿಯಾಗಿ ಪ್ರಚಾರ ಗಿಟ್ಟಿಸಿಕೊಂಡಿತು. ಕರ್ನಾಟಕಕ್ಕೆ ಬಂದ '83' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಕಿಚ್ಚ ಸುದೀಪ್ ನೇತೃತ್ವದಲ್ಲಿ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಭರವಸೆ ನೀಡಿ ಕೈ ತೊಳಿದು ಕೊಂಡಿತು. ಆದರೆ 83 ಕನ್ನಡದಲ್ಲಿ ರಿಲೀಸ್ ಆಗಿದ್ದು ಮಾತ್ರ ಒಟಿಟಿ ವೇದಿಕೆಯಲ್ಲಿ.

ಇನ್ನೇಕೆ ಬೇಕು 'ಪ್ಯಾನ್ ಇಂಡಿಯಾ' ಹೆಸರು?
ಕನ್ನಡದ ಕೆಜಿಎಫ್ ಚಿತ್ರ ಪ್ಯಾನ್ ಇಂಡಿಯಾ ಎನ್ನುವ ಹೆಸರಲ್ಲಿ ಬಂತು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಯ್ತು. ಆದರೆ ಪರಭಾಷೆ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿದ್ದರೂ ರಿಲೀಸ್ ಮಾಡಲು ಹಿಂದೇಟು ಹಾಕುತ್ತವೆ. ಇದಕ್ಕೆ ಕಾರಣ ಪ್ರದರ್ಶಕರು ಎನ್ನಲಾಗುತ್ತಿದೆ. ಥಿಯೇಟರ್ ಮಾಲಿಕರೆ ಕನ್ನಡ ಅವತರಣಿಕೆಯನ್ನು ರಿಲೀಸ್ ಮಾಡಲು ಮುಂದೆ ಬರುವುದಿಲ್ಲ ಎನ್ನುವ ಸುದ್ದಿ ಇದೆ. ಬಹುಷಃ ಅವರು ಜನರೆ ಬರುದಿಲ್ಲ ಎಂದು ಹೇಳಬಹುದು. ಆದರೆ ಜನರಿಗೆ ಆಯ್ಕೆ ಮಾಡಲು ಅವಕಾಶವೇ ಇಲ್ಲ ಎಂದಾದಾಗ, ಇರುವುದನ್ನೆ ಒಪ್ಪಿಕೊಳ್ಳ ಬೇಕಾಗುತ್ತದೆ.