»   » ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಬೇಸರಕ್ಕೆ ಕಾರಣವೇನು?

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಬೇಸರಕ್ಕೆ ಕಾರಣವೇನು?

Posted By: ಜೀವನರಸಿಕ
Subscribe to Filmibeat Kannada

ಶ್ರೀನಗರ ಕಿಟ್ಟಿ ಸ್ಯಾಂಡಲ್ ವುಡ್ ನ ತ್ಯಾಗರಾಜ ಅಂತಾನೇ ಫೇಮಸ್. ರಮೇಶ್ ಅರವಿಂದ್ ನಂತ್ರ ಟ್ರ್ಯಾಜಿಡಿ ಎಂಡಿಂಗ್ ಸಿನಿಮಾಗಳಲ್ಲಿ ಮಿಂಚಿದ ನಟ. ಕಿಟ್ಟಿ ಸಿನಿಮಾಗಳಲ್ಲಿ ಕೊರೆಯುವ ನೋವು ಚಿತ್ರಪ್ರೇಮಿಗಳಿಗೆ ಇಷ್ಟವಾಗಿತ್ತು.

'ಸಂಜು ವೆಡ್ಸ್ ಗೀತಾ' ನಂತರ ಡೈಮಂಡ್ ಸ್ಟಾರ್ ಕೂಡ ಆದ ಶ್ರೀನಗರ ಕಿಟ್ಟಿಯವರ ಯಾವ ಸಿನಿಮಾಗಳೂ ರಿಲೀಸಾಗೋ ಲಕ್ಷಣಗಳಿಲ್ಲ. ಕಿಟ್ಟಿ ಅಭಿನಯದ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ಮುಗ್ಗರಿಸಿವೆ.

Why Srinagara Kitty movies delaying for release?

'ಸಂಜು ವೆಡ್ಸ್ ಗೀತಾ' ನಂತರ 'ಪಾರು ವೈಫ್ ಆಫ್ ದೇವದಾಸ್', ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ 'ಅಪ್ಪಯ್ಯ', ಇತ್ತೀಚೆಗೆ ಬಂದ 'ಬಹುಪರಾಕ್' ಸಿನಿಮಾಗಳಿಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಸದ್ಯ ಸುಬ್ರಮಣಿ, ಶಂಕ್ರ, ಗೀತಾಂಜಲಿ ಸಿನಿಮಾಗಳು ಶೂಟಿಂಗ್ ಮುಗಿಸಿವೆ.

ಆದ್ರೆ ಮಾರ್ಕೆಟ್ ನಲ್ಲಿ ಕಿಟ್ಟಿ ಹವಾ ಸ್ವಲ್ಪ ಕಡಿಮೆ ಇರುವ ಕಾರಣ ಸಿನಿಮಾ ರೆಡಿಯಾದರೂ ತೆರೆಗೆ ತರಲಾಗದಿರೋ ಸ್ಥಿತಿಯಲ್ಲಿದ್ದಾರೆ ನಿರ್ಮಾಪಕರು. ಇಂದರಿಂದಾಗಿ ಬೇಸರದಿಂದಾಗಿ ಶ್ರೀನಗರ ಕಿಟ್ಟಿ ಯಾವುದೇ ಕಾರ್ಯಕ್ರಮಗಳಿಗೆ ಬರ್ತಿಲ್ಲ ಅನ್ನೋ ಗುಲ್ಲು ಗಾಂಧಿನಗರದಲ್ಲಿ ಹರಿದಾಡ್ತಿದೆ.

ಟ್ರ್ಯಾಜಿಡಿ ಸಿನಿಮಾಗಳ ಹೀರೋ ಈಗ ಟ್ರ್ಯಾಜಿಡಿ ಸ್ಥಿತಿಯಲ್ಲಿರೋದು ಕಿಟ್ಟಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ. ಶ್ರೀನಗರಕಿಟ್ಟಿ ಮತ್ತೆ ಫಾರಂಗೆ ಬರಲಿ. ಅವರ ಚಿತ್ರಗಳು ಹಂಡ್ರಡ್ ಡೇಸ್ ಪ್ರದರ್ಶನ ಕಾಣಲಿ ಎಂಬುದು ಅಭಿಮಾನಿಗಳ ಅಭಿಮತ.

English summary
Why Diamond Star Srinagara Kitty movies delaying to release? After series of movies not do well in box office, the actor is fedup. Fans are waiting for his next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada