»   » ಸುದೀಪ್ 'ರನ್ನ' ಲೇಟಾಗಲು ಅಸಲಿ ಕಾರಣ ಏನು?

ಸುದೀಪ್ 'ರನ್ನ' ಲೇಟಾಗಲು ಅಸಲಿ ಕಾರಣ ಏನು?

By: ಜೀವನರಸಿಕ
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ರೆ 'ರನ್ನ' ಚಿತ್ರ ಜನವರಿ ಕೊನೆಯಲ್ಲೇ ಥಿಯೇಟರ್ ಗೆ ಅಪ್ಪಳಿಸಬೇಕಾಗಿತ್ತು. ಆದ್ರೆ ಈಗ ಫೆಬ್ರವರಿ ಅಂತಿದ್ದಾರೆ ಚಿತ್ರದ ನಿರ್ದೇಶಕರು. ಅದೂ ಯಾವ ಗ್ಯಾರಂಟಿ ಅಂತಿದೆ ಚಿತ್ರತಂಡ. ಯಾಕಂದ್ರೆ ಚಿತ್ರದ ನಿರ್ಮಾಕರಿಗೆ ಹಣದ ಕೊರತೆಯಾಗಿದೆಯಂತೆ.

ಹೇಳಿ ಕೇಳಿ ಭಾರೀ ಬಜೆಟ್ ಚಿತ್ರ 'ರನ್ನ'. ಚಿತ್ರದ ಬಜೆಟ್ ಬಗ್ಗೆ ನಿರ್ಮಾಪಕರು ಅಂದುಕೊಂಡಿದ್ದೇ ಬೇರೆ, ಆದ್ರೆ ಅದು ಆಗಿದ್ದೇ ಬೇರೆ. ರನ್ನ ಚಿತ್ರವನ್ನ ತೆಲುಗಿನ 'ಅತ್ತಾರಿಂಟಿಕಿ ದಾರೇದಿ'ಯಷ್ಟೇ ಅಚ್ಚುಕಟ್ಟಾಗಿ ತರೋಕೆ ಯೋಚಿಸಿದ ಕಿಚ್ಚ ಅದ್ದೂರಿ ಸೆಟ್ ಎಡಿಟಿಂಗ್ ಎಲ್ಲವನ್ನೂ ಮಾಡಿಸಿದ್ದಾರೆ.

Why Sudeep's Ranna releasing late?

ಆದ್ರೆ ಈಗ ನಿರೀಕ್ಷೆಗಿಂತ ಖರ್ಚು ಹೆಚ್ಚಾಗಿದೆ. ಇದ್ರಿಂದಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಿಧಾನವಾಗ್ತಿದೆ. ನಿರ್ಮಾಪಕರು ಶಕ್ತಿಮೀರಿ ಪ್ರಯತ್ನ ಮಾಡ್ತಿದ್ದಾರೆ. ಹಾಗಾಗೀನೇ ಸಂಕ್ರಾತಿಗೆ ಹೊರಬರಬೇಕಿದ್ದ ಚಿತ್ರ ಮುಂದೆ ಹೋಗ್ತಿದೆ.

ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬಂದ್ರೆ ಅಭಿಮಾನಿಗಳಿಗೆ ಖುಷೀನೇ. ಆದ್ರೂ ನಮ್ಮ ಸೂಚನೆ ಅಂದ್ರೆ ಚಿತ್ರ ಲೇಟಾದ್ರೂ ತಯಾರಾಗಿರಿ ನೋಡಲು. ರನ್ನ ಚಿತ್ರವು ತೆಲುಗಿನ ಯಶಸ್ವಿ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಪವನ್ ಕಲ್ಯಾಣ್ ಅಭಿನಯಿಸಿದ್ದ ಈ ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ ಏಕತಾನತೆಯನ್ನು ಮುರಿದಂತಹ ಚಿತ್ರ ಇದು. ಸರಿಸುಮಾರು ರು.55 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಲ್ಲಿ ರು.85 ಕೋಟಿ ಬಾಚಿತು.

ಕನ್ನಡದಲ್ಲಿ ನಂದಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. ರಚಿತಾ ರಾಮ್, ಹರಿಪ್ರಿಯಾ ಚಿತ್ರದ ನಾಯಕಿಯರು. ಸುದೀಪ್ ಅವರಿಗೆ ಸೋದರತ್ತೆಯಾಗಿ ರೋಜಾ ಖ್ಯಾತಿಯ ಮಧು ಕಾಣಿಸಲಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು ಎಂ ಚಂದ್ರಶೇಖರ್ ಛಾಯಾಗ್ರಹಣವಿದೆ.

English summary
Why Kannada movie Ranna releasing late? According to sources, the movie is facing some finacial problem. The principal cast includes Kiccha Sudeep, Rachita Ram, Haripriya and Madhoo. It is a remake of the Telugu film Attarintiki Daredi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada