Just In
Don't Miss!
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಯ್ತು 2021ರ ಬಜಾಜ್ ಪಲ್ಸರ್ 220ಎಫ್ ಬೈಕ್
- News
"ಸೋಂಕಿನ ವಿರುದ್ಧ ಲಸಿಕೆಗಳು ಸಂಜೀವಿನಿಯಂತೆ ಕಾರ್ಯ ನಿರ್ವಹಿಸಲಿವೆ"
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದೊಂದೇ ಚಿತ್ರಕ್ಕೆ ಸುಸ್ತಾದ 'ಸ್ಟಾರ್' ನಟಿಯರು, ಮತ್ತೆ ಯಾಕೆ ಬರಲಿಲ್ಲ?
ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಟ್ರೆಂಡ್ ಇದೆ. ಸ್ಟಾರ್ ನಟರ ಚಿತ್ರಗಳಿಗೆ ಪರಭಾಷೆ ತಾರೆಯರನ್ನ ನಾಯಕಿಯನ್ನಾಗಿ ಕರೆತರುವುದು. ಅನುಷ್ಕಾ ಶೆಟ್ಟಿ, ತಮನ್ನಾ, ಸಮಂತಾ, ಕಾಜಲ್, ಶ್ರುತಿ ಹಾಸನ್ ಹೀಗೆ ಇವರೆಲ್ಲ ಸ್ಯಾಂಡಲ್ ವುಡ್ ಗೆ ಬರ್ತಾರೆ ಎಂಬ ಸುದ್ದಿಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತೆ.
ಆದ್ರೆ, ಇದುವರೆಗೂ ಇವರು ಕನ್ನಡಕ್ಕೆ ಬಂದಿಲ್ಲ. ಹಾಗಂತ ಬರಿ ಬಿಲ್ಡಪ್ ಕೊಡ್ತಾರೆ ಯಾವ ಪರಭಾಷೆ ನಟಿಯರು ಬಂದಿಲ್ಲ ಅಂದುಕೊಳ್ಳುವುದು ಬೇಡ. ತುಂಬಾ ಜನ ಬಂದಿದ್ದಾರೆ. ಬಟ್, ಒಂದು ಸಿನಿಮಾ ಮಾಡಿದ್ರೆ, ಅದೇ ಅವರ ಕೊನೆಯ ಚಿತ್ರವೂ ಆಗಿದೆ. ಅದು ಯಾಕೆ ಎಂಬ ಪ್ರಶ್ನೆ ಕಾಡ್ತಿದೆ.
ಕುರುಕ್ಷೇತ್ರ ಮಾತ್ರವಲ್ಲ ಪೈಲ್ವಾನ್ ಗೆ ಎದುರಾಗಲಿವೆ ಮೂರು ದೊಡ್ಡ ಚಿತ್ರಗಳು.!
ಬೇಡಿಕೆ ಇದೆ, ಸಿನಿ ಮಾರುಕಟ್ಟೆಯಲ್ಲಿ ಅವರ ಹವಾ ಇದೆ. ಪರಭಾಷೆಯಲ್ಲಿ ನಾನ್ ಸ್ಟಾಪ್ ನಟಿಸುತ್ತಿದ್ದಾರೆ. ಹೀಗಿದ್ದರೂ ಕನ್ನಡದಲ್ಲಿ ಒಂದೊಂದೇ ಚಿತ್ರಕ್ಕೆ ಸುಸ್ತಾದರು ಯಾಕೆ? ನಮ್ಮ ಇಂಡಸ್ಟ್ರಿಯಲ್ಲಿ ಆಫರ್ ಇಲ್ಲದಂತಾಯಿತಾ ಅಥವಾ ಒಂದು ಸಿನಿಮಾ ಮಾಡಿ ಬೇಡಪ್ಪಾ ಸ್ಯಾಂಡಲ್ ವುಡ್ ಸಹವಾಸ ಅಂದ್ರಾ? ಅಷ್ಟಕ್ಕೂ, ಒಂದೊಂದೆ ಸಿನಿಮಾ ಮಾಡಿ ಕನ್ನಡದಿಂದ ದೂರ ಉಳಿದ ನಟಿಯರು ಯಾರು? ಮುಂದೆ ಓದಿ.....

ಕೃಷ್ಣ ಸುಂದರಿ ತ್ರಿಷಾ
ಸೌತ್ ಇಂಡಿಯಾದ ಆಲ್ ಟೈಂ ಬ್ಯೂಟಿ ನಟಿ ತ್ರಿಷಾ. ವಯಸ್ಸು 36 ಆದರೂ ಈಗಲೂ ತ್ರಿಷಾ ಯಾವ ನಟಿಯರಿಗೂ ಕಮ್ಮಿ ಇಲ್ಲ ಎಂಬಂತೆ ನಟಿಸುತ್ತಿದ್ದಾರೆ. ಇಂತಹ ತ್ರಿಷಾ 2014ರಲ್ಲಿ ಪುನೀತ್ ರಾಜ್ ಕುಮಾರ್ ಜೊತೆ 'ಪವರ್ ಸ್ಟಾರ್' ಎಂಬ ಸಿನಿಮಾ ಮಾಡಿದರು. ಅದಾದ 5 ವರ್ಷ ಆಯ್ತು. ರಜನಿಕಾಂತ್, ಬಾಲಕೃಷ್ಣ, ಅಜಿತ್ ಅಂತವರ ಜೊತೆ ನಟಿಸಿದರು. ಆದ್ರೆ, ಮತ್ತೆ ಕನ್ನಡದಲ್ಲಿ ನಟಿಸುವ ಸೂಚನೆ ಸಿಕ್ಕಿಲ್ಲ.

ಅಪ್ಪು ಜೋಡಿ ಅದಾ ಶರ್ಮಾ
ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಅದಾ ಶರ್ಮಾ 2015ರಲ್ಲಿ ರಣವಿಕ್ರಮ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಪುನೀತ್ ನಾಯಕನಾಗಿದ್ದ ಈ ಚಿತ್ರದ ಬಳಿಕ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿಲ್ಲ ಅದಾ ಶರ್ಮಾ. ಉಳಿದ ಎಲ್ಲ ಭಾಷೆಯಲ್ಲು ಅದಾ ಬ್ಯುಸಿಯಾಗಿದ್ದಾರೆ.
ಯಶಸ್ಸಿನಲ್ಲಿರುವಾಗಲೇ ಸೀರಿಯಲ್ ಬಿಟ್ಟು ಹೋದ ಸ್ಟಾರ್ ಕಲಾವಿದರಿವರು.!

ದೀಕ್ಷಾ ಸೇಠ್ ಬೇಡಿಕೆನೂ ಇಲ್ಲ
ವೇದಂ, ವಾಂಟೆಡ್, ನಿಪ್ಪು, ರೆಬೆಲ್ ಅಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ದೀಕ್ಷಾ ಸೇಠ್ 2016ರಲ್ಲಿ ಜಗ್ಗುದಾದ ಸಿನಿಮಾ ಮೂಲಕ ಕನ್ನಡಕ್ಕೆ ಬಂದರು. ಆಮೇಲೆ ಮತ್ತೆ ಯಾವ ಕನ್ನಡ ಸಿನಿಮಾದಲ್ಲೂ ಈಕೆಯ ಹೆಸರು ಕೇಳಿಸಿಲ್ಲ. ಇದಾದ ಬಳಿಕ ಬೇರೆ ಯಾವ ಭಾಷೆಯಲ್ಲು ದೀಕ್ಷಾ ಸಿನಿಮಾ ಮಾಡದೆ ಇರುವುದು ಅಚ್ಚರಿ.

ಅಮಲಾ ಪೌಲ್
ಸೌತ್ ಇಂಡಿಯಾದ ಯಶಸ್ವಿ ನಾಯಕಿಯರಲ್ಲಿ ಅಮಲಾ ಪೌಲ್ ಕೂಡ ಪ್ರಮುಖರು. ಸದ್ಯ ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿ. ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾ ಮೂಲಕ ಕನ್ನಡ ಬಂದ ಅಮಲಾಗೆ, ಈ ಚಿತ್ರದ ಬಳಿಕ ಕನ್ನಡದಲ್ಲಿ ಹೆಚ್ಚು ಆಫರ್ ಸಿಗುತ್ತಾ ಎಂಬ ನಿರೀಕ್ಷೆ ಇತ್ತು. ಆದರೆ, ಸ್ಯಾಂಡಲ್ ವುಡ್ ಕಡೆ ಮತ್ತೆ ಮುಖ ಮಾಡಿಲ್ಲ.
ಡಿ ಬಾಸ್ ಬಳಿ ಮನವಿ ಮಾಡಿಕೊಂಡ ಭಾರತೀಯ ಥ್ರೋಬಾಲ್ ತಂಡದ ನಾಯಕಿ

ಊರ್ವಶಿ ರೌಟೇಲಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಅದೃಷ್ಟ ಖುಲಾಯಿಸಿಕೊಂಡ ಊರ್ವಶಿ ರೌಟೆಲಾ ಈಗ ಬಾಲಿವುಡ್ ಟಾಪ್ ನಟಿ. ಹೇಟ್ ಸ್ಟೋರಿ, ಕಾಬಿಲ್, ಗ್ರೇಟ್ ಗ್ರ್ಯಾಂಡ್ ಮಸ್ತಿ ಅಂತಹ ಸಿನಿಮಾ ಮಾಡಿದ, ಊರ್ವಶಿ ಮತ್ತೆ ಸ್ಯಾಂಡಲ್ ವುಡ್ ಗೆ ಬರಲೇ ಇಲ್ಲ.

ಕಾರ್ತಿಕಾ ನಾಯರ್
ಮಾಡಿದ್ದು ಕಡಿಮೆ ಸಿನಿಮಾ ಆದರೂ ಎಲ್ಲವೂ ಹಿಟ್ ಚಿತ್ರಗಳೇ ಆಗಿತ್ತು. ಜೋಶ್, ಕೋ, ಧಮ್ಮು ಅಂತಹ ಸಿನಿಮಾ ಮಾಡಿದ್ದ ಕಾರ್ತಿಕಾ, ಕನ್ನಡದಲ್ಲಿ ಬೃಂದಾವನ ಸಿನಿಮಾ ಮಾಡಿದರು. ದರ್ಶನ್ ಜೊತೆ ನಾಯಕಿಯಾಗಿ ನಟಿಸಿ ಗಮನ ಸೆಳೆದ ಕಾರ್ತಿಕಾ, 6 ವರ್ಷವಾದರೂ ಮತ್ತೆ ಕನ್ನಡ ಸಿನಿಮಾ ಮಾಡಿಲ್ಲ.

ಸೌತ್ ಸೂಪರ್ ಸ್ಟಾರ್ ನಟಿ
ಸದ್ಯ ಸೌತ್ ಸೂಪರ್ ಸ್ಟಾರ್ ನಟಿ ಎಂದೇ ಗುರುತಿಸಿಕೊಂಡಿರುವ ನಯನತಾರ ಕನ್ನಡದಲ್ಲಿ ಮಾಡಿದ್ದು ಒಂದೇ ಸಿನಿಮಾ. 2010ರಲ್ಲು ಉಪೇಂದ್ರ ನಿರ್ದೇಶನದ ಸೂಪರ್ ಸಿನಿಮಾ. ಈ ಹತ್ತು ವರ್ಷದಲ್ಲಿ ನಯನತಾರ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಆದರೆ, ಮತ್ತೆ ಕನ್ನಡದಲ್ಲಿ ಸಿನಿಮಾ ಮಾಡುವ ಮನಸ್ಸು ಮಾಡೇ ಇಲ್ಲ. ಈ ಎಲ್ಲ ನಟಿಯರು ಪರಭಾಷೆಯ ಸಕ್ಸಸ್ ನಟಿಯರು. ಆದ್ರೆ, ಕನ್ನಡದಲ್ಲಿ ನಟಿಸಿದ್ದು ಮಾತ್ರ ಒಂದೊಂದೆ ಸಿನಿಮಾಗಳು. ಯಾಕೆ ಎಂದು ಇಂಡಸ್ಟ್ರಿಯ ನಿರ್ಮಾಪಕರೇ ಹೇಳಬೇಕು.