For Quick Alerts
  ALLOW NOTIFICATIONS  
  For Daily Alerts

  ಹಳ್ಳಿ ಮಹಿಳೆಯರು ಏಕೆ ಕುಡಿಯುತ್ತಾರೆ? ಶ್ರುತಿ ಹಾಸನ್ ಕೊಟ್ಟರು ಕಾರಣ

  |

  ಮಹಿಳೆಯರಲ್ಲಿ ಕುಡಿತ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು ಆತಂಕ ಹೆಚ್ಚು ಮಾಡಿದೆ. ನಗರ, ಮೆಟ್ರೋ ಸಿಟಿಗಳಲ್ಲಿಯಂತೂ ಕುಡಿತಕ್ಕೆ ಲಿಂಗ ತಾರತಮ್ಯದ ಗಡಿ ಅಳಿಸಿ ಹೋಗಿದೆ.

  ಆದರೆ ಗ್ರಾಮೀಣ ಭಾಗದಲ್ಲಿ ಈ ವ್ಯಾಧಿ ಅಷ್ಟಾಗಿ ವ್ಯಾಪಿಸಿಲ್ಲ. 'ಎಣ್ಣೆ' ಎಂಬ ಅನಿಷ್ಟ ಇನ್ನೂ ಪುರುಷರ ಕೈಯಲ್ಲಿಯೇ ಇದೆ. ಆದರೆ ಇತ್ತೀಚೆಗೆ ಅಲ್ಲಿಯೂ ಬದಲಾವಣೆ ಆಗುತ್ತಿದೆ.

  ಗ್ರಾಮೀಣ ಭಾಗದಲ್ಲಿಯೂ ಸಹ ಮಹಿಳೆಯರಿಗೆ ನಿಧಾನಕ್ಕೆ ಈ ಚಟ ವ್ಯಾಪಿಸುತ್ತಿದೆ. ಆದರೆ ಗ್ರಾಮೀಣ ಭಾಗದ ಮಹಿಳೆಯರು ಏಕೆ ಕುಡಿಯುತ್ತಾರೆ? ಎಂಬ ಪ್ರಶ್ನೆಗೆ ನಟಿ ಶ್ರುತಿ ಹಾಸನ್ ಭಿನ್ನವಾದ 'ಸಂಶೋಧನೆ'ಯನ್ನು ಮುಂದಿಟ್ಟಿದ್ದಾರೆ.

  ಗ್ರಾಮೀಣ ಭಾಗದ ಮಹಿಳೆಯರೇಕೆ ಕುಡಿಯುತ್ತಾರೆ?

  ಗ್ರಾಮೀಣ ಭಾಗದ ಮಹಿಳೆಯರೇಕೆ ಕುಡಿಯುತ್ತಾರೆ?

  ''ಗ್ರಾಮೀಣ ಭಾಗದಲ್ಲಿ ಪತಿಯಂದಿರು ಹೆಂಡತಿಯರನ್ನು ಹೊಡೆಯುತ್ತಾರಂತೆ, ಅದನ್ನು ಸಹಿಸಿಕೊಳ್ಳಲೆಂದು ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕುಡಿಯುತ್ತಾರೆ'' ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

  ವಿಪರೀತ ಕುಡಿಯುತ್ತಿದ್ದರಂತೆ ಶ್ರುತಿ ಹಾಸನ್

  ವಿಪರೀತ ಕುಡಿಯುತ್ತಿದ್ದರಂತೆ ಶ್ರುತಿ ಹಾಸನ್

  ಶ್ರುತಿ ಹಾಸನ್ ಸಹ ಕೆಲವು ತಿಂಗಳುಗಳ ಹಿಂದೆ ವಿಪರೀತವಾಗಿ ಕುಡಿಯುತ್ತಿದ್ದರಂತೆ, ಆದರೆ ಅದರಿಂದ ಆರೋಗ್ಯ ಸಮಸ್ಯೆಗಳು ಉಂಟಾದ ಕಾರಣ ಕುಡಿತ ಬಿಟ್ಟುಬಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿಯೇ ಇದರ ಸಂಬಂಧಿತ ಪ್ರಶ್ನೆಗಳೇ ಅವರಿಗೆ ಹೆಚ್ಚಾಗಿ ಕೇಳಿಬರುತ್ತವೆ.

  ಕುಡಿತ ಬಿಟ್ಟ ಮೇಲೆ ಜೀವನ ಚೆನ್ನಾಗಿದೆ: ಶ್ರುತಿ ಹಾಸನ್

  ಕುಡಿತ ಬಿಟ್ಟ ಮೇಲೆ ಜೀವನ ಚೆನ್ನಾಗಿದೆ: ಶ್ರುತಿ ಹಾಸನ್

  ''ನಾನು ತುಂಬಾ ಕುಡಿಯುತ್ತಿದ್ದೆ, ಗೆಳೆಯರೊಂದಿಗೆ ಸೇರಿ ಇಡೀ ರಾತ್ರಿ ಪಾರ್ಟಿ ಮಾಡಿ ಕುಡಿದಿದ್ದೂ ಇದೆ. ಆದರೆ ಈಗ ಕುಡಿತ ಬಿಟ್ಟಮೇಲೆ ನನ್ನ ಜೀವನ ಹೆಚ್ಚು ಸುಂದರವಾಗಿದೆ'' ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.

  ಎರಡು ಸಿನಿಮಾಗಳು ಕೈಯಲ್ಲಿವೆ

  ಎರಡು ಸಿನಿಮಾಗಳು ಕೈಯಲ್ಲಿವೆ

  ಕಮಲ್‌ಹಾಸನ್ ಪುತ್ರಿ ಶ್ರುತಿ ಹಾಸನ್ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು, ಪ್ರಸ್ತು ಕ್ರಕ್ ಮತ್ತು ಲಾಭಂ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಶ್ರುತಿ ಹಾಸನ್ ತಂಗಿ ಅಕ್ಷರಾ ಹಾಸನ್ ಸಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Shruti Hassan said that village women use to drink alcohol because husband beat them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X