For Quick Alerts
  ALLOW NOTIFICATIONS  
  For Daily Alerts

  ದರ್ಶನ್, ಸುದೀಪ್ ಹುಟ್ಟುಹಬ್ಬಕ್ಕೆ ಯಾಕೆ ಟ್ವಿಟರ್ ಮೂಲಕ ವಿಶ್ ಮಾಡಲ್ಲ? ಯಶ್ ಕೊಟ್ರು ಉತ್ತರ

  |

  ಯಶ್ ಸದ್ಯ ಕನ್ನಡ ಮಾತ್ರವಲ್ಲದೇ ಇಡೀ ದೇಶಾದ್ಯಂತ ಹೆಸರು ಮಾಡಿರುವ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ಕೆಜಿಎಫ್ ಸಿನಿಮಾ ಸರಣಿ ಮೂಲಕ ಬೃಹತ್ ಹೆಸರು ಮಾಡಿರುವ ಯಶ್ ಬಹು ಬೇಡಿಕೆಯ ನಟ. ಯಶಸ್ಸಿನ ಉತ್ತುಂಗದಲ್ಲಿರುವ ಯಶ್ ಕಾಲ್ ಶೀಟ್‌ಗಾಗಿ ಟಾಲಿವುಡ್ ಹಾಗೂ ಬಾಲಿವುಡ್ ನಿರ್ಮಾಪಕರೂ ಸಹ ಕಾಯುತ್ತಿರುವುದು ಸುಳ್ಳಲ್ಲ. ಹೀಗೆ ಸಿಕ್ಕಾಪಟ್ಟೆ ಸಕ್ಸಸ್ ಕಂಡಿರುವ ಯಶ್ ಅವರನ್ನು ನಿನ್ನೆಯಷ್ಟೇ ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ಎನ್‌ಕ್ಲೇವ್ ಕಾರ್ಯಕ್ರಮಕ್ಕೆ ಆಹ್ವಾನಿಸಿ ಕರೆಸಲಾಗಿತ್ತು.

  ಈ ಕಾರ್ಯಕ್ರಮದಲ್ಲಿ ಯಶ್ ಅವರನ್ನು ಸಂದರ್ಶನ ಮಾಡಿದ ರಾಜ್‌ದೀಪ್ ಸರ್ ದೇಸಾಯಿ ಹಲವಾರು ಪ್ರಶ್ನೆಗಳನ್ನು ಕೇಳಿದರು ಹಾಗೂ ಇದಕ್ಕೆ ಯಶ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಸಿನಿಮಾ, ಯಶ್ ಬೆಳವಣಿಗೆ, ಕನ್ನಡ ಚಿತ್ರರಂಗದ ಮಾರ್ಕೆಟ್ ವೃದ್ಧಿಗೊಂಡಿದ್ದು ಹೇಗೆ ಎಂಬುದರ ಕುರಿತು ಹಾಗೂ ರಾಜಕೀಯದ ವಿಷಯಗಳ ಕುರಿತು ಈ ಬೃಹತ್ ವೇದಿಕೆಯಲ್ಲಿ ಚರ್ಚೆಗಳು ನಡೆದವು.

  'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!

  ಚಿತ್ರ ಗೆಲ್ಲಬೇಕೆಂದರೆ ಕಂಟೆಂಟ್ ಮುಖ್ಯ, ಕನ್ನಡ ಚಿತ್ರರಂಗ ಹಿಂದಿನಿಂದಲೂ ಒಳ್ಳೆಯ ಹೆಸರನ್ನು ಹೊಂದಿದೆ ಎಂಬ ಉತ್ತರಗಳನ್ನು ನೀಡುವುದರ ಮೂಲಕ ವೀಕ್ಷಕರ ಮನಗೆದ್ದ ಯಶ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದರ ಕುರಿತು ಸಹ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಾವು ಯಾರಿಗೂ ಸಹ ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಹುಟ್ಟುಹಬ್ಬದ ಶುಭ ಕೋರದೇ ಇರಲು ಕಾರಣವೇನೆಂಬುದನ್ನೂ ಬಿಚ್ಚಿಟ್ಟರು..

   ಶುಭ ಕೋರುವುದರಿಂದ ದೂರ ಉಳಿಯುತ್ತೇನೆ

  ಶುಭ ಕೋರುವುದರಿಂದ ದೂರ ಉಳಿಯುತ್ತೇನೆ

  "ನಾನು ಯಾರಿಗೂ ಸಹ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಲು ಇಚ್ಛಿಸುವುದಿಲ್ಲ. ಏಕೆಂದರೆ ಒಬ್ಬ ಸ್ನೇಹಿತನಿಗೆ ವಿಶ್ ಮಾಡಿ ಮತ್ತೊಬ್ಬ ಸ್ನೇಹಿತನಿಗೆ ವಿಶ್ ಮಾಡುವುದನ್ನು ಮರೆತು ಹೋದರೆ ಆತ ಅನ್ಯಥಾ ಭಾವಿಸಬಹುದು. ಹೀಗಾಗಿಯೇ ನಾನು ಯಾರಿಗೂ ಸಹ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುವುದಿಲ್ಲ, ಅದರಿಂದ ತುಸು ದೂರ ಉಳಿಯುತ್ತೇನೆ" ಎಂದು ಯಶ್ ಹೇಳಿಕೆ ನೀಡಿದರು.

   ಕರೆ ಮಾಡಿ ವಿಶ್ ಮಾಡುತ್ತೇನೆ

  ಕರೆ ಮಾಡಿ ವಿಶ್ ಮಾಡುತ್ತೇನೆ

  ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಯಾರಿಗೂ ಸಹ ಶುಭ ಕೋರುವುದಿಲ್ಲ ಎಂದ ಯಶ್ "ಅಂತಹ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ಹುಟ್ಟು ಹಬ್ಬವಿದ್ದರೆ ಕರೆ ಮಾಡುವ ಮೂಲಕ ಸ್ವತಃ ನಾನೇ ವಿಶ್ ಮಾಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ವೈಯಕ್ತಿಕ ಜೀವನ ಹಾಗೂ ನನ್ನ ಚಿತ್ರಗಳ ಬಗ್ಗೆ ಮಾತ್ರ ಆಗಾಗ ಪೋಸ್ಟ್ ಮಾಡುತ್ತಿರುತ್ತೇನೆ ಅಷ್ಟೇ" ಎಂದು ತಿಳಿಸಿದರು.

   ಯಶ್ ಯಾರಿಗೂ ವಿಷ್ ಮಾಡುವುದಿಲ್ಲ ಎಂಬ ಗಂಭೀರ ಆರೋಪ ಇತ್ತು, ಟ್ರೋಲ್ ಕೂಡ ಇತ್ತು

  ಯಶ್ ಯಾರಿಗೂ ವಿಷ್ ಮಾಡುವುದಿಲ್ಲ ಎಂಬ ಗಂಭೀರ ಆರೋಪ ಇತ್ತು, ಟ್ರೋಲ್ ಕೂಡ ಇತ್ತು

  ಇನ್ನು ಯಶ್ ಇಂಡಿಯಾ ಎನ್ ಕ್ಲೇವ್ ವೇದಿಕೆಯಲ್ಲಿ ಮಾತನಾಡಿದ ಈ ವಿಷಯದ ಕುರಿತಾಗಿ ಈ ಹಿಂದೆ ಯಶ್ ವಿರುದ್ಧ ಸಾಕಷ್ಟು ಟ್ರೋಲ್ ನಡೆದಿತ್ತು. ಯಶ್ ಯಾರಿಗೂ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುವುದಿಲ್ಲ, ಓರ್ವ ದೊಡ್ಡ ನಟನಾಗಿ ಇನ್ನೊಬ್ಬ ನಟನ ಕುರಿತು ಪೋಸ್ಟ್ ಮಾಡುವುದಿಲ್ಲ, ಅದರಲ್ಲಿಯೂ ದರ್ಶನ್ ಹಾಗೂ ಸುದೀಪ್ ಹುಟ್ಟುಹಬ್ಬದಂದು ಯಶ್ ಟ್ವೀಟ್ ಮಾಡುವುದಿಲ್ಲ ಎಂಬ ಗಂಭೀರ ಆರೋಪವಿತ್ತು. ಸದ್ಯ ಯಶ್ ಅವರು ಸ್ನೇಹಿತರಿಗೆ ಹುಟ್ಟುಹಬ್ಬದ ಶುಭಾಶಯ ಕೋರಬೇಕೆಂದರೆ ಕರೆ ಮಾಡುತ್ತೇನೆ ಹೊರತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಿಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಈ ಎಲ್ಲಾ ಟೀಕೆಗಳಿಗೂ ಉತ್ತರ ನೀಡಿದ್ದಾರೆ.

  English summary
  Why Yash won't wish Darshan & Suddep on their birthdays via twitter? Reason revealed. Read on
  Sunday, November 6, 2022, 15:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X