»   » ಅನುಶ್ರೀ-ಚಿಕ್ಕಣ್ಣ ಬಗ್ಗೆ ಹಬ್ಬಿರುವ 'ಮದುವೆ' ಗಾಸಿಪ್ ನಿಜವೇ.?

ಅನುಶ್ರೀ-ಚಿಕ್ಕಣ್ಣ ಬಗ್ಗೆ ಹಬ್ಬಿರುವ 'ಮದುವೆ' ಗಾಸಿಪ್ ನಿಜವೇ.?

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯಲ್ಲಿ ರಿಯಾಲಿಟಿ ಶೋಗಳನ್ನ ಆಂಕರಿಂಗ್ ಮಾಡುವಲ್ಲಿ ಅನುಶ್ರೀ ಬಿಜಿಯಾಗಿದ್ದಾರೆ. ಇನ್ನೂ ಕಾಮಿಡಿ ಸ್ಟಾರ್ ಚಿಕ್ಕಣ್ಣ ರವರಿಗೂ ಪುರುಸೊತ್ತು ಇಲ್ಲ. ಹೀಗಿರುವಾಗಲೇ ಇಬ್ಬರ ಬಗ್ಗೆ ಗಾಂಧಿನಗರದಲ್ಲಿ ಗುಸು ಗುಸು ಹಬ್ಬಿದೆ.

ಆ ಗುಸು ಗುಸು ಕೇಳಿ ಕೆಲವರು ಬಾಯಿ ಮೇಲೆ ಬೆರಳು ಇಟ್ಕೊಂಡಿದ್ರೆ, ಹಲವರು ಕಣ್ಣರಳಿಸಿದ್ದಾರೆ. 'ಆ' ಗುಸು ಗುಸು... ಪಿಸು ಪಿಸು ಕುರಿತು ಪರಿಪೂರ್ಣ ವರದಿ ಇಲ್ಲಿದೆ. ಓದಿರಿ....

ಗುಸು ಗುಸು ಏನು.?

ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?''ಕಾಮಿಡಿ ಸ್ಟಾರ್ ಚಿಕ್ಕಣ್ಣ ರವರನ್ನ ಆಂಕರ್ ಕಮ್ ನಟಿ ಅನುಶ್ರೀ ಮದುವೆ ಆಗುತ್ತಾರೆ'' ಎಂಬ ಸುದ್ದಿ ಸದ್ಯ ಗಾಂಧಿನಗರದ ಗಲ್ಲಿಗಳಲ್ಲಿ ಹಾಟ್ ಟಾಪಿಕ್ ಆಗಿದೆ.![ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?]

ಸುಮ್ ಸುಮ್ನೆ ಹಬ್ಬಿದ ಸುದ್ದಿ ಅಲ್ಲ.!

ಆನುಶ್ರೀ ಆಂಕರಿಂಗ್ ಮಾಡುತ್ತಿದ್ದ ಈವೆಂಟ್ ಒಂದರ ವೇದಿಕೆ ಮೇಲೆ 'ಮದುವೆ ಆಗುವಂತೆ' ಚಿಕ್ಕಣ್ಣ ಪ್ರಪೋಸ್ ಮಾಡಿದ್ದರು. ಅದನ್ನ ಜಸ್ಟ್ ತಮಾಷೆ ಆಗಿ ಪರಿಗಣಿಸದೆ, ಸೀರಿಯಸ್ ಆಗಿ ತೆಗೆದುಕೊಂಡ ಕೆಲವರು 'ಅನುಶ್ರೀ ಹಾಗೂ ಚಿಕ್ಕಣ್ಣ ಮದುವೆ ಆಗಲಿದ್ದಾರೆ' ಎಂಬ ಸುದ್ದಿ ಹಬ್ಬಿಸಿದ್ದಾರೆ ಅಷ್ಟೆ.[ಮಾದ-ಮಾನಸಿ ಜೊತೆ 'ಬಿಗ್ ಬಾಸ್' ಅನುಶ್ರೀ ಟಪ್ಪಾಂಗುಚ್ಚಿ]

ವಿಷಯ ಕೇಳಿ ನಕ್ಕ ಅನುಶ್ರೀ.!

ಅಂದ್ಹಾಗೆ, ಈಗಾಗಲೇ ಈ ಸುದ್ದಿ ಅನುಶ್ರೀ ಕಿವಿಗೂ ಬಿದ್ದಿದೆ. ಅದನ್ನ ಕೇಳಿ ಅನುಶ್ರೀ ಕಿಲ ಕಿಲ ಅಂತ ನಕ್ಕು ಸುಮ್ಮನಾಗಿದ್ದಾರೆ.

ಅನುಶ್ರೀ ಕಾಮಿಡಿ ನಿಮಗೆ ಗೊತ್ತಲ್ಲ.!

ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರನ್ನ ಮದುವೆ ಆಗುವಂತೆ ಅನುಶ್ರೀ 'ಕಾಮಿಡಿ' ಮಾಡುವುದನ್ನು ನೀವು ನೋಡಿದ್ದೀರಾ ಅಲ್ವಾ.? ಸೇಮ್ ಟು ಸೇಮ್ ಅದೇ ರೀತಿ ಚಿಕ್ಕಣ್ಣ ತಮಷೆ ಮಾಡಿದ್ದರು ಅಷ್ಟೆ.

ಅದಕ್ಕೆ ಸುದೀಪ್ ಸಾಕ್ಷಿ

ಸಿನಿಮಾ ಕಾರ್ಯಕ್ರಮ ಒಂದರ ಈವೆಂಟ್ ನಲ್ಲಿ ವೇದಿಕೆ ಮೇಲೆ ಚಿಕ್ಕಣ್ಣ ರವರಿಗೆ ಸುದೀಪ್ ''ಹುಡುಗಿಗೆ ಹೇಗೆ ಪ್ರಪೋಸ್ ಮಾಡ್ತೀಯಾ, ತೋರಿಸು'' ಎಂದರು. ಆಗ ಅಲ್ಲೇ ವೇದಿಕೆ ಮೇಲಿದ್ದ ಅನುಶ್ರೀಗೆ ಚಿಕ್ಕಣ್ಣ ಪ್ರಪೋಸ್ ಮಾಡಿ ತೋರಿಸಿದರು. ಅಲ್ಲಿಂದಲೇ ಈ ಗುಸು ಗುಸು ಶುರು ಆಗಿದ್ದು.

ನಮ್ಮಿಬ್ಬರ ನಡುವೆ ಏನಿಲ್ಲ.!

''ಆಗಿದೆಲ್ಲವೂ ಕಾಮಿಡಿ ಅಷ್ಟೆ. ನಮ್ಮಿಬ್ಬರ ನಡುವೆ ಏನಿಲ್ಲ. ಚಿಕ್ಕಣ್ಣ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ'' ಎನ್ನುತ್ತಾರೆ ನಟಿ ಅನುಶ್ರೀ.

English summary
Will Anchor Anushree marry Comedy Actor Chikkanna.? Read the Article to know the Answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada