»   » 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಜೊತೆ ಅರ್ಜುನ್ ಸರ್ಜಾ ನಟನೆ..?

'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಜೊತೆ ಅರ್ಜುನ್ ಸರ್ಜಾ ನಟನೆ..?

Posted By:
Subscribe to Filmibeat Kannada

ನಟ ದರ್ಶನ್ ಅವರ 50ನೇ ಸಿನಿಮಾವಾಗಿರುವ 'ಕುರುಕ್ಷೇತ್ರ' ದಿನೇ ದಿನೇ ಸುದ್ದಿ ಮಾಡುತ್ತಲೇ ಇದೆ. ಸಿನಿಮಾದ ಮುಹೂರ್ತದ ದಿನ ಹತ್ತಿರ ಬರುತ್ತಿದ್ದ ಹಾಗೆ ಚಿತ್ರಕ್ಕೆ ಒಬ್ಬೊಬ್ಬರೆ ನಟರು ಸೇರಿಕೊಳ್ಳುತ್ತಿದ್ದಾರೆ.

'ಕುರುಕ್ಷೇತ್ರ'ದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಪಾತ್ರವೇನು?

ಇದೀಗ 'ಕುರುಕ್ಷೇತ್ರ' ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಮತ್ತು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಹೆಸರು ಕೇಳಿ ಬರುತ್ತಿದೆ. ಸಿನಿಮಾದ ಎರಡು ಮುಖ್ಯ ಪಾತ್ರಗಳಿಗಾಗಿ ಚಿತ್ರತಂಡ ಈ ಇಬ್ಬರು ನಟರನ್ನು ಸಂಪರ್ಕ ಮಾಡಿದೆಯಂತೆ. ಸದ್ಯ ಈ ವಿಷಯ ಮಾತುಕತೆ ಹಂತದಲ್ಲಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ

Will Arjun Sarja and Vivek Oberoi be the part of 'Kurukshetra' Movie?

ಅಂದಹಾಗೆ, 'ಕುರುಕ್ಷೇತ್ರ' ಸಿನಿಮಾದ ಮುಹೂರ್ತ ಇದೇ ಜುಲೈ 31 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡುತ್ತಿದ್ದು, ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್, ರವಿಚಂದ್ರನ್, ಸಾಯಿಕುಮಾರ್, ನಿಖಿಲ್ ಕುಮಾರ್, ಹರಿಪ್ರಿಯಾ, ಲಕ್ಷ್ಮಿ, ಸ್ನೇಹಾ, ಸೇರಿದಂತೆ ಹಲವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

English summary
Director Naganna approached Bollywood actor Vivek Oberoi and Tamil star Arjun Sarja to act in his 'Kurukshetra' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada