»   » 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಬರುತ್ತಾ?

'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಬರುತ್ತಾ?

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸೂಪರ್ ಹಿಟ್ ಆಗಿದ್ದೇ ತಡ, ಚಿತ್ರದಲ್ಲಿದ್ದ ಎಲ್ಲಾ ಪ್ರತಿಭೆಗಳಿಗೂ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ಲಭಿಸಿತು. ನಿರ್ದೇಶಕ ಸುನಿ ಬಗ್ಗೆ ಭರವಸೆ, ನಿರೀಕ್ಷೆಗಳೂ ಹೆಚ್ಚಾದ್ವು.

''ಪ್ರಯೋಗಕ್ಕೆ ಸಾವಿದೆ, ಪ್ರಯತ್ನಕ್ಕಲ್ಲ'' ಅನ್ನುವ ಮಾತನ್ನ ನಂಬುವ ಸುನಿ, 'ಬಹುಪರಾಕ್' ಮತ್ತು 'ಉಳಿದವರು ಕಂಡಂತೆ'ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನ ನೀಡಿದರು. ಇದ್ರಿಂದ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಕೊಂಚ ಎಡವಿದಂತೆ ಕಾಣುವ ಸುನಿ, ಸದ್ಯ ಬಹು ಜಾಗೃತಿಯಿಂದ ಹೆಜ್ಜೆ ಇಡುತ್ತಿದ್ದಾರೆ.

Simpallag Innond Love story1

ಕೈಯಲ್ಲಿ ಶಿವಣ್ಣನ 'ಮನಮೋಹಕ' ಸೇರಿದಂತೆ ಎರಡು ಮೂರು ಪ್ರಾಜೆಕ್ಟ್ ಗಳನ್ನಿಟ್ಟುಕೊಂಡಿದ್ದರೂ, ಸುನಿ ಯಾವುದಕ್ಕೂ ಚಾಲನೆ ನೀಡಿಲ್ಲ. ಧೃವ ಸರ್ಜಾ ನಟನೆಯಲ್ಲಿ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಬೇಕಾಗಿದ್ದರೂ, ಅದನ್ನ ಇನ್ನೂ ಪಕ್ಕಾ ಮಾಡಿಲ್ಲ. ['ಮನಮೋಹಕ' ಶಿವಣ್ಣ ಅಡ್ರೆಸ್ ಗೆ ಇಲ್ವಲ್ಲಾ? ಏನಾಯ್ತು]

ಹೀಗಿರುವಾಗಲೇ ಗಾಂಧಿನಗರದ ಅಡ್ಡದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದ ತಯಾರಿಯಲ್ಲಿ ಸುನಿ ಮುಳುಗಿದ್ದಾರೆ ಅಂತ.

Simpallag Innond Love story4

ಅಸಲಿಗೆ ಸುನಿ, 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಸೀಕ್ವೆಲ್ ಮಾಡುತ್ತಾರೆ ಅನ್ನುವ ಸುದ್ದಿ ಹಳೆಯದ್ದೇ. ಆದ್ರೆ, ಅದು ಇನ್ನೆರಡು ವರ್ಷಗಳ ನಂತ್ರ ತೆರೆಮೇಲೆ ಬರಬಹುದು ಅಂತ ಹಿಂದೊಮ್ಮೆ ಸುನಿ ಹೇಳಿದ್ದರು.

ಆದ್ರೀಗ, ಕೈಯಲ್ಲಿರುವ ಪ್ರಾಜೆಕ್ಟ್ ಗಳನ್ನೆಲ್ಲಾ ಬಿಟ್ಟು, ಸುನಿ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಕೈಗೆತ್ತಿಕೊಂಡಿದ್ದಾರಂತೆ. ಹೀರೋಯಿನ್ ಆಗಿ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಬದಲು ಚಾರ್ಮಿನಾರ್ ಬೆಡಗಿ ಮೇಘನಾ ಗಾಂವ್ಕರ್ ನ ಫಿಕ್ಸ್ ಮಾಡಿದ್ದಾರಂತೆ. ಹೀರೋ ಕೂಡ ಚಿತ್ರರಂಗದ ಚಿರಪರಿಚಿತ ಮುಖ ಅನ್ನುವ ಖಾಸ್ ಖಬರ್ ಹೊರಬಿದ್ದಿದೆ.

Simpallag Innond Love story3

ಇದು ಎಷ್ಟರಮಟ್ಟಿಗೆ ನಿಜ ಅಂತ ಖುದ್ದು ಸುನಿ ಬಳಿ ಕೇಳಿದಾಗ, ''ಇನ್ನೂ ಯಾವ್ದೂ ಕನ್ಫರ್ಮ್ ಆಗಿಲ್ಲ, ಎಲ್ಲವೂ ಮಾತುಕತೆ ಹಂತದಲ್ಲಿದೆ. ನನ್ನ ಮುಂದಿನ ಸಿನಿಮಾ ಯಾವ್ದು ಅಂತ ನಾನಿನ್ನೂ ನಿರ್ಧಾರ ಮಾಡಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದರು.

ಸುನಿ ಇನ್ನೂ ಕನ್ಫ್ಯೂಷನ್ ನಲ್ಲಿದ್ದರೂ, ಒಂದು ಮಾತಂತೂ ಸತ್ಯ. ಸುನಿ, ಶಿವಣ್ಣನನ್ನ 'ಮನಮೋಹಕ' ಮಾಡ್ತಾರೆ. 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'ನೂ ತೆರೆಗೆ ತರ್ತಾರೆ. ಡೇಟ್ಸ್ ಗಳು ವ್ಯತ್ಯಾಸ ಆಗಬಹುದು ಅಷ್ಟೆ. (ಫಿಲ್ಮಿಬೀಟ್ ಕನ್ನಡ)

English summary
There is a Buzz doing rounds that Director Suni is getting ready to start Simpallag Innond Love story. There is also a news that Charminar fame Meghana Gaonkar has replaced Shwetha Srivatsav for the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada