For Quick Alerts
  ALLOW NOTIFICATIONS  
  For Daily Alerts

  'ಬ'ಹದ್ದೂರ್ ಚೇತನ್‌ಗೆ 'ಬ'೦ದ ಅದೃಷ್ಟ: ಹ್ಯಾಟ್ರಿಕ್ 'ಬಾ'ರಿಸುತ್ತಾರಾ ಯುವ ನಿರ್ದೇಶಕ?!

  By Harshitha
  |

  'ಬೈಟೇ ಬೈಟೇ...', 'ಬಾಸು ನಮ್ ಬಾಸು...', 'ಐ ವಾನಾ ಸಿಂಗ್ ಎ ಸಾಂಗು...', 'ಆರಾಮಾಗಿರಿ ಸುಬ್ಬಲಕ್ಷ್ಮೀ...' ಸೇರಿದಂತೆ ಅನೇಕ ಸೂಪರ್ ಹಿಟ್ ಸಾಂಗ್ ಗಳಿಗೆ ಸಾಹಿತ್ಯ ಬರೆದಿರುವ ಚೇತನ್ ಕುಮಾರ್ ನೋಡ ನೋಡುತ್ತಲೇ ಡೈರೆಕ್ಟರ್ ಕ್ಯಾಪ್ ತೊಟ್ಟು ಸ್ಯಾಂಡಲ್ ವುಡ್ ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಒಂದು 'ಬಹದ್ದೂರ್'... ಇನ್ನೊಂದು 'ಭರ್ಜರಿ'.

  'ಬಹದ್ದೂರ್' ಹಾಗೂ 'ಭರ್ಜರಿ' ಆದ್ಮೇಲೆ ನಿರ್ದೇಶಕ ಚೇತನ್ ಇದೀಗ 'ಭರಾಟೆ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲ್ ಶೀಟ್ ಪಡೆದಿರುವ ಚೇತನ್ ಔಟ್ ಅಂಡ್ ಔಟ್ ಮಾಸ್ ಮಸಾಲಾ 'ಭರಾಟೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

  'ಬಹದ್ದೂರ್' ಹಾಗೂ 'ಭರ್ಜರಿ' ಹಿಟ್ ಆದಂತೆ 'ಭರಾಟೆ' ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದರೆ ಚೇತನ್ ಕುಮಾರ್ ಗೆ 'ಹ್ಯಾಟ್ರಿಕ್ ಡೈರೆಕ್ಟರ್' ಎಂಬ ಪಟ್ಟ ಸಿಗುವುದು ಖಾತ್ರಿ. ಅದಕ್ಕೂ ಮುನ್ನ ನೀವು ಗಮನಿಸಬೇಕಾಗಿರುವ ಒಂದು ಅಂಶ 'ಬ'.

  'ಬ' ಅಕ್ಷರಕ್ಕೂ ನಿರ್ದೇಶಕ ಚೇತನ್ ಅವರಿಗೂ ಒಂದು ಬಿಡಿಸಲಾಗದ ನಂಟು ಇದೆ. ಕನ್ನಡ ಚಿತ್ರರಂಗಕ್ಕೆ 'ಬ'೦ದು 'ಭಾ'ಗ್ಯದ ಲಕ್ಷ್ಮಿಯನ್ನು ಒಲಿಸಿಕೊಂಡಿರುವ ನಿರ್ದೇಶಕ ಚೇತನ್, ಅದೇ 'ಬ' ಅಕ್ಷರದಿಂದ 'ಬ'ಹು 'ಬೇ'ಡಿಕೆಯ ಡೈರೆಕ್ಟರ್ ಆದರೂ ಅಚ್ಚರಿ ಇಲ್ಲ.! ಮುಂದೆ ಓದಿರಿ...

  'ಬ', 'ಭ' ಮತ್ತು 'ಭ'

  'ಬ', 'ಭ' ಮತ್ತು 'ಭ'

  ಈಗಾಗಲೇ ನಿರ್ದೇಶಕ ಚೇತನ್ ಡೈರೆಕ್ಟ್ ಮಾಡಿರುವ ಎರಡೂ ಚಿತ್ರಗಳ ಶೀರ್ಷಿಕೆ ಶುರುವಾಗುವುದು 'ಬ' ಅಕ್ಷರದಿಂದ. ಅದೃಷ್ಟ ಹಾಗೂ ಪರಿಶ್ರಮದಿಂದ 'ಬಹದ್ದೂರ್' ಹಾಗೂ 'ಭರ್ಜರಿ'... ಎರಡೂ ಸೂಪರ್ ಹಿಟ್ ಆದವು. ಈಗ ನಿರ್ದೇಶಕ ಚೇತನ್ ಆಕ್ಷನ್ ಕಟ್ ಹೇಳುತ್ತಿರುವ ಮೂರನೇ ಚಿತ್ರದ ಟೈಟಲ್ ಕೂಡ ಶುರುವಾಗುವುದು 'ಭ' ಅಕ್ಷರದಿಂದಲೇ... 'ಭರಾಟೆ'.! ಅಲ್ಲಿಗೆ, ಮೂರನೇ ಚಿತ್ರದಲ್ಲೂ ಅದೃಷ್ಟ 'ಬ'ರುತ್ತೆ ಅಂದುಕೊಳ್ಳಬಹುದಾ.?!

  ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ

  ಚೇತನ್ ವೃತ್ತಿ ಬದುಕಿಗೆ ತಿರುವು ಕೊಟ್ಟಿದ್ದು 'ಬ'.!

  ಚೇತನ್ ವೃತ್ತಿ ಬದುಕಿಗೆ ತಿರುವು ಕೊಟ್ಟಿದ್ದು 'ಬ'.!

  ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ನಿರ್ದೇಶಕ ತುಷಾರ್ ರಂಗನಾಥ್ ಬಳಿ ಸ್ಕ್ರಿಪ್ಟ್ ರೈಟರ್ ಆಗಿದ್ದ ಚೇತನ್ ವೃತ್ತಿ ಬದುಕಿಗೆ ಹೊಸ ತಿರುವು ನೀಡಿದವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಕಿಚ್ಚ ಸುದೀಪ್ ಅಭಿನಯದ 'ವರದನಾಯಕ' ಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆಯುವಂತೆ ಚೇತನ್ ಗೆ ಅರ್ಜುನ್ ಜನ್ಯ ಸೂಚಿಸಿದ್ದರು. ಆಗ ಚೇತನ್ ಲೇಖನಿಯಿಂದ ಹೊರಟ ಸಾಲುಗಳು 'ಬೈಟೇ.. ಬೈಟೇ..'! ಅಲ್ಲಿಂದ ಚೇತನ್ ಹಿಂದಿರುಗಿ ನೋಡಲೇ ಇಲ್ಲ.! ಕಾಕತಾಳೀಯ ಅಂದ್ರೆ, ಚೇತನ್ ಲಕ್ 'ಬ'ದಲಾಗಿದ್ದು 'ಬ'ದಿಂದಲೇ.!

  ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

  ಈಗ ಎಲ್ಲರ ಕಣ್ಣು 'ಭರಾಟೆ' ಮೇಲಿದೆ.!

  ಈಗ ಎಲ್ಲರ ಕಣ್ಣು 'ಭರಾಟೆ' ಮೇಲಿದೆ.!

  ಎರಡು 'ಬ್ಲಾ'ಕ್ 'ಬ'ಸ್ಟರ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಚೇತನ್ ಮೂರನೇ ಚಿತ್ರದ ಮೇಲೆ ಈಗ ಎಲ್ಲರ ಕಣ್ಣಿದೆ. ಅಸಲಿಗೆ, ತಮ್ಮ ಮೂರನೇ ಚಿತ್ರಕ್ಕೂ ಚೇತನ್ ಬೇಕಂತಲೇ 'ಬ' ಅಕ್ಷರದಿಂದ ಹೆಸರಿಟ್ರಾ.? ಈ ಪ್ರಶ್ನೆಗೆ ಸ್ವತಃ ಚೇತನ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಏನಂತಾರೆ ಚೇತನ್.?

  ಏನಂತಾರೆ ಚೇತನ್.?

  ''ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಮಾಸ್ ಎಲಿಮೆಂಟ್ಸ್ ಇದೆ. ಜೋರು, ಸ್ಪೀಡ್ ಎನ್ನುವ ಅರ್ಥದಲ್ಲಿ ನಮಗೆ ಶೀರ್ಷಿಕೆ ಬೇಕಾಗಿತ್ತು. ಅಷ್ಟಕ್ಕೂ, ನನಗೆ 'ಭರಾಟೆ' ಎಂಬ ಟೈಟಲ್ ಹೊಳೆದಿದ್ದು ಪತ್ರಿಕೆ ಹಾಗೂ ಮೀಡಿಯಾಗಳಿಂದಲೇ. ಯಾಕಂದ್ರೆ, 'ಭರ್ಜರಿ' ರಿಲೀಸ್ ಆದ್ಮೇಲೆ, 'ಎಲ್ಲಾ ಕಡೆ ಭರ್ಜರಿ ಭರಾಟೆ' ಅಂತ ಬರ್ತಿತ್ತು. 'ಭರಾಟೆ' ನಮ್ಮ ಕಥೆಗೂ ಸೂಕ್ತವಾಗಿತ್ತು. ಹೀಗಾಗಿ ಅದನ್ನೇ ಫೈನಲ್ ಮಾಡಿದ್ವಿ'' ಅಂತಾರೆ ನಿರ್ದೇಶಕ ಚೇತನ್.

  'ಭರಾಟೆ' ಸ್ಕ್ರಿಪ್ಟ್ ಪೂಜೆ

  'ಭರಾಟೆ' ಸ್ಕ್ರಿಪ್ಟ್ ಪೂಜೆ

  ಚೇತನ್ ನಿರ್ದೇಶನದಲ್ಲಿ, ಶ್ರೀಮುರಳಿ-ಶ್ರೀಲೀಲಾ ಅಭಿನಯಿಸುತ್ತಿರುವ 'ಭರಾಟೆ' ಚಿತ್ರದ ಸ್ಕ್ರಿಪ್ಟ್ ಪೂಜೆ ಇಂದು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ನಡೆಯಿತು.

  English summary
  Will Kannada Director Chethan become Hattrick Director with 'Bharate'.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X