»   » ಮದುವೆ ನಂತರ ನಟಿ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಗುಡ್ ಬೈ.?

ಮದುವೆ ನಂತರ ನಟಿ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಗುಡ್ ಬೈ.?

Posted By:
Subscribe to Filmibeat Kannada

ಮದುವೆ, ಗಂಡ, ಮನೆ, ಮಕ್ಕಳು ಅಂತ ಆದ್ಮೇಲೆ ಹೆಣ್ಮಕ್ಕಳು ಮನೆಯಲ್ಲೇ ಬಿಜಿ. ಕೆಲ ಸ್ಟಾರ್ ಹೀರೋಯಿನ್ ಗಳೂ ಕೂಡ ಮದುವೆ-ಮಕ್ಕಳ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಉದಾಹರಣೆಗಳು ಕಣ್ಮುಂದಿವೆ.

ನಟಿ ಸುಮಲತಾ, ಭಾರತಿ ವಿಷ್ಣುವರ್ಧನ್, ಐಶ್ವರ್ಯ ರೈ, ಶ್ರೀದೇವಿ ಸೇರಿದಂತೆ ಅನೇಕ ಪ್ರಖ್ಯಾತ ನಟಿಯರು ಮದುವೆ/ಮಕ್ಕಳಾದ ನಂತರ ಕೆಲ ವರ್ಷಗಳ ಕಾಲ ಬಣ್ಣದ ಬದುಕಿನಿಂದ ದೂರ ಉಳಿದಿದ್ದರು. ಬಳಿಕ ಎಲ್ಲರೂ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಹೀಗಿರುವಾಗ, ನಟಿ ರಾಧಿಕಾ ಪಂಡಿತ್ ಕೂಡ ಮದುವೆ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳ್ಬಹುದು ಎಂಬ ಪ್ರಶ್ನೆ ಸಹಜವಾಗಿ ಎಲ್ಲರ ತಲೆಯಲ್ಲಿತ್ತು. [ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

ಡೌಟ್ ಯಾಕೆ ಕ್ಲಿಯರ್ ಮಾಡಿಕೊಳ್ಳೋಣ ಅಂತ ನಿನ್ನೆ ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರು ರಾಧಿಕಾ ಪಂಡಿತ್ ಗೆ ನೇರವಾಗಿ ಪ್ರಶ್ನೆಯ ಬಾಣ ಎಸೆದರು. ಅದಕ್ಕೆ ರಾಧಿಕಾ ಪಂಡಿತ್ ಮತ್ತು ಯಶ್ ಕೊಟ್ಟ ಉತ್ತರ ಇಲ್ಲಿದೆ, ಓದಿರಿ.....

ಮದುವೆ ಆದ್ಮೇಲೆ ರಾಧಿಕಾ ಬಣ್ಣ ಹಚ್ತಾರಾ.?

''ಮದುವೆ ಆದ ತಕ್ಷಣ ಹೆಣ್ಮಗು ಮನೆಯಲ್ಲಿ ಇರಬೇಕು ಎಂಬ ಕಾಲದಲ್ಲಿ ನಾವು ಇಲ್ಲ. ನನ್ನ ಕೆರಿಯರ್ ನಲ್ಲಿ ನಾನು ಮಾಡಿರುವ ಪಾತ್ರಗಳನ್ನ ನೋಡಿದ್ರೆ, ತುಂಬಾ ಗ್ಲಾಮರ್ ಇರುವ ಪಾತ್ರಗಳನ್ನ ನಾನು ಯಾವತ್ತೂ ಒಪ್ಪಿಕೊಂಡಿಲ್ಲ'' - ರಾಧಿಕಾ ಪಂಡಿತ್ [ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.?]

ಮದುವೆ ಆದ್ಮೇಲೆ ಇದೇ ತರಹದ ಪಾತ್ರಗಳು ಸಿಗ್ಬೇಕಲ್ಲಾ?

''ಮದುವೆ ಆಯ್ತು ಅಂತ ಆಕ್ಟಿಂಗ್ ನಿಲ್ಲಿಸಲು, ಅಥವಾ ಪಾತ್ರಗಳ ವ್ಯತ್ಯಾಸ ಆಗುತ್ತೆ ಎಂಬುದು ನನಗೆ ಕಾಣಿಸಿಲ್ಲ'' - ರಾಧಿಕಾ ಪಂಡಿತ್ [ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ಯಶ್ ಏನಂತಾರೆ.?

''ರಾಧಿಕಾ ಪಂಡಿತ್ ಪರ್ಫಾಮರ್ ಆಗಿ ಗುರುತಿಸಿಕೊಂಡಿರುವ ನಟಿ. ಟ್ಯಾಲೆಂಟ್ ಮೇಲೆ ಬೆಳೆದಿರುವ ನಟಿ. ಹೀಗಾಗಿ ಬೇರೆ ಯಾವುದೇ ಡಿಫರೆನ್ಸ್ ಆಗಲ್ಲ'' - ಯಶ್ [ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ]

ಯಶ್ ಗೆ ಅಭ್ಯಂತರ ಇಲ್ವಾ.?

ನಾವಿಬ್ಬರು ಮೊದಲು ಫ್ರೆಂಡ್ಸ್. ನಮ್ಮ ನಡುವೆ ಅಂತಹ ಅಭ್ಯಂತರ ಏನಿಲ್ಲ. ಮದುವೆ ಆದ್ಮೇಲೂ ಕೂಡ ರಾಧಿಕಾ ಆಕ್ಟಿಂಗ್ ಮಾಡ್ತಾರೆ - ಯಶ್ [ಇನ್ಮುಂದೆ ಯಶ್ ಗೆ ಏನಾದ್ರೂ ಹೇಳ್ಬೊದು-ಕೇಳ್ಬೊದು]

'ಸಂತು...Straight Forward' ನಲ್ಲಿ ನೂತನ ಜೋಡಿಯ ಮೋಡಿ

ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕಾಂಬಿನೇಷನ್ ನಲ್ಲಿ 'ಸಂತು...Straight Forward' ಸಿನಿಮಾ ತಯಾರಾಗುತ್ತಿದೆ. [ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.!]

'ದೊಡ್ಮನೆ ಹುಡುಗ' ರಿಲೀಸ್ ಗೆ ರೆಡಿ ಆಗಿದೆ.!

ಪುನೀತ್ ರಾಜ್ ಕುಮಾರ್ ಜೊತೆ ರಾಧಿಕಾ ಪಂಡಿತ್ ನಟಿಸಿರುವ 'ದೊಡ್ಮನೆ ಹುಡುಗ' ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ.

English summary
Will Kannada Actress Radhika Pandit bid Goodbye to acting after tying the knot with Kannada Actor Yash.? Radhika Pandit answered to this question in a press meet held at Gold Finch Hotel, Bengaluru on Aug 16th. Read the article to know her answer.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X