»   » ಕನ್ನಡಕ್ಕೆ ಮಹೇಶ್, ಅಲ್ಲು ಅರ್ಜುನ್, ಅನುಷ್ಕಾ ಬರ್ತಾರೆ.! ಎಲ್ಲ ಪುಕ್ಕಟೆ ಪ್ರಚಾರ.!

ಕನ್ನಡಕ್ಕೆ ಮಹೇಶ್, ಅಲ್ಲು ಅರ್ಜುನ್, ಅನುಷ್ಕಾ ಬರ್ತಾರೆ.! ಎಲ್ಲ ಪುಕ್ಕಟೆ ಪ್ರಚಾರ.!

Posted By:
Subscribe to Filmibeat Kannada
Tollywood Stars To Act In Kannada Movies | Filmibeat kannada

ತೆಲುಗು ನಟ ಮಹೇಶ್ ಬಾಬು ಕನ್ನಡ ಸಿನಿಮಾದಲ್ಲಿ ಅಭಿನಯಿಸ್ತಾರಂತೆ.! ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸ್ಯಾಂಡಲ್ ವುಡ್ ಗೆ ಬರ್ತಾರಂತೆ.! ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ನಟಿಸುತ್ತಾರಂತೆ.! ಹೀಗೆ, ಅವರು ಬರ್ತಾರಂತೆ, ಇವರು ಅಭಿನಯಿಸ್ತಾರಂತೆ.! ಎಂಬ ಸುದ್ದಿಗಳನ್ನ ನೋಡುತ್ತಲೇ ಇರ್ತೀವಿ.

ಆದ್ರೆ, ಈ ಪರಭಾಷಾ ನಟರು ಯಾವಾಗ ಕನ್ನಡಕ್ಕೆ ಬರ್ತಾರೆ, ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬುದಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ನಿಮಗೆ ಗೊತ್ತಿರಲಿ. ಇದೆಲ್ಲಾ ಪ್ರಚಾರ ತಂತ್ರ ಅಥವಾ ಪಬ್ಲಿಸಿಟಿ ಗಿಮಿಕ್.

ಅಷ್ಟಕ್ಕೂ, ಇಂತಹ ಸುದ್ದಿಗಳು ಹೇಗೆ ಹುಟ್ಟುತ್ತೆ ಎಂಬುದರ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ಓದಿ.....

ಬೆಂಗಳೂರು ಎಲ್ಲರಿಗೂ ಫೇವರಿಟ್

ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಿಗೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ದೊಡ್ಡ ಮಾರ್ಕೆಟ್ ಇದೆ. ಇದು ಬಹುಶಃ ಎಲ್ಲರಿಗೂ ಗೊತ್ತಿರುವ ವಿಚಾರ. ಅದಕ್ಕಾಗಿಯೇ ಪರಭಾಷಾ ನಟ-ನಟಿಯರು ಬೆಂಗಳೂರನ್ನ ಟಾರ್ಗೆಟ್ ಮಾಡ್ತಾರೆ. ಯಾಕಂದ್ರೆ, ಇಲ್ಲಿಂದ ಆದಾಯ ಹೆಚ್ಚಿದೆ.

ಈ ರೆಡಿ ಮೇಡ್ ಪ್ರಶ್ನೆ ಎಲ್ಲರಿಗೂ ಇರುತ್ತೆ.!

ಪ್ರಚಾರಕ್ಕೆಂದು ಬೆಂಗಳೂರಿಗೆ ಬರುವ ಸೆಲೆಬ್ರಿಟಿಗಳಿಗೆ ನಮ್ಮಲ್ಲೊಂದು ಪ್ರಶ್ನೆ ಸೀಮಿತ. ನೀವು ಕನ್ನಡ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ? ಅಂತ. ಈ ಪ್ರಶ್ನೆಗೆ ಅವರು, ಇಲ್ಲ ಎನ್ನುವುದಕ್ಕೆ ಆಗಲ್ಲ. ಇಲ್ಲ ಅಂದ್ರೆ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತೆ. ಅದಕ್ಕೆ ''ಸ್ಕ್ರಿಪ್ಟ್ ಚೆನ್ನಾಗಿದ್ರೆ, ಖಂಡಿತಾ ಮಾಡ್ತೀನಿ'' ಎಂದು ಉತ್ತರಿಸುತ್ತಾರೆ. ಇದು ಮಾರನೆ ದಿನ ಎಲ್ಲ ಕಡೆಯೂ 'ಹೆಡ್ ಲೈನ್'.

ಸಿನಿಮಾ ಪ್ರಚಾರವೇ ಅವರ ಗುರಿ

ಬೇರೆ ಭಾಷೆಯ ನಟ-ನಟಿಯರು ಅವರ ಸಿನಿಮಾ ಬಿಡುಗಡೆ ಸಮಯದಲ್ಲಿ ಬೆಂಗಳೂರಿಗೆ ಬರ್ತಾರೆ. ತಮ್ಮ ಚಿತ್ರದ ಬಗ್ಗೆ ಪ್ರಚಾರ ಮಾತ್ರ ಅವರ ದೃಷ್ಟಿಯಲ್ಲಿರುತ್ತೆ. ಇಲ್ಲಿನ ಅಭಿಮಾನಿಗಳನ್ನ ಸೆಳೆಯುವ ಉದ್ದೇಶ ಅವರದ್ದು.

'ಸರೈನೋಡು' ಪ್ರೆಸ್ ಮೀಟ್ ನಲ್ಲೂ ಆಗಿದ್ದು ಅದೇ.!

ಕಳೆದ ಬಾರಿ 'ಸರೈನೋಡು' ಚಿತ್ರದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ 'ಅಲ್ಲು ಅರ್ಜುನ್'ಗೂ ''ನೀವು ಕನ್ನಡದಲ್ಲಿ ಸಿನಿಮಾ ಮಾಡ್ತೀರಾ''? ಎಂದು ಕೇಳಿದರು. ಅದಕ್ಕೆ ಅವರು ಹೇಳಿದ್ದು ''ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ಮಾಡ್ತೀನಿ'' ಅಂತ.

ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ!

'ಸ್ಪೈಡರ್' ಪ್ರೆಸ್ ಮೀಟ್ ನಲ್ಲೂ ಆಗಿದ್ದು ಇದೇ.!

ಈಗ 'ಸ್ಪೈಡರ್' ಚಿತ್ರದ ಪ್ರಚಾರಕ್ಕೆಂದು ಬಂದಿದ್ದ ಮಹೇಶ್ ಬಾಬು ಅವರಿಗೂ ಕೂಡ ಈ ಪ್ರಶ್ನೆ ಎದುರಾಗಿದೆ. ಅವರ ಕೊಟ್ಟ ಉತ್ತರ ಕೂಡ ಸೇಮ್ ಟು ಸೇಮ್. ''ಸ್ಕ್ರಿಪ್ಟ್ ಚೆನ್ನಾಗಿದ್ರೆ, ಖಂಡಿತಾ ಮಾಡ್ತೀನಿ'' ಅಂತ.

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು

ಅನುಷ್ಕಾ ಎಲ್ಲೇ ಸಿಕ್ಕರೂ ಈ ಪ್ರಶ್ನೆ ಖಾಯಂ

ಇನ್ನು ಕನ್ನಡದ ಕುವರಿ ಅನುಷ್ಕಾ ಶೆಟ್ಟಿ ಕರ್ನಾಟಕದಲ್ಲಿ ಎಲ್ಲೇ ಕಾಣಿಸಿಕೊಂಡರೂ ''ನೀವು ಕನ್ನಡದಲ್ಲಿ ಸಿನಿಮಾ ಮಾಡ್ತೀರಾ? ಎಂಬ ಪ್ರಶ್ನೆ ಖಾಯಂ. ಅದಕ್ಕೆ ಅವರ ಉತ್ತರವೂ ಖಾಯಂ. ''ಸ್ಕ್ರಿಪ್ಟ್ ಚೆನ್ನಾಗಿದ್ರೆ, ಖಂಡಿತಾ ಮಾಡ್ತೀನಿ'' ಅಂತ.

ಒಂದೇ ಒಂದು ಹಾಡಿಗೆ ಅನುಷ್ಕಾ ಶೆಟ್ಟಿ ಸಂಭಾವನೆ ಇಷ್ಟೊಂದು ಕೋಟಿನಾ.!

ಮುಂದೆ ಪ್ರಚಾರಕ್ಕೆ ಬಂದಾಗಲೂ ಇದೇ ರಿಪೀಟ್

ಇನ್ನು ಮುಂದಿನ ಸಿನಿಮಾಗಳಿಗಾಗಿ, ಈ ನಟ-ನಟಿಯರು ಬೆಂಗಳೂರಿಗೆ ಬಂದಾಗಲೂ ಮತ್ತೆ ಅದೇ ಪ್ರಶ್ನೆ, ಮತ್ತೆ ಅದೇ ಉತ್ತರ. ಈ ಎಲ್ಲದರ ಮಧ್ಯೆ ಒಂದು ಮಾತ್ರ ಸತ್ಯ. ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳ ಪ್ರಚಾರ ಮಾತ್ರ ಜೋರಾಗಿ ಆಗ್ತಿದೆ.

English summary
Will Telugu and Tamil Actors Act in Kannada Movies?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X