For Quick Alerts
  ALLOW NOTIFICATIONS  
  For Daily Alerts

  ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್

  By ಜೇಮ್ಸ್ ಮಾರ್ಟಿನ್
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ 'ಕಬಾಲಿ' ಗೆ ಪೈರಸಿ ಭೀತಿ ಆವರಿಸುತ್ತಿದ್ದಂತೆ ಚಿತ್ರದ ನಿರ್ಮಾಪಕರು ಬೇಕಾದ ಬೇಲಿ ಹಾಕಿ ರಕ್ಷಿಸಲು ಯತ್ನಿಸಿದ್ದು ತಿಳಿದಿರಬಹುದು. ಆದರೆ, ಬಿಡುಗಡೆಗೂ ಮುನ್ನ ಆನ್ ಲೈನ್ ನಲ್ಲಿ ಚಿತ್ರ ಲೀಕ್ ಆಗಿ ಡೌನ್ ಲೋಡ್ ಗೆ ಲಭ್ಯವಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

  ಸರಿ ಸುಮಾರು 180 ವೆಬ್ ಸೈಟ್ ಗಳಲ್ಲಿ ಕಂಡು ಬಂದಿದ್ದ ಲಿಂಕ್ ಗಳನ್ನು ಬ್ಲಾಕ್ ಮಾಡುವಂತೆ ಟ್ರಾಯ್ ಗೆ ಸೂಚಿಸುವಂತೆ ಕೋರಿ ಕಬಾಲಿ ಚಿತ್ರದ ನಿರ್ಮಾಪಕ ಕಲೈಪುಲಿ ಎಸ್ ಧನು ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.[ಸೂಪರ್ ಸ್ಟಾರ್ ರಜನಿ 'ಕಬಾಲಿ' ಟೀಸರ್]

  ಕಬಾಲಿಯ ಪೈರೆಟೆಡ್ ಕಾಪಿ ಆನ್​ಲೈನ್​ನಲ್ಲಿ ಅಷ್ಟೆ ಅಲ್ಲದೇ ಸ್ಥಳೀಯ ಕೇಬಲ್ ಚಾನಲ್​ಗಳಲ್ಲಿಯೂ ಲೀಕ್ ಆಗದಂತೆ ಕೋರ್ಟ್​ನಿಂದ ಆದೇಶ ಹೊರಡಿಸಲಾಗಿತ್ತು. ಸೈಬರ್ ಪೊಲೀಸರು ಕೂಡಾ ಈಗಾಗಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.[ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು]

  ಈಗ 225ಕ್ಕೂ ಅಧಿಕ ವೆಬ್ ಸೈಟ್ ಗಳಲ್ಲಿ ಲೆಕ್ಕವಿರದಷ್ಟು ಟೊರೆಂಟ್ ತಾಣಗಳಲ್ಲಿ ಕಬಾಲಿ ಫುಲ್ ಸಿನಿಮಾ ಓಡುತ್ತಿದೆ ಎಂಬ ಸುದ್ದಿ ಬಂದಿದೆ. ಆದರೆ, ನಿರ್ಮಾಪಕರಾಗಲಿ, ವಿತರಕರಾಗಲಿ ಅಷ್ಟಾಗಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಏಕೆ? [ಉಡ್ತಾ ಪಂಜಾಬ್ 700ಪ್ಲಸ್ ವೆಬ್ ಸೈಟ್ ಗಳಲ್ಲಿ ರನ್ನಿಂಗ್]

  ಈ ಹಿಂದೆ ಕಬಾಲಿ ಚಿತ್ರದ ಹಾಡು ಲೀಕ್ ಆಗಿದೆ ಎಂಬ ಸುದ್ದಿ ಬಂದಿತ್ತು. ಆದರೆ, ನೆರುಪ್ಪು ಡಾ ಸಾಂಗ್ ಟೀಸರ್ ದೃಶ್ಯ ಬಿಟ್ಟರೆ ಏನು ಇರಲಿಲ್ಲ. ಹೀಗಾಗಿ, ಇದು ಗಾಳಿ ಸುದ್ದಿ ಅಷ್ಟೇ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

  ಸಿಬಿಎಎಫ್ ಸಿ ಮುಖ್ಯಸ್ಥ ನಿಹಾಲನಿ ಹೇಳಿಕೆ

  ಸಿಬಿಎಎಫ್ ಸಿ ಮುಖ್ಯಸ್ಥ ನಿಹಾಲನಿ ಹೇಳಿಕೆ

  ಕೇಂದ್ರ ಚಲನಚಿತ್ರ ಧೃಢೀಕರಣ ಮಂಡಳಿCentral Board of Film Certification (CBFC) ಮುಖ್ಯಸ್ಥ ಪಹಲಾಜ್ ನಿಹಾಲನಿ, ಒಂದಾದ ಮೇಲೆ ಒಂದು ದೊಡ್ಡ ಬಜೆಟ್​ನ ಚಿತ್ರಗಳು ಆನ್​ಲೈನ್​ನಲ್ಲಿ ಸೋರಿಕೆಯಾಗುತ್ತಿರುವುದು ದುಃಖಕರ ಸಂಗತಿ, ಕಬಾಲಿ ಚಿತ್ರವು ಚೆನ್ನೈ ಸೆನ್ಸಾರ್ ಬೋರ್ಡ್​ನಲ್ಲಿ ಅಂತಿಮಗೊಂಡಿದ್ದು ಇದರ ಬಗ್ಗೆ ಮುಂಬೈನಲ್ಲಿರುವ ಸೆನ್ಸಾರ್ ಬೋರ್ಡ್ ಕಚೇರಿಗೆ ಯಾವುದೇ ಸಂಪರ್ಕವಿಲ್ಲ ಎಂದಿದ್ದಾರೆ.

  ಬಿಗ್ ಬಜೆಟ್ ಚಿತ್ರ ಲೀಕಾದರೆ ನಷ್ಟ ಗ್ಯಾರಂಟಿ

  ಬಿಗ್ ಬಜೆಟ್ ಚಿತ್ರ ಲೀಕಾದರೆ ನಷ್ಟ ಗ್ಯಾರಂಟಿ

  ಜುಲೈ 22ರಂದು ದೇಶ-ವಿದೇಶದಲ್ಲಿ ಏಕಕಾಲದಲ್ಲಿ ತೆರೆಕಾಣಲು ಸಿದ್ಧವಾಗಿದೆ. ಯುಎಸ್ ನಲ್ಲಿ 400 ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದ್ದು 25 ಡಾಲರ್ ಬೆಲೆ ನಿಗದಿ ಮಾಡಲಾಗಿದೆ. 120 ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಏನಾದರೂ ಬಿಡುಗಡೆಗೆ ಮುನ್ನ ಡೌನ್ ಲೋಡ್ ಆಗಲು ಆರಂಭವಾದರೆ ಭಾರಿ ನಷ್ಟವಾಗುತ್ತದೆ. ಆದರೆ, ಈಗ ಟೊರೆಂಟ್, ವೆಬ್ ಸೈಟ್ ಗಳು ಬ್ಲಾಕ್ ಮಾಡಲಾಗಿದೆ. ಇಲ್ಲಿ ತನಕ ಸಂಪೂರ್ಣ ಚಿತ್ರ ಡೌನ್ ಲೋಡ್ ಆಗಿದೆ ಎಂಬುದಕ್ಕೆ ಸಾಕ್ಷಿ ಸಿಕ್ಕಿಲ್ಲ.

  ರೀಲಿಸ್ ಗೂ ಮುನ್ನವೆ 200 ಕೋಟಿ ರು ಬಾಚಿದೆ

  ರೀಲಿಸ್ ಗೂ ಮುನ್ನವೆ 200 ಕೋಟಿ ರು ಬಾಚಿದೆ

  ವಿತರಣೆ ಹಕ್ಕು, ಡಬ್ಬಿಂಗ್, ಸ್ಯಾಟಲೆಟ್ ಹಕ್ಕು, ಟಿವಿ ಹಕ್ಕು, ಪ್ರಚಾರ ಅದು ಇದು ಎಲ್ಲಾ ಸೇರಿ ಸರಿ ಸುಮಾರು 200 ಕೋಟಿ ರು ನಿರ್ಮಾಪಕ ಧನು ಕೈ ಸೇರಿದೆ ಹೀಗಾಗಿ ಚಿತ್ರಕ್ಕೆ ಇನ್ನೇನು ಸಿಕ್ಕರೂ ಅದು ಲಾಭವೇ. ಆದರೆ, ಮೊದಲ ಮೂರು ದಿನ ಹಾಗೂ ವಾರದ ಗಳಿಕೆ ಬಹುಮುಖ್ಯವಾಗಿದ್ದು, ನಿರ್ಮಾಪಕನ ಜೇಬು ತುಂಬಿಸಲಿದೆ. ಮೊದಲ ವಾರ ಚಿತ್ರ ಗೆದ್ದರೆ ನಂತರ ವಿತರಕನ ಜೇಬು ತುಂಬಲಿದೆ. ಹೀಗಾಗಿ ಲೀಕ್ ಆದರೆ ಸ್ವಲ್ಪಮಟ್ಟಿನ ಹೊಡೆತ ಬೀಳಲಿದೆ.

   ರಜನಿ ಜೊತೆಗೆ ಯುವ ಪಡೆಗೆ ಚಿತ್ರ ಗೆಲ್ಲಬೇಕಿದೆ

  ರಜನಿ ಜೊತೆಗೆ ಯುವ ಪಡೆಗೆ ಚಿತ್ರ ಗೆಲ್ಲಬೇಕಿದೆ

  ಯುವ ನಿರ್ದೇಶಕ ಪಿ ರಂಜಿತ್ ಅವರ ಜತೆಗೆ ಸೌಂಡ್ ಡಿಸೈನರ್ ಅಂಥೋನಿ ರೂಬೆನ್ಸ್, ಸಂಗೀತಗಾರ ಸಂತೋಷ್ ನಾರಾಯಣ್ ಈ ಚಿತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಿಸುತ್ತಿದೆ. ತಾರಾಗಣದಲ್ಲಿ ರಾಧಿಕಾ ಆಪ್ಟೆ, ನಾಸರ್, ವಿನ್ಸ್ ಟನ್ ಚೌ, ರೋಶನ್, ದಿನೇಶ್ ರವಿ, ಧನ್ಸಿಕಾ, ಜಾನ್ ವಿಜಯ್, ಕಿಶೋರ್ ಮುಂತಾದವರಿದ್ದಾರೆ. ಚಿತ್ರ ಗೆದ್ದರೆ ರಜನಿ ಜೊತೆಗೆ ಯುವ ನಿರ್ದೇಶಕ ಹಾಗೂ ತಂತ್ರಜ್ಞರಿಗೆ ಬೆಲೆ ಸಿಗುತ್ತದೆ.

  ಚಿತ್ರ ಲೀಕಾದರೂ ನೋ ಪ್ರಾಬ್ಲಂ ಎನ್ನುವ ಫ್ಯಾನ್ಸ್

  ಚಿತ್ರ ಲೀಕಾದರೂ ನೋ ಪ್ರಾಬ್ಲಂ ಎನ್ನುವ ಫ್ಯಾನ್ಸ್

  ಚಿತ್ರ ಲೀಕಾದರೂ ನೋ ಪ್ರಾಬ್ಲಂ ಎನ್ನುವ ರಜನಿ ಫ್ಯಾನ್ಸ್, ನಾವು ಚಿತ್ರಮಂದಿರದಲ್ಲೇ ಚಿತ್ರ ನೋಡುವುದಾಗಿ ಹೇಳಿದ್ದಾರೆ. ನಿರ್ಮಾಪಕರ ಜೋಳಿಗೆ ತುಂಬಿದೆ. ವಿತರಕರಿಗೆ ಅಷ್ಟಾಗಿ ಬಾಧಿಸುತ್ತಿಲ್ಲ, ಫಾನ್ಸ್ ಕೂಡಾ ಚಿತ್ರಮಂದಿರಕ್ಕೆ ನುಗ್ಗಲು ಸಿದ್ಧರಾಗಿದ್ದಾರೆ. ಹೀಗಾಗಿ ಕಬಾಲಿ ಚಿತ್ರಕ್ಕೆ ಆನ್ ಲೈನ್ ಸೋರಿಕೆ ಶಾಪವಾಗುವುದಿಲ್ಲ.

  English summary
  Rajinikanth's much-awaited movie "Kabali," which is set for a grand release on July 22, has reportedly been leaked online. Its alleged download could raise concerns over its prospects at the box office. Will the 'Kabali' movie leak affect the film at the box office? No, says Industry insiders.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X