»   » 2018ರಲ್ಲಿ ಗುಡ್ ನ್ಯೂಸ್ ಕೊಡಬಹುದು ಈ ಸ್ಟಾರ್ ಜೋಡಿಗಳು.!

2018ರಲ್ಲಿ ಗುಡ್ ನ್ಯೂಸ್ ಕೊಡಬಹುದು ಈ ಸ್ಟಾರ್ ಜೋಡಿಗಳು.!

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಳೆದ ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟ-ನಟಿಯರು ಸಪ್ತಪದಿ ತುಳಿದಿದ್ದರು. ಇನ್ನು ಕೆಲವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮತ್ತೆ ಕೆಲವರು ತಮ್ಮ ಪ್ರೀತಿಯನ್ನ ಹೊರಹಾಕಿದ್ದರು. ಹಾಗಿದ್ರೆ, ಈ ವರ್ಷ ಯಾವ ಸೆಲೆಬ್ರಿಟಿಗಳು ಗುಡ್ ನ್ಯೂಸ್ ಕೊಡಬಹುದು ಎಂಬ ಕುತೂಹಲ ಕಾಡುತ್ತಿದೆ.

  ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಒಟ್ಟಾರೆ ನೋಡುವುದಾರೇ ಈ ವರ್ಷ ಮದುವೆ ಆಗೋರು, ಎಂಗೇಜ್ ಮೆಂಟ್ ಮಾಡಿಕೊಳ್ಳವವರು ಸಂಖ್ಯೆ ಹೆಚ್ಚಾಗಿದೆ.

  ನಿರ್ದೇಶಕರಾದ ರಿಷಬ್ ಶೆಟ್ಟಿ, ಸಿಂಪಲ್ ಸುನಿ, ಅಪೂರ್ವ ಕಾಸರವಳ್ಳಿ, ಪಿ.ಸಿ ಶೇಖರ್, ನಟಿ ನಿಧಿ ಸುಬ್ಬಯ್ಯ, ಅಮೂಲ್ಯ, ರಮ್ಯಾ ಬಾರ್ನಾ, ದೀಪ್ತಿ ಕಾಮ್ಸೆ, ಪ್ರಿಯಾಮಣಿ, ಸಿಂಧು ಲೋಕನಾಥ್, ನಟ ಚೇತನ್ ಚಂದ್ರ, ಲೂಸ್ ಮಾದ ಯೋಗೇಶ್, ನಿರಂಜನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಪರಭಾಷೆಯಲ್ಲಿ ಬಾಲಿವುಡ್ ನಟಿ ರಿಯಾ ಸೇನ್, ಸೌತ್ ನಟಿ ನಮಿತಾ, ತೆಲುಗು ಜೋಡಿ ನಾಗಚೈತನ್ಯ-ಸಮಂತಾ ಜೋಡಿ ಮದುವೆ ಆಗಿದ್ದರು. ಹಾಗಿದ್ರೆ, ಈ ವರ್ಷ ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ. ಮುಂದೆ ಓದಿ.....

  ಚಿರು-ಮೇಘನಾ ರಾಜ್

  ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮತ್ತು ನಟ ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಕಳೆದ ವರ್ಷ ಅಕ್ಟೋಬರ್ ತಿಂಗಳ 22 ರಂದು ನೆರವೇರಿತ್ತು. ಆಗ ಮದುವೆ ಬಗ್ಗೆ ಯಾವುದೇ ವಿಷ್ಯ ಬಿಟ್ಟುಕೊಟ್ಟಿರಲಿಲ್ಲ. ಬಹುಶಃ ಈ ವರ್ಷ ಇವರಿಬ್ಬರ ವಿವಾಹ ಜರುಗಬಹುದಾ ಎಂಬ ಕುತೂಹಲ ಕಾಡುತ್ತಿದೆ.

  'ಕಿರಿಕ್ ಜೋಡಿ' ಕಲ್ಯಾಣ

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಕಳೆದ ವರ್ಷ ಜುಲೈ 3 ರಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಇನ್ನು ಎರಡು ವರ್ಷ ಮದುವೆ ಆಗಲ್ಲ ಎಂದಿರುವ ಈ ಜೋಡಿಯ ಮೇಲೂ ಎಲ್ಲರ ಕಣ್ಣಿದೆ. ಸದ್ಯ ಸತತ ಸಿನಿಮಾಗಲ್ಲಿ ಬ್ಯುಸಿಯಾಗಿರುವ ಇಬ್ಬರು ದೊಡ್ಡ ಮನಸ್ಸು ಮಾಡಿ ಈ ವರ್ಷವೇ ಮದುವೆ ಆದ್ರು ಅಚ್ಚರಿ ಇಲ್ಲ.

  2017ರಲ್ಲಿ ಎಂಗೇಜ್ ಆದ ಸ್ಟಾರ್ ಜೋಡಿಗಳು

  ಪವನ್ ಒಡೆಯರ್ ಮದುವೆ.!

  ನಟ ಹಾಗೂ ನಿರ್ದೇಶಕ ಪವನ್ ಒಡೆಯರ್ ರ ಅವರ ಕಳೆದ ವರ್ಷ ಡಿಸೆಂಬರ್ 7 ರಂದು ಬಾಗಲಕೋಟೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೀಗಾಗಿ, ಈ ವರ್ಷ ಪವನ್ ಒಡೆಯರ್ ಜೋಡಿ ಸಪ್ತಪದಿ ತುಳಿಯುವ ಮೂಲಕ ಹೊಸ ಬಾಳಿಗೆ ಕಾಲಿಡುತ್ತಾರ ಎಂಬ ನಿರೀಕ್ಷೆ ಇದೆ.

  ನಯನತಾರ ಲವ್ವರ್ ವಿಘ್ನೇಶ್.!

  ತಮಿಳಿನ ಖ್ಯಾತ ನಟಿ ನಯನತಾರ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಸುತ್ತಾಡುತ್ತಿರುವ ವಿಷ್ಯ ಫಿಲ್ಮ್ ನಗರದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವೇ ಆದ್ರೇ, ಬಹುಶಃ ನಯನತಾರ ಹಾಗೂ ವಿಘ್ನೇಶ್ ಜೋಡಿಯೂ ಈ ವರ್ಷ ಎಂಗೇಜ್ ಮೆಂಟ್ ಅಥವಾ ಮದುವೆ ಸುದ್ದಿ ನೀಡಬಹುದು ಎಂಬ ನಿರೀಕ್ಷೆ ಇದೆ.

  ಚಿತ್ರಗಳು: ನಟಿ ನಯನತಾರಾ ನ್ಯೂಯಾರ್ಕ್ ಗೆ ಹಾರಿದ ಗುಟ್ಟು ರಟ್ಟು.!

  'ಚಂದ್ರ ಚಕೋರಿ' ಶ್ರಿಯಾ ಸರಣ್

  ಬಹುಭಾಷಾ ನಟಿ ಶ್ರಿಯಾ ಸರಣ್, ರಷ್ಯಾದ ಉದ್ಯಮಿ Andrei Koscheev ಜೊತೆ ಮಾರ್ಚ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರಂತೆ. ಕೆಲ ವರ್ಷಗಳಿಂದ ಲವ್ವಲ್ಲಿ ಇದ್ದ ಈ ಜೋಡಿ ಈ ವರ್ಷ ಹಸೆಮಣೆ ಏರಲು ಸಿದ್ದವಾಗಿದ್ದಾರೆ. ಮಾರ್ಚ್ 17, 18, 19ರಂದು ಉದಯ್ ಪುರದಲ್ಲಿ ಇವರಿಬ್ಬರ ಮದುವೆ ನೆರವೇರಲಿವೆ.

  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ 'ಚಂದ್ರ'ಮುಖಿ ಶ್ರಿಯಾ ಸರಣ್

  ದೀಪಿಕಾ-ರಣ್ವೀರ್ ಸಿಂಗ್

  ಬಾಲಿವುಡ್ ಜೋಡಿ ಹಕ್ಕಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್‌ ಅವರ ಮದುವೆ ಇದೇ ವರ್ಷ ನೆಯುವ ಸಾಧ್ಯತೆ ಇದೆ ಅಂತೆ. ಇತ್ತೀಚಿಗಷ್ಟೆ ದೀಪಿಕಾ ಅವರ ತಂದೆ ಪ್ರಕಾಶ್ ಪಡುಕೋಣೆ ದಂಪತಿ ಬೆಂಗಳೂರಿನಿಂದ ಮುಂಬೈನಲ್ಲಿರುವ ದೀಪಿಕಾ ನಿವಾಸಕ್ಕೆ ಆಗಮಿಸಿ, ರಣ್ವೀರ್ ಸಿಂಗ್ ಕುಟುಂಬದ ಜೊತೆ ವಿವಾಹದ ಬಗ್ಗೆ ಚರ್ಚಿಸಿದ್ದಾರಂತೆ. ಮೂರ್ನಾಲ್ಕು ತಿಂಗಳಲ್ಲಿ ಸ್ಟಾರ್ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.

  ಸದ್ದಿಲ್ಲದೇ ಮದುವೆ ದಿನಾಂಕ ನಿಗದಿ ಮಾಡಿದ ದೀಪಿಕಾ-ರಣ್ವೀರ್ ಕುಟುಂಬ.!

  ಟೈಗರ್ ಶ್ರಾಫ್ ಗೆ ಕಂಕಣ ಭಾಗ್ಯ

  ಬಾಲಿವುಡ್ ನಟ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಆನ್ ಸ್ಕ್ರೀನ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫಲ್ಲೂ ಜೋಡಿ ಹಕ್ಕಿಗಳು. ಕೆಲ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ, ಪಾರ್ಟಿ, ಫಂಕ್ಷನ್ ಗಳಲ್ಲಿ ಜೊತೆಯಾಗಿ ತಿರುಗಾಡುತ್ತಿರುವ ದಿಶಾ ಹಾಗೂ ಟೈಗರ್ ಮದುವೆ ಇದೇ ವರ್ಷ ಆಗಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಕಾಡಿದೆ.

  ಸೋನಂ ಕಪೂರ್ ಮದುವೆ.!

  32 ವರ್ಷ ವಯಸ್ಸಿನ ಸೋನಂ ಕಪೂರ್ ಅತಿ ಶೀಘ್ರದಲ್ಲೇ ಮದುವೆ ಆಗಲಿದ್ದಾರಂತೆ. ಇದೇ ವರ್ಷದ ಜೂನ್ ಅಥವಾ ಜುಲೈ ಹೊತ್ತಿಗೆ ಸೋನಂ ಕಪೂರ್ ದಾಂಪತ್ಯ ಗೀತೆ ಹಾಡಲಿದ್ದಾರಂತೆ. ದೀರ್ಘ ಕಾಲದ ಗೆಳೆಯ ಆನಂದ್ ಅಹುಜಾ ಕೈಹಿಡಿಯಲಿದ್ದಾರೆ ಸೋನಂ ಕಪೂರ್. ಆನಂದ್ ಅಹುಜಾ ದೆಹಲಿ ಮೂಲದ ಬಿಸಿನೆಸ್ ಮ್ಯಾನ್ ಆಗಿದ್ದು, ಕೆಲ ಕಾಲದಿಂದ ಸೋನಂ ರನ್ನ ಪ್ರೀತಿಸುತ್ತಿದ್ದಾರೆ.

  ಕಪೂರ್ ಕುವರಿ ಸೋನಂ ಪೀ..ಪೀ..ಪೀ..ಡುಂ..ಡುಂಗೆ ರೆಡಿ.!

  English summary
  According to sources, Shriya Saran is reportedly all set to tie the knot with her Russian boyfriend Andrei Koscheev on march. and also These celebrities Will Get Married in 2018.?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more