For Quick Alerts
  ALLOW NOTIFICATIONS  
  For Daily Alerts

  ಪರಭಾಷೆಗಳಲ್ಲಿ ಪುನೀತ್ 'ಯುವರತ್ನ' ಬಿಡುಗಡೆಯಾಗುವುದೇ?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿರುವ ಯುವರತ್ನ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಲಾಕ್‌ಡೌನ್ ಪರಿಸ್ಥಿತಿಯಿಂದ ಹೊರಬಂದಿರುವ ಚಿತ್ರರಂಗ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಂತೆ ತೆರೆಗೆ ಬರಲು ಸಜ್ಜಾಗುತ್ತಿದೆ.

  ದಸರಾ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಆದರೆ, ಈ ನಿರೀಕ್ಷೆಯ ಮಧ್ಯೆ ಮತ್ತೊಂದು ಭರ್ಜರಿ ಸುದ್ದಿ ಚರ್ಚೆಯಾಗುತ್ತಿದೆ.

  ಸಂತೋಷ್ ಆನಂದರಾಮ್ ರಾತ್ರೋರಾತ್ರಿ ನಟ ಜಗ್ಗೇಶ್ ಗೆ ಫೋನ್ ಮಾಡಿ ಹೇಳಿದ್ದೇನು?ಸಂತೋಷ್ ಆನಂದರಾಮ್ ರಾತ್ರೋರಾತ್ರಿ ನಟ ಜಗ್ಗೇಶ್ ಗೆ ಫೋನ್ ಮಾಡಿ ಹೇಳಿದ್ದೇನು?

  ಯುವರತ್ನ ಸಿನಿಮಾ ಬೇರೆ ಭಾಷೆಗಳಲ್ಲಿ ತೆರೆಕಾಣಲಿದೆ ಎಂಬ ಮಾತು ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಕೆಜಿಎಫ್ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದ್ದು, ಸ್ಟಾರ್ ನಟರು ಇತರೆ ಭಾಷೆಗಳಲ್ಲಿ ಕನ್ನಡ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.

  ಈ ಸಾಲಿನಲ್ಲಿ ಯುವರತ್ನ ಸಿನಿಮಾ ಸಹ ಇದೆ ಎಂದು ಹೇಳಲಾಗುತ್ತಿದೆ. ಈ ನಿರೀಕ್ಷೆಯನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತಷ್ಟು ಹೆಚ್ಚಾಗಿಸಿದ್ದಾರೆ. ಬೇರೆ ಭಾಷೆಯಲ್ಲಿ ಯುವರತ್ನ ತೆರೆಕಾಣುವ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ.

  ''ಇತರೆ ಭಾಷೆಗಳಲ್ಲಿ ಯುವರತ್ನ ಸಿನಿಮಾ ರಿಲೀಸ್ ಮಾಡುವ ಬಗ್ಗೆ ನಿರ್ಮಾಪಕರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದ್ರೆ, ಒಂದಂತೂ ಹೇಳಬಲ್ಲೆ. ಯುವರತ್ನ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ'' ಎಂದು ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.

  Will Yuvarathnaa Movie Release In other languages?
  ಪ್ರೀತಿಸಿದವನ ಕೈ ಹಿಡಿದ Shravani | Avanu Matte Shravani |Filmibeat Kannada

  'ರಾಜಕುಮಾರ' ಚಿತ್ರದ ನಂತರ ಸಂತೋಷ್ ಆನಂದ್ ರಾಮ್ ಮತ್ತೆ ಪುನೀತ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಯೇಶಾ ಸೈಗಲ್ ಈ ಚಿತ್ರದ ನಾಯಕಿ. ಪುನೀತ್ ಜೊತೆ ಧನಂಜಯ್, ವಸಿಷ್ಠ ಸಿಂಹ, ಸೋನು ಗೌಡ, ಹಿರಿಯ ನಟಿ ರಾಧಿಕಾ ಶರತ್ ಕುಮಾರ್, ತ್ರಿವೇಣಿ ರಾವ್ ಸೇರಿದಂಯತೆ ಹಲವರು ನಟಿಸಿದ್ದಾರೆ.

  English summary
  Puneeth Rajkumar starrer Yuvarathnaa movie will release in other languages? Check out the Reaction of santhosh ananddram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X