Don't Miss!
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್‌ಗೆ ಶುಭ ಕೋರಲು 'ಕೆಜಿಎಫ್ 2' ಡೈಲಾಗ್ ಬಳಸಿದ ವಿಂಬಲ್ಡನ್!
'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿದ್ದೂ ಆಗಿದೆ. ಓಟಿಟಿಗೆ ಲಗ್ಗೆ ಇಟ್ಟಿದ್ದೂ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ 50 ದಿನಗಳನ್ನೂ ಪೂರೈಸಿದೆ. ಆದರೂ 'ಕೆಜಿಎಫ್ 2' ಹವಾ ಮಾತ್ರ ಕಮ್ಮಿಯಾಗಿಲ್ಲ. ಇಡೀ ವಿಶ್ವದ ಗಮನ ಸೆಳೆದ ಸಿನಿಮಾ ಹವಾದ ಬಗ್ಗೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಅಷ್ಟಕ್ಕೂ 'ಕೆಜಿಎಫ್ 2' ಬಗ್ಗೆ ಮತ್ತೆ ಚರ್ಚೆಯಾಗುವುದಕ್ಕೆ ಯಾಕೆ? ಅನ್ನುವ ಅನುಮಾನ ಮೂಡುವುದು ಸಹಜ. ಜೂನ್ 10 ರಂದು ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್ ಇಷ್ಟಕ್ಕೆಲ್ಲ ಕಾರಣ.
ಅರ್ಧ
ವರ್ಷ
ಬಾಲಿವುಡ್
ಬಾಕ್ಸಾಫೀಸ್
ಕಥೆಯೇನು?
KGF
2,
RRR,
ದಿ
ಕಾಶ್ಮೀರ್
ಫೈಲ್ಸ್‌ನದ್ದೇ
ಸದ್ದು!
'ಕೆಜಿಎಫ್ 2' ಸಿನಿಮಾಗೂ ವಿಂಬಲ್ಡನ್ ಪ್ರಶಸ್ತಿಗೂ ಎತ್ತಣದಿಂದ ಎತ್ತಣ ಸಂಬಂಧ. ಟೆನ್ನಿಸ್ ಆಟವೆಲ್ಲ? ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೆಲ್ಲಿ? ವಿಂಬಲ್ಡನ್‌ನಲ್ಲಿ ಯಶ್ ಅಭಿನಯದ ಸಿನಿಮಾ ಚರ್ಚೆಯಾಗುತ್ತಿರುವುದು ಯಾಕೆ ಎಂಬ ಅನುಮಾನ ಮೂಡುವುದು ಸಹಜ. ಅದಕ್ಕೆ ಕಾರಣ ಇಲ್ಲಿದೆ ನೋಡಿ.

ವಿಂಬಲ್ಡನ್‌ನಲ್ಲಿ 'ಕೆಜಿಎಫ್ 2' ಡೈಲಾಗ್
ಹೌದು.. ಆಶ್ಚರ್ಯ ಆದರೂ ಇದು ನಿಜ. 'ಕೆಜಿಎಫ್ 2' ಟ್ರೈಲರ್ ಬಿಡುಗಡೆಯಾದಾಗಲೇ ಒಂದು ಡೈಲಾಗ್ ವೈರಲ್ಆ ಆಗಿತ್ತು. ಅದೇ ವೈಲೆನ್ಸ್ ಡೈಲಾಗ್ ಈಗ ಮತ್ತೆ ವಿಂಬಲ್ಡನ್‌ನಲ್ಲಿ ಸದ್ದು ಮಾಡಿದೆ. ವಿಂಬಲ್ಡನ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ 'ಕೆಜಿಎಫ್ 2' ಸಿನಿಮಾದ ಡೈಲಾಗ್ ಅನ್ನು ಅನುಕರಿಸಿದೆ. ಇದೇ ಕಾರಣಕ್ಕೆ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ವಿಶ್ವ ಮಟ್ಟದಲ್ಲಿ ಮತ್ತೆ 'ಕೆಜಿಎಫ್ 2' ಸೌಂಡ್ ಮಾಡುತ್ತಿರುವುದು ರಾಕಿ ಭಾಯ್ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ.
800
ಕೋಟಿ
ರೂ.
ನಿರ್ದೇಶಕನೊಂದಿಗೆ
ಯಶ್
ಸಿನಿಮಾ:
ಏನಿದು
ಸುದ್ದಿ?

ಟ್ವಿಟರ್ ಖಾತೆಯಲ್ಲಿ ಏನಿದೆ?
ಜೂನ್ 10ರಂದು ವಿಂಬಲ್ಡನ್ ಫೈನಲ್ ಮ್ಯಾಚ್ ನಡೆದಿತ್ತು. ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಏಳನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದರು. ಸರ್ಬಿಯಾದ ಈ ಟೆನ್ನಿಸ್ ಆಟಗಾರನಿಗೆ ಶುಭಕೋರಲು ವಿಂಬಲ್ಡನ್ ಅಧಿಕಾರಿಗಳು 'ಕೆಜಿಎಫ್ 2' ಸಿನಿಮಾ ಡೈಲಾಗ್ ಅನ್ನು ಎರವಲಾಗಿ ಪಡೆದಿದ್ದಾರೆ. ಟ್ವಿಟರ್ ಖಾತೆಯಲ್ಲಿ "ಟ್ರೋಫಿ.. ಟ್ರೋಫಿ.. ಟ್ರೋಫಿ.. ಟ್ರೋಫಿಗಳು ಅಂದರೆ ನನಗೆ ಇಷ್ಟ. ಟ್ರೋಫಿಗಳು ನನ್ನನ್ನು ಪ್ರೀತಿಸುತ್ತವೆ. ನನ್ನಿಂದ ತಿರಸ್ಕರಿಸಲು ಸಾಧ್ಯವಿಲ್ಲ." ಎಂದು ನೊವಾಕ್ ಜೊಕೊವಿಕ್ ಫೋಟೊ ಸಮೇತ ಟ್ವೀಟ್ ಮಾಡಿದೆ.

'ಕೆಜಿಎಫ್ 2' ಡೈಲಾಗ್ ವೈರಲ್
ವಿಂಬಲ್ಡನ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಡೈಲಾಗ್ ವೈರಲ್ ಆಗುತ್ತಿದ್ದಂತೆ ರಾಕಿ ಭಾಯ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ವಿಂಬಲ್ಡನ್ ಅಧಿಕಾರಿಗಳು ಮಾಡಿದ ಟ್ವೀಟ್ ಅನ್ನು ರೀ-ಟ್ವೀಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ರಾಕಿ ಭಾಯ್ ಡೈಲಾಗ್ ಅನ್ನು ವೈರಲ್ ಮಾಡುತ್ತಿದ್ದಾರೆ.

'ಪುಷ್ಪ'-'ಕೆಜಿಎಫ್ 2' ಕ್ರೇಜ್
ದಕ್ಷಿಣ ಭಾರತದ ಎರಡು ಸಿನಿಮಾ ವಿಶ್ವದಾದ್ಯಂತ ಕ್ರೇಜ್ ಹುಟ್ಟಾಕಿದ್ದವು. ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದ ತಗ್ಗದೆಲೆ ಮ್ಯಾನರಿಸಂ ವಿಶ್ವದ ಮೂಲೆ ಮೂಲೆಯಲ್ಲೂ ಅನುಕರಣೆ ಮಾಡಿದ್ದರು. ಇನ್ನೊಂದು ಕಡೆ ಕೆಜಿಎಫ್ 2 ಸಿನಿಮಾದ ಡೈಲಾಗ್ ಕಿಕ್ ಕೊಡುತ್ತಿದೆ. ಈ ಎರಡೂ ಸಿನಿಮಾಗಳು ಈ ವರ್ಷ ಸಖತ್ ಕ್ರೇಜ್ ಅನ್ನು ಹುಟ್ಟಾಕುತ್ತಿವೆ.