»   » ಸುರಸುಂದರಾಂಗಿ ನಮಿತಾಗೆ ಹುಟ್ಟುಹಬ್ಬದ ಶುಭಾಶಯ

ಸುರಸುಂದರಾಂಗಿ ನಮಿತಾಗೆ ಹುಟ್ಟುಹಬ್ಬದ ಶುಭಾಶಯ

Posted By:
Subscribe to Filmibeat Kannada

ಇಂದು ನಮಿತಾ ಮುಕೇಶ್ ವಂಕವಾಲಾಳ 31ನೇ ಜನ್ಮದಿನ. ವಂಕವಾಲಾ ಹೆಸರು ಕೇಳಿದ್ರೆ ನೀವು ತಬ್ಬಿಬ್ಬಾಗುವುದು ಖಚಿತ. ಇವಳೇ ತನ್ನ ಅಸಾಧ್ಯ ಅಂಗಸೌಷ್ಟವದಿಂದ ದಕ್ಷಿಣ ಭಾರತದಲ್ಲಿ ಅಸಂಖ್ಯ ಚಿತ್ರ ಪ್ರೇಮಿಗಳನ್ನು ಸೃಷ್ಟಿಸಿಕೊಂಡಿರುವ ನಂ.1 ಮಸಾಲಾ ನಟಿ ನಮಿತಾ. ಓ ರವಿಚಂದ್ರನ್ ಜೊತೆ ನಟಿಸಿದ್ದ 'ನೀಲಕಂಠ'ದಲ್ಲಿ ನಟಿಸಿದ್ದ ನಮಿತಾನಾ ಎಂದು ನಿಮ್ಮ ಬಾಯಿಂದ ಉದ್ಗಾರ ಬರದಿದ್ದರೆ ಕೇಳಿ.

ತನ್ನ ಮಾದಕ ದೇಹಸೌಂದರ್ಯವೇ ಅನರ್ಘ್ಯ ಆಸ್ತಿಯೆಂದು ನಂಬಿರುವ ನಮಿತಾ ಹುಟ್ಟಿದ್ದು ಮೇ 10ರ 1981ರಂದು ಗುಜರಾತ್‌ನ ಸೂರತ್‌ನಲ್ಲಿ. ಈಕೆಗೆ ನಮಿತಾ ಕಪೂರ್ ಅಂತನೂ ಬಾಲಿವುಡ್ ಚಿತ್ರರಂಗದಲ್ಲಿ ಕರೆಯುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಶಾರ್ಟ್ ಅಂಡ್ ಸ್ವೀಟಾಗಿ ನಮಿತಾ ಅಂತಾನೇ ಪ್ರಸಿದ್ಧಿ. ನಮಿತಾ ಅಂತ ಬೇರಾರಾದರೂ ಇದ್ದರೆ ಅವರು ತಮ್ಮ ಹೆಸರನ್ನೇ ಬದಲಿಸಿಕೊಳ್ಳಬೇಕು ಅಷ್ಟು ಪ್ರಸಿದ್ಧಿ.

ಗುಜರಾತ್‌ನಲ್ಲಿ ಘೀ ಮಕ್ಕನ್ ಸಖತ್ತಾಗಿ ಉಂಡು ಸಂತಸದಿಂದ ಇದ್ದ ನಮಿತಾ ಸಹಜವಾಗಿ ದಕ್ಷಿಣದ ಚಿತ್ರ ನಿರ್ಮಾಪಕರನ್ನು ಆಕರ್ಷಿಸಿದ್ದಾರೆ. 1998ರಲ್ಲಿ ಸೂರತ್ ಸುಂದರಿಯಾಗಿ, 2001ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾದರೂ ಬಾಲಿವುಡ್ ಆಕೆಯನ್ನು ಬಾ ಎಂದು ಕರೆಯಲೇ ಇಲ್ಲ. ಆದರೆ, ಆಕೆಯನ್ನು ಬರಸೆಳೆದಿದ್ದು ತೆಲುಗು ಮತ್ತು ತಮಿಳು ಚಿತ್ರನಿರ್ಮಾಪಕರು. ವೈದ್ಯ ಹೇಳಿದ್ದು, ರೋಗಿ ಬಯಸಿದ್ದು ಹಾಲು ಅನ್ನ!

ನಂತರ ನೀ ನಕ್ಕರೆ ಸೊಗಸು, ನೀ ನಿಂತರೆ ಸೊಗಸು, ಮೈ ಕುಲುಕಾಡಿದರೂ ಸೊಗಸು, ಸೊಂಟ ಬಳುಕಿಸಿದರೂ ಸೊಗಸು ಎಂದು ದಕ್ಷಿಣದ ಚಿತ್ರಪ್ರೇಮಿಗಳು ನಮಿತಾಳನ್ನು ಪಲ್ಲಕಿಯ ಮೇಲಿಟ್ಟು ಮೆರೆದಾಡಿಸಿಬಿಟ್ಟರು. ಈ ಕ್ರೇಜ್ ಯಾವ ಮಟ್ಟಕ್ಕೆ ಹೋಯಿತೆಂದರೆ ದಪ್ಪಗಿದ್ದರೆ ಮಾತ್ರ ಒಳ್ಳೆ ಚಾನ್ಸ್ ಸಿಗುತ್ತದೆಂದು ಚಿತ್ರನಟಿಯರೆಲ್ಲರೂ ದಪ್ಪಗಾಗಲು ಶುರುಮಾಡಿದ್ದರು. ಆದರೆ, ನಿರ್ಮಾಪಕರು ಕೇಳಬೇಕಲ್ಲ? ಕೊನೆಗೊಂದು ದಿನ ತನ್ನ ಎದೆಯ ಸುತ್ತಳತೆ ಇಳಿಸಿಕೊಳ್ಳಲೆಂದು ನಮಿತಾ ಮಲೇಶ್ಯಾಗೆ ಕೂಡ ಹೋಗಿ ಬರಬೇಕಾಯಿತು.

ಊರಿಗೆ ಬಂದವಳು ನೀರಿಗೆ ಬರಲೇಬೇಕು ಎಂಬಂತೆ ರವಿಚಂದ್ರ ತಮ್ಮ ನೀಲಕಂಠ ಚಿತ್ರದಲ್ಲಿ ನಮಿತಾ ಮೇಲೆ ನವಿಲುಗರಿಯಾಡಿಸಿಬಿಟ್ಟರು, ಚಿತ್ರ ತೋಪಾಯಿತು. ನಂತರ ಇಂದ್ರದಲ್ಲಿ ನಮಿತಾ ದರ್ಶನ್ ಜೊತೆ ಗುಮ್ತಾನೆ ಗುಮ್ಮಿದರೂ ರಸಿಕರು ಮೆಚ್ಚಲಿಲ್ಲ. ತದನಂತರ ನಮಿತಾ ಐ ಲವ್ ಯೂ ಚಿತ್ರದಲ್ಲಿ ಯೋಗ ಕಲಿಸಲು ಬಂದಷ್ಟೇ ವೇಗವಾಗಿ ಪ್ರೇಕ್ಷಕರೂ ಚಿತ್ರದಿಂದ ದೂರವಾದರು. ಆದರೂ ನಮಿತಾ ಜನಪ್ರಿಯತೆ ಅವರ ಗಾತ್ರದಷ್ಟೇ ಬೆಳೆಯುತ್ತಿದೆ.

ನಮಿತಾ ಚಿತ್ರಜೀವನ ಹೇಗೇ ಇರಲಿ. 31 ದಾಟಿ 32ಕ್ಕೆ ಕಾಲಿಡುತ್ತಿರುವ ನಮಿತಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿರಿ, ಆದಷ್ಟು ಬೇಗನೆ ಮದುವೆಯಾಗಲೆಂದು ಹಾರೈಸಿ. ಹೂಗುಚ್ಛದೊಂದಿಗೆ ನಿಮ್ಮ ನೆಚ್ಚಿನ ನಟಿ ನಮಿತಾಗೆ ಹ್ಯಾಪಿ ಬರ್ತಡೇ ಹೇಳಿರಿ, ಹಾಗೆಯೇ ಚಾಕಲೇಟ್ ಕಳಿಸುವುದನ್ನು ಮರೆಯಬೇಡಿ. ನಮಿತಾಗೆ ಚಾಕಲೇಟ್ ಅಂದ್ರೆ ತುಂಬಾ ಇಷ್ಟವಂತೆ.

English summary
South Indian actress Namitha aka Namitha Mukesh Vankawala turns 31 on May 10. Wish her very happy birthday, who has enthralled Kannada movie lovers in Neelakanta, Indra and Namitha I Love You.
Please Wait while comments are loading...