For Quick Alerts
  ALLOW NOTIFICATIONS  
  For Daily Alerts

  ಕಾಮಿಡಿ ಚಿತ್ರ ನೋಡುತ್ತಾ ಥಿಯೇಟರ್ ನಲ್ಲೇ ಪ್ರಸವ

  By ಅನಂತರಾಮು, ಹೈದರಾಬಾದ್
  |

  ಹಾಸ್ಯರಸಕ್ಕೆ ಈ ರೀತಿಯ ಒಂದು ಪವರ್ ಕೂಡ ಇದೆ ಎಂಬುದು ಸಾಬೀತಾಗಿದೆ. ಹಾಸ್ಯ ಚಿತ್ರವೊಂದನ್ನು ನೋಡುತ್ತಾ ಮಹಿಳೆಯೊಬ್ಬರು ಥಿಯೇಟರ್ ನಲ್ಲೇ ಪ್ರಸವಿಸಿದ ಘಟನೆಯಿದು. ಈ ಘಟನೆ ನಡೆದಿರುವುದು ಪಕ್ಕದ ಆಂಧ್ರಪ್ರದೇಶದಲ್ಲಿ.

  ಅದು ಹೇಳಿಕೇಳಿ ಪಕ್ಕಾ ಕಾಮಿಡಿ ಚಿತ್ರ. ಹೆಸರು ಅದೆಂಥದೋ ಸುಡುಗಾಡು ಹೆಸರು 'ಸುಡಿಗಾಡು' ಎಂದು. ಪ್ರಮೀಳಾ ಎಂಬ ತುಂಬು ಗರ್ಭಿಣಿ ಈ ಚಿತ್ರ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇನ್ನೇನಾಗುತ್ತದೆ ಥಿಯೇಟರ್ ನಲ್ಲೇ ಪ್ರಸವವಾಗಿದೆ.

  ಚಿತ್ತೂರು ಜಿಲ್ಲೆಯ ಪಲಮನೇರಿನಲ್ಲಿ ಈ ಘಟನೆ ಬುಧವಾರ (ಆ.29) ನಡೆದಿದೆ. ಈಕೆಯ ಡೆಲಿವರಿ ಡೇಟ್ ಇನ್ನೂ ಒಂದು ವಾರ ಕಾಲವಿತ್ತಂತೆ. ಹಾಗಾಗಿ ಈಕೆ ತನ್ನ ಗಂಡನೊಂದಿಗೆ ಹಾಯಾಗಿ ಕಾಮಿಡಿ ಚಿತ್ರ ನೋಡಲು ಬಂದಿದ್ದರು. ಆದರೆ ಇದು ಅಂತಿಂಥಹ ಕಾಮಿಡಿ ಚಿತ್ರವಲ್ಲ. ನೋಡುನೋಡುತ್ತಿದ್ದಂತೆ ನಗೆ ಉಕ್ಕಿಬರುತ್ತಿತ್ತು. ಸಿಕ್ಕಾಪಟ್ಟೆ ನಕ್ಕಿದ ಕಾರಣ ಅಲ್ಲೇ ಪ್ರಸವ ವೇದನೆ ಶುರುವಾಗಿದೆ.

  ಈ ವಿಷಯ ಥಿಯೇಟರ್ ಮಾಲೀಕರ ಗಮನಕ್ಕೂ ತರಲಾಗಿದೆ. ಕೂಡಲೆ ಅವರು ಪ್ರದರ್ಶನವನ್ನು ನಿಲ್ಲಿಸಿ, ಎಲ್ಲರನ್ನೂ ಥಿಯೇಟರ್ ನಿಂದ ಆಚೆಗೆ ಕಳುಹಿಸಿದ್ದಾರೆ. ಬಳಿಕ 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

  ಇತ್ತ ಪ್ರಸವ ವೇದನ ಹೆಚ್ಚಾಗಿದೆ. ಅತ್ತ ಆಂಬುಲೆನ್ಸ್ ಸಮಯಕ್ಕೆ ಬರುತ್ತಿಲ್ಲ. ಕಾಮಿಡಿ ಸಿನೆಮಾ ನೋಡಲು ಬಂದ ಜನ ಈ ಟ್ರಾಜಿಡಿ ನೋಡುತ್ತಾ ನಿಂತರು. ಬಳಿಕ ಆಕೆಯ ಪ್ರಸವಕ್ಕೆ ಸೂಕ್ತ ವ್ಯವಸ್ಥೆಗಳನ್ನೂ ಅಲ್ಲೇ ಮಾಡಲಾಯಿತು. ಪ್ರಮೀಳಾ ನೋವು ತಾಳಲಾರದೆ ಥಿಯೇಟರ್ ನಲ್ಲೇ ಪ್ರಸವಿಸಿದ್ದಾರೆ.

  ಕಡೆಗೆ ತಾಯಿ ಮಗು ಆರೋಗ್ಯದಿಂದಿರುವುದಾಗಿ ತಿಳಿದು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಥಿಯೇಟರ್ ನಲ್ಲೇ ಜನಿಸಿದ ಗಂಡುಮಗುವಿಗೆ ಸುಡಿ ನರೇಶ್ ಎಂದು ಹೆಸರಿಡುವುದಾಗಿ ಈ ದಂಪತಿಗಳು ಹೇಳಿದ್ದಾರೆ.

  ಚಿತ್ರದ ನಾಯಕ ನಟ ಅಲ್ಲರಿ ನರೇಶ್ ಆದಕಾರಣ ಆತನ ಹೆಸರನ್ನೂ ಸೇರಿಸಿ ತಮ್ಮ ಮಗುವಿಗಿಡುತ್ತಿರುವುದು ವಿಶೇಷ. ಡೆಲಿವರಿ ಡೇಟ್ ಇನ್ನೂ ಒಂದು ವಾರಕಾಲವಿದ್ದ ಕಾರಣ ಈ ದಂಪತಿಗಳು ಕಾಮಿಡಿ ಚಿತ್ರ ನೋಡಲು ಬಂದಿದ್ದರು. ಆದರೆ ವಾರಕ್ಕೆ ಮೊದಲೇ ಪ್ರಸವವಾಗಿದೆ.

  English summary
  Hilarious comedy movies are normally rib-tickling. But Telugu film 'Sudigadu' one such box office hit Telugu movie with the comedy-hero Allari Naresh playing the lead role had made a pregnant women effortlessly deliver a baby boy right in the theatre, even as she was watching the matinee show of the movie. The incident took place in Chittoor district.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X