»   » ಸ್ತ್ರೀ ಸ್ವಾತಂತ್ರ್ಯ; ಚಂದನವನದ ತಾರೆಯರು ಹೇಳಿದ್ದೇನು?

ಸ್ತ್ರೀ ಸ್ವಾತಂತ್ರ್ಯ; ಚಂದನವನದ ತಾರೆಯರು ಹೇಳಿದ್ದೇನು?

Posted By:
Subscribe to Filmibeat Kannada

ಇಂದು 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'. ಇದು ''ನಮ್ಮ ದಿನ'' ಅಂತ ಎಲ್ಲಾ ಮಹಿಳೆಯರು 'ಸಬಲೀಕರಣ'ದ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ದನಿ ಸೇರಿಸುವ ಪುರುಷರು, ಮಹಿಳೆಯರ ಸ್ಥಾನಮಾನ ಮತ್ತು ಸುರಕ್ಷತೆ ಬಗ್ಗೆ ವಾದ ಮಂಡಿಸುತ್ತಾರೆ.

ಎಲ್ಲೆಲ್ಲೂ WOMEN EMPOWERMENT ಬಗ್ಗೆ ಚರ್ಚೆ ನಡೆಯುತ್ತಿದೆ. ಅಂಥದ್ರಲ್ಲಿ, ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂದ್ಮೇಲೆ, 21 ನೇ ಶತಮಾನದ ಮಹಿಳೆಯರಿಗೆ ನಿಜಕ್ಕೂ 'ಸ್ವಾತಂತ್ರ್ಯ' ಸಿಕ್ಕಿದೆಯಾ ಅನ್ನುವ ಪ್ರಶ್ನೆ ಮೂಡುವುದು ಸಹಜ. ಅದರಲ್ಲೂ 'ಗ್ಲಾಮರ್' ಲೋಕದಲ್ಲಿ ಮಹಿಳೆಯರ ಪ್ರಾಭಲ್ಯ ಎಷ್ಟಿದೆ? [ಮಹಿಳೆಯರಿಗಾಗಿ ಸ್ಯಾಂಡಲ್ ವುಡ್ ತಾರೆಗಳ ಓಟದ ಸ್ಪರ್ಧೆ]

''ಸಿನಿಮಾಗಳು ಸಮಾಜದ ಕನ್ನಡಿ'' ಅನ್ನುತ್ತಾರೆ. ತೆರೆಮೇಲೆ ಬೌಲ್ಡ್ ಆಗಿ ನಟಿಸುವ ನಟಿಯರಿಗೆ ಚಿತ್ರರಂಗದಲ್ಲಿ ಸ್ಥಾನಮಾನ ಹೇಗಿದೆ? ''ನಮ್ಮ ಸ್ಯಾಂಡಲ್ ವುಡ್ ನಲ್ಲಿ ನಟಿಯರಿಗೆ ಸ್ವಾತಂತ್ರ್ಯ ಸಿಕ್ಕಿದ್ಯಾ?'' ಈ ಪ್ರಶ್ನೆಯನ್ನ ಇಟ್ಟುಕೊಂಡು 'ಫಿಲ್ಮಿಬೀಟ್ ಕನ್ನಡ' ಕೆಲ ತಾರೆಯರನ್ನ ಕೇಳಿದಾಗ ಸಿಕ್ಕ ಅಭಿಪ್ರಾಯಗಳು ಇಲ್ಲಿವೆ. ಮುಂದೆ ಓದಿ.....

ಚಂದ್ರಿಕಾ

''ಇದು ಪುರುಷ ಪ್ರಧಾನ ಸಮಾಜ. ಮಹಿಳೆಯರಿಗೆ ಅಷ್ಟು ಸ್ವಾತಂತ್ರ್ಯ ಇಲ್ಲ. ಪ್ರಮುಖ್ಯತೆ ಕೂಡ ಇಲ್ಲ. ಸಿನಿಮಾ ಹಿಟ್ ಆಯ್ತು ಅಂದ್ರೆ, ಅದಕ್ಕೆ ಕಾರಣ ಹೀರೋ. ಹೀರೋಯಿನ್ ಪಾತ್ರ ಇಲ್ಲಿ ಬರೋದೇ ಇಲ್ಲ. ಎಲ್ಲೋ, ಕೆಲ ಬೆರಳೆಣಿಕೆಯಷ್ಟು ನಟಿಯರಿಗೆ ಮಾತ್ರ ಪ್ರಾಮುಖ್ಯತೆ ಸಿಕ್ಕಿರೋದು. ಸ್ವಾತಂತ್ರ್ಯ ಅನ್ನೋದಕ್ಕಿಂತ ಮೊದಲು ಮಹಿಳೆಯರಿಗೆ ಗೌರವಯುತ ಸ್ಥಾನ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ.'' [ಐಟಂ ಸಾಂಗ್ ಮೂಲಕ ಚಂದ್ರಿಕಾ ಸೆಕೆಂಡ್ ಇನ್ನಿಂಗ್ಸ್]

ಶ್ವೇತಾ ಶ್ರೀವಾತ್ಸವ್

''ಖಂಡಿತ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ. ಸಿನಿಮಾ ಫೀಲ್ಡ್ ಗೆ ಬರಬೇಕು, ಸಾಧನೆ ಮಾಡಬೇಕು ಅಂದ್ರೂ ಮೊದಲು ಹೆಣ್ಮಕ್ಕಳು ತುಂಬಾ ಸ್ಟ್ರಗಲ್ ಮಾಡಬೇಕು. ಟೆಕ್ನಿಕಲಿ ಮಹಿಳೆಯರಿಗೆ ಅವಕಾಶಗಳೇ ಇಲ್ಲ. ನಮಗಿನ್ನೂ ತುಂಬಾ ಸ್ವಾತಂತ್ರ್ಯ ಬೇಕು. ಒಂದು 10% ಕೂಡ ಸ್ವಾತಂತ್ರ್ಯ ಇಲ್ಲ. ''We are just Subjective Desire'' ಅಷ್ಟೆ ಇಂಡಸ್ಟ್ರಿಯಲ್ಲಿ. ನಮಗೆ ಸಿಗಬೇಕಾಗಿರುವ ಹಕ್ಕುಗಳು ಸಿಗಲಿ ಅನ್ನೋದೇ ನನ್ನ ಹೋರಾಟ.''

ಸಂಜನಾ ಗಲ್ರಾನಿ

''ಖಂಡಿತವಾಗಲೂ ಸಿನಿಮಾ ರಂಗದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಪ್ರತಿಯೊಂದು ಇಂಡಸ್ಟ್ರಿಯಲ್ಲೂ ಒಳ್ಳೆ ಜನ ಇರ್ತಾರೆ, ಕೆಟ್ಟ ಜನ ಇರ್ತಾರೆ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ. ನಾವು ಯಾರ ಜೊತೆ ಇರ್ತೀವಿ. ಯಾರ ಜೊತೆ ಸ್ನೇಹ ಮಾಡ್ತೀವಿ ಅನ್ನೋದು ಮುಖ್ಯ. ನಮ್ಮ ಗುರಿ ಬಗ್ಗೆ ಫೋಕಸ್ ಮಾಡಿದ್ರೆ, ಜಯ ಮತ್ತು ಗೌರವ ನಮಗೆ ಸಿಕ್ಕೇ ಸಿಗುತ್ತೆ. ಸಿನಿಮಾ ತುಂಬಾ ಚಾಲೆಂಜಿಂಗ್ ಫೀಲ್ಡ್. ಹೀರೋಗಳಿಗೆ ಅವರದ್ದೇ ಆದ ಸ್ಥಾನಮಾನ ಇದೆ. ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ಅದನ್ನ ಸಕಾರಾತ್ಮಕವಾಗಿ ನಿಭಾಯಿಸಿದರೆ ಎಲ್ಲರೂ ನಮಗೆ ಬೆಲೆ ಕೊಡ್ತಾರೆ. ಕೆಲವರು ಪ್ರೋತ್ಸಾಹ, ಗೌರವ ಕೊಡಲ್ಲ ನಿಜ, ಅಂಥವರ ಜೊತೆ ನಾವು ಗುರುತಿಸಿಕೊಳ್ಳದಿರುವುದೇ ಒಳ್ಳೆಯದು. ನಮ್ಮ ಸ್ವಾತಂತ್ರ್ಯ ನಮ್ಮ ಕೈಯಲ್ಲಿದೆ. ಅದನ್ನ ಬೇರೆಯವರ ಕೈಗೆ ಕೊಡಬಾರದು.'' [ಸ್ಯಾಂಡಲ್ ವುಡ್ ಬೆಡಗಿಯರು ಯಾರಿಗೇನು ಕಮ್ಮಿ: ಸಂಜನಾ]

ಸುಮನಾ ಕಿತ್ತೂರ್

''ಹೆಣ್ಣು ಗಂಡು ಅಂತ ತಾರತಮ್ಯ ಇರಬಾರದು. ಸ್ವಾತಂತ್ರ್ಯ ಇಲ್ಲ. ಸ್ಕ್ರೀನ್ ಮುಂದೆ ಹೆಣ್ಮಕ್ಕಳು ಕಾಣಿಸಿಕೊಳ್ತಿದ್ದಾರೆ. ಸ್ಕ್ರೀನ್ ಹಿಂದೆ ಇರುವಂತಹ ಹೆಣ್ಮಕ್ಕಳು ಬಹಳ ಕಡಿಮೆ. ಸಿನಿಮಾ ಫೀಲ್ಡ್ ನಲ್ಲಿ ಮಹಿಳೆಯರ ಸ್ಥಾನಮಾನ ಇನ್ನೂ ಇಂಪ್ರೂವ್ ಆಗ್ಬೇಕು. ಟಿವಿ ಕೂಡ ದೊಡ್ಡ ಮಾಧ್ಯಮವಾಗಿ ಬೆಳೆದು ನಿಂತಿದೆ. ಅಲ್ಲೂ ಕೂಡ ಶೋಷಣೆ ಆಗುತ್ತಿದೆ. ಕಿರುತೆರೆಯಲ್ಲೂ ಟೆಕ್ನಿಕಲಿ ಹೆಣ್ಮಕ್ಕಳು ಜಾಸ್ತಿ ಇಲ್ಲ. ಪ್ರತಿಭಾವಂತ ಹೆಣ್ಮಕ್ಕಳಿಗೆ ಅವಕಾಶ ನೀಡಿ, ತೆರೆ ಹಿಂದೆ ಕೂಡ ಮಹಿಳೆಯರ ಸಂಖ್ಯೆ ಜಾಸ್ತಿ ಆಗಬೇಕೆನ್ನೋದು ನನ್ನ ಆಸೆ.'' ['ಮಹಿಳೆಯರ ಏಳಿಗೆಗೆ ಏಂಜೆಲ್ ಐಸ್ ದುಡಿಮೆ']

ಅಪರ್ಣಾ

''ಸಿನಿಮಾ ಗ್ಲಾಮರ್ ವರ್ಲ್ಡ್. ಇಲ್ಲಿ ಗ್ಲಾಮರ್ ಕೌಂಟ್ ಆಗುತ್ತೆ. ಆದ್ದರಿಂದ ಹೆಣ್ಮಕ್ಕಳನ್ನ ಗ್ಲಾಮರ್ ಪ್ರಾಡಕ್ಟ್ ಆಗೇ ಎಲ್ಲರೂ ನೋಡುತ್ತಾರೆ. ಮದುವೆ ಆಗಿ, ಮಗು ಆಯ್ತು ಅಂದ್ರೆ, ಮುಗೀತು. ಆಕೆಗೆ ಮಾರ್ಕೆಟ್ ಇರಲ್ಲ. ಹೀರೋಗಳು ಮದುವೆ ಆಗಿ, ಮಕ್ಕಳಾಗಿ, ಮೊಮ್ಮಕ್ಕಳಾದರೂ, 'ಹೀರೋ'ಗಳಾಗೇ ಇರುತ್ತಾರೆ. ಸೇಲಬಲ್ ಪ್ರಾಡೆಕ್ಟ್ ಅಂತ ಹೆಣ್ಮಕ್ಕಳನ್ನ ಹೆಚ್ಚಾಗಿ ನೋಡುತ್ತಿರುವುದು ಮಾಧ್ಯಮದಲ್ಲೇ. ಎಲ್ಲರೂ Women Empowerment ಬಗ್ಗೆ ಮಾತನಾಡುತ್ತಾರೆ. ಆದರೆ, ಮಹಿಳೆಯನ್ನ ಭೋಗದ ವಸ್ತು ರೀತಿ ನೋಡೋದು ಮಾತ್ರ ಕಮ್ಮಿಯಾಗಿಲ್ಲ. Gender Bias ಇದ್ದೇ ಇದೆ. ಆಧುನಿಕತೆ ಬಗ್ಗೆ ಮಾತನಾಡಿ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆಯಲ್ಲಾ.? ಇದೆಲ್ಲಾ ಹೋದರೆ, ಸ್ವಾತಂತ್ರ್ಯ ಸಾಧ್ಯ.''

ರೂಪಿಕಾ

''ನನ್ನ ಪ್ರಕಾರ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅನ್ಸತ್ತೆ. ಯಾಕಂದ್ರೆ, ಇತ್ತೀಚೆಗೆ ನಾಯಕಿ ಪ್ರಧಾನ ಚಿತ್ರಗಳು ಹೆಚ್ಚಾಗ್ತಿದೆ. ಹೀರೋಯಿನ್ ಗಳನ್ನ ಈಗ ಜಸ್ಟ್ ಪ್ರಾಪರ್ಟಿ ತರಹ ನೋಡ್ತಾಯಿಲ್ಲ. ಹೆಣ್ಮಕ್ಕಳಿಗೂ ಇತ್ತೀಚೆಗೆ ತುಂಬಾ ಅವಕಾಶಗಳು ಸಿಗುತ್ತಿದೆ. ನನಗೂ ಒಳ್ಳೊಳ್ಳೆ ಪಾತ್ರಗಳು ಸಿಕ್ತಿದೆ. ಬರೀ ಗ್ಲಾಮರ್ ಅಂತ ಮಾತ್ರ ಅಲ್ಲ. ಪ್ರತಿಭೆಗೂ ಅವಕಾಶ ಇದೆ. ಇನ್ಮುಂದೆ ಇಂತಹ ಅವಕಾಶ ಜಾಸ್ತಿ ಆಗ್ಲಿ ಅಂತ ನಾನು ಎಕ್ಸ್ ಪೆಕ್ಟ್ ಮಾಡ್ತೀನಿ. ''

ನಿವೇದಿತಾ

''ಸ್ವಾತಂತ್ರ್ಯ ಯಾವ ಫೀಲ್ಡ್ ನಲ್ಲೂ ಇಲ್ಲ. Films are reflection of Society. ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ. ಈಗೀಗ ಇಂಪ್ರೂವ್ ಆಗ್ತಿದೆ. ಇನ್ನೂ ಆಗಬೇಕು. ಪುರುಷ ಪ್ರಧಾನ ಸಮಾಜ ಇದು. ಹಾಗಂತ ಹೆಂಗಸರನ್ನ ಕೀಳಾಗಿ ಕಾಣೋದಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಗುರುತಿಸಿಕೊಳ್ಳಬೇಕು. ನಮ್ಮ ಫೀಲ್ಡ್ ನಲ್ಲಿ ಆಕ್ಟಿಂಗ್ ನಲ್ಲಿ ಬಿಟ್ಟರೆ, ಟೆಕ್ನಿಕಲ್ ಸೈಡ್ ನಲ್ಲಿ ಮಹಿಳೆಯರು ಇಲ್ಲ. ಎಷ್ಟೋ ಸಿನಿಮಾಗಳಲ್ಲಿ ನಾನೊಬ್ಬಳೇ ಹುಡುಗಿ ಇರುತ್ತಿದ್ದೆ. ನಂಬರ್ಸ್ ಇಂಪ್ರೂವ್ ಆಗ್ಬೇಕು. ಮಹಿಳಾ ಪ್ರಧಾನ ಚಿತ್ರ ಮಾಡೋಕ್ಕಿಂತ ಹೆಚ್ಚಾಗಿ, ನಟಿಯರಿಗೆ ಗ್ಲಾಮರ್ ಅನ್ನೋದನ್ನ ಬಿಟ್ಟು ಪರಿಪೂರ್ಣ ಪಾತ್ರಗಳು ಹೆಚ್ಚಾಗಿ ಸಿಗಬೇಕು.''

English summary
Today (March 8th) International Women's Day. On this Occasion, 'Filmibeat Kannada' has come up with a topic of Women's freedom and autonomy in Sandalwood Film Industry. Here is what few Actress reacted upon the situation of Women in Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada