For Quick Alerts
  ALLOW NOTIFICATIONS  
  For Daily Alerts

  ಜು.13ರಿಂದ 3 ದಿನಗಳ ಚಲನಚಿತ್ರ ಕಥಾ ರಚನಾ ಕಮ್ಮಟ

  By Prasad
  |

  ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಜುಲೈ 13ರಿಂದ 15ರವರೆಗೆ ಚಲನಚಿತ್ರ ಮೂರು ದಿನಗಳ ಕಥಾ ರಚನಾ ಕಮ್ಮಟವನ್ನು ಕಾವೇರಿ ಸನ್ನಿಧಿ, ಬೊಮ್ಮೂರು ಅಗ್ರಹಾರ, ಪಶ್ಚಿಮ ವಾಹಿನಿ ಸಮೀಪ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ ಇಲ್ಲಿ ಆಯೋಜಿಸಲಾಗಿದೆ.

  ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಂಗೀತ ನಿರ್ದೇಶಕ ಡಾ: ಹಂಸಲೇಖ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ವಹಿಸಲಿದ್ದಾರೆ.[ಪ್ರೀತಿಗೆ, ಅವರ ರೀತಿಗೆ - ಹಂಸಲೇಖಗೆ ಶುಭಾಶಯಗಳು]

  ಮುಖ್ಯ ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್, ಚಲನಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಎನ್.ಆರ್. ನಂಜುಂಡೇಗೌಡ ಹಾಗೂ ಬೀರಪ್ಪ ಭಾಗವಹಿಸಲಿದ್ದಾರೆ.

  ಚಲನಚಿತ್ರ ನಿರ್ದೇಶಕ ರಾಮದಾಸ ನಾಯ್ಡು ಹಾಗೂ ಸಾಹಿತಿ, ರಂಗಕರ್ಮಿ ಡಾ: ಕೆ.ವೈ.ನಾರಾಯಣಸ್ವಾಮಿ ಕಮ್ಮಟವನ್ನು ನಿರ್ದೇಶಿಸಲಿದ್ದಾರೆ. ಕಮ್ಮಟದಲ್ಲಿ ಚಲನಚಿತ್ರ ಸಾಹಿತಿ ಹಾಗೂ ಪತ್ರಕರ್ತ ಜೋಗಿ, ಚಲನಚಿತ್ರ ನಿರ್ದೇಶಕಿ ಕು.ಸುಮನಾ ಕಿತ್ತೂರು, ಚಲನಚಿತ್ರ ನಿರ್ದೇಶಕ ಪವನ್ ಕುಮಾರ್ ಭಾಗವಹಿಸಲಿದ್ದಾರೆ. ಕಮ್ಮಟದ ಸಂಚಾಲಕರಾಗಿ ಚಲನಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್ ಪಾಲ್ಗೊಳ್ಳಲಿದ್ದಾರೆ.

  English summary
  Karnataka Chalanachitra Academy has organized 3 days story writing workshop in Srirangapatna in Mandya district from July 13 to 15. Kannada film music director Dr Hamsalekha will be inaugurating the workshop, which will presided over by Academy president Rajendra Singh Babu. ಜು.13ರಿಂದ ಮೂರು ದಿನಗಳ ಚಲನಚಿತ್ರ ಕಥಾ ರಚನಾ ಕಮ್ಮಟ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X