»   » ಸುದೀಪ್ ಅಸಾಧಾರಣ ಸಾಧನೆಗೆ ನನ್ನದೊಂದು ಸೆಲ್ಯೂಟ್ ಎಂದವರಾರು.?

ಸುದೀಪ್ ಅಸಾಧಾರಣ ಸಾಧನೆಗೆ ನನ್ನದೊಂದು ಸೆಲ್ಯೂಟ್ ಎಂದವರಾರು.?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೇನೆ ಹಾಗೆ ಅವರು ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಸಲ್ಲುತ್ತಾರೆ. ಅಲ್ಲದೇ ಎಲ್ಲಾ ಭಾಷೆಯ ನಟರಿಗೆ ಕೂಡ ಹಿಡಿಸುತ್ತಾರೆ.

ತೆಲುಗಿನ 'ಈಗ' ತಮಿಳು ವ‍ರ್ಷನ್ ನಲ್ಲಿ ಕೂಡ 'ನಾನ್ ಈ' ಎಂಬ ಹೆಸರಿನಲ್ಲಿ ತೆರೆ ಕಂಡಿತ್ತು. ಆ ಚಿತ್ರದಲ್ಲಿ ಕನ್ನಡ ನಟ ಸುದೀಪ್ ಅವರ ನಟನೆ ನೋಡಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟರು ಹುಬ್ಬೇರಿಸಿದ್ದರು.['ದೊಡ್ಮನೆ ಹುಡುಗ'ನಿಗೆ 'ಕೋಟಿಗೊಬ್ಬನ' ಸವಾಲ್.?]


ತದನಂತರ ಇಳೆಯದಳಪತಿ ವಿಜಯ್ ಅವರ ಜೊತೆ 'ಪುಲಿ' ಚಿತ್ರದಲ್ಲಿ ವಿಲನ್ ಪಾತ್ರ ವಹಿಸಿದ ಮೇಲೆ ಅವರ ಜೊತೆ ತಾವು ನಟಿಸಬೇಕು ಎಂಬ ಅಭಿಲಾಷೆಯನ್ನು ಕೆಲವು ನಟರು ವ್ಯಕ್ತಪಡಿಸಿದ್ದರು.


ಇದೀಗ ಕಾಲಿವುಡ್ ನ ಸ್ಟಾರ್ ನಟರೊಬ್ಬರು ನಮ್ಮ ಕಿಚ್ಚ ಸುದೀಪ್ ಅವರ ಜೊತೆ ತೆರೆ ಹಂಚಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.


"ಸುದೀಪ್ ಅವರ ಜೊತೆ ನಟಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದೇನೆ. ಶೀಘ್ರದಲ್ಲೇ ಅವರ ಜೊತೆ ಜೊತೆ ಕೆಲಸ ಮಾಡುವ ಆಸೆ ಇದೆ. ಮಾಡುತ್ತೇನೆ ಕೂಡ". ಹೀಗಂತ ಹೇಳಿದ್ದು ಯಾರು ಗೊತ್ತಾ?, ತಮಿಳಿನ ಖ್ಯಾತ ನಟ ಕಮ್ ನಿರ್ಮಾಪಕ ಧನುಷ್ ಅವರು.


ಸುದೀಪ್ ಮತ್ತು ನಿತ್ಯಾ ಮೆನನ್ ಅಭಿನಯದ 'ಮುಡಿಂಜ ಇವನ ಪುಡಿ' ತಮಿಳು ವರ್ಷನ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮಿಳು ನಟ ಧನುಷ್ ಅವರು ಮಾತನಾಡುತ್ತಿದ್ದ ವೇಳೆ ಪ್ರತ್ಯೇಕವಾಗಿ ಸುದೀಪ್ ಬಗ್ಗೆ ಕೊಂಚ ಮಾತನಾಡಿದರು. ಧನುಷ್ ಏನಂದ್ರು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....


ಸುದೀಪ್ ಬಗ್ಗೆ

"ಸುದೀಪ್, ಬಗ್ಗೆ ನಾನು ಸ್ವಲ್ಪ ಮಾತಾಡಬೇಕು, 'ನಾನ್ ಈ' ಚಿತ್ರ ಎಲ್ಲರೂ ಮೆಚ್ಚಿಕೊಂಡ ಚಿತ್ರ, ಎಲ್ಲರೂ ನೋಡಿದ ಚಿತ್ರ, ನಾನು ನೋಡಿದ್ದೇನೆ. ನನಗೆ ಸಾಮಾನ್ಯರೊಬ್ಬರ ನಟನೆ ನೋಡಿ, ಅವರಿಗೆ ಪೋನ್ ಮಾಡಿ ಮಾತಾಡುವ ಅಭ್ಯಾಸ ಇಲ್ಲ. ಆದ್ರೆ"....ಧನುಷ್ ಏನಂದ್ರು ಮುಂದೆ ಓದಿ..


ಸುದೀಪ್ ಗೆ ಫೋನ್ ಮಾಡಿದ ಧನುಷ್

'ಆದ್ರೆ..'ನಾನ್ ಈ' ಚಿತ್ರ ರಿಲೀಸ್ ಆದ ಸಂದರ್ಭದಲ್ಲಿ ನಾನು ಸುದೀಪ್ ಸರ್ ನಂ ಹುಡುಕಿ, ಕಂಡು ಹಿಡಿದು ಅವರಿಗೆ ಕಾಲ್ ಮಾಡಿ ಮಾತಾಡಿದೆ. ಸುದೀಪ್ ಸರ್ ನಿಮಗೆ ನೆನಪಿದ್ಯೋ ಇಲ್ವೋ, ಈಗ ಈ ವಿಷಯ ಮುಖ್ಯ ಅಲ್ಲ'.-ಧನುಷ್.['ಹೂನ ಹೂನ' ಅಂತ ಸುದೀಪ್ ಜೊತೆ ನಿತ್ಯಾ ಮೆನನ್ ಕಿಲಕಿಲ]


ಸುದೀಪ್ ಅಭಿನಯ ಅಸಾಧಾರಣ

"ನನ್ನ ಬಳಿ ಬಾಲು ಮಹೇಂದರ್ ಸರ್ ಹೇಳಿದ್ರು, ಸುದೀಪ್ ಸರ್ ಮಾಡಿದ ನಟನೆ ಸಾಧಾರಣ ಅಭಿನಯ ಅಲ್ಲ, ಈ ವರ್ಷ ನ್ಯಾಷನಲ್ ಬೆಸ್ಟ್ ಆಕ್ಟರ್ ಜ್ಯೂರಿ ಆವಾರ್ಡ್ ಇದ್ರೆ, ಅದು ಸುದೀಪ್ ಗೆ ಸಲ್ಲಬೇಕು ಅಂತ ಬಾಲು ಸರ್ ಹೇಳಿದ್ರು. ಅವರು ಹೇಳಿದ್ದೇ ಒಂದು ನ್ಯಾಷನಲ್ ಆವಾರ್ಡ್. ಈ ಮಾತನ್ನು ಯಾವಾಗಾದ್ರೂ, ನೀವು ಸಿಕ್ಕಾಗ ನಿಮ್ಮ ಜೊತೆ ಹೇಳಬೇಕು ಅಂತ ಅಂದುಕೊಂಡಿದ್ದೆ.-ಧನುಷ್


ಹೇಳಬೇಕಾದ ಜಾಗದಲ್ಲೇ ಹೇಳಿದ್ರೆ ಚೆನ್ನ

ಫೋನ್ ಮಾಡಿ ಕೂಡ ಹೇಳಬಹುದಿತ್ತು, ಆದ್ರೆ ಇಂತಹ ಒಂದು ಸುಂದರವಾದ ವಿಷಯ- ದೊಡ್ಡ ವಿಚಾರವನ್ನು, ಅಂತಹ ದೊಡ್ಡ ವ್ಯಕ್ತಿಯ ಬಾಯಿಂದ ಬಂದ ಒಂದು ಮಾತನ್ನು, ಹೇಳಬೇಕಾದ ಜಾಗದಲ್ಲೇ ಹೇಳಿ, ಹೇಳುವ ರೀತಿಯಲ್ಲೇ ಹೇಳಿದರೆ ಚೆನ್ನಾಗಿರುತ್ತದೆ ಅಂತ ಅನಿಸ್ತು. ಆದ್ರಿಂದ ಈಗ ಈ ಸಮಾರಂಭದಲ್ಲಿ ಹೇಳಿದೆ".-ಧನುಷ್.[ಆಗಸ್ಟ್ ನಲ್ಲಿ 'ಕೋಟಿಗೊಬ್ಬ'ನ ದರ್ಬಾರ್ ಶುರುವಾಗುತ್ತಾ.?]


ಮೊದಲ ಸಿನಿಮಾದಲ್ಲಿ ಗೆಲ್ಲೋದು ಕಷ್ಟ

"ನಮ್ಮ ಭಾಷೆಯಲ್ಲಿ ನಮಗೆ ಗೆಲ್ಲೋದು ಅಷ್ಟು ಕಷ್ಟ ಏನಲ್ಲ, ಆದ್ರೆ ಬೇರೆ ಕಡೆ ಹೋಗಿ, ಮೊದಲ ಬಾರಿಗೆ ಬೇರೆ ಭಾಷೆಯಲ್ಲಿ ನಟಿಸಿ, ಅಲ್ಲಿ ಒಂದು ಭದ್ರ ನೆಲೆ ಕಂಡುಕೊಂಡು ಹೆಸರು ಮಾಡೋದು ಅಂದ್ರೆ ಅದು ತುಂಬಾ ಸಾಧಾರಣ ವಿಷಯ ಅಲ್ಲ. ಅದರ ನೋವು, ಕಷ್ಟ ಏನು, ಅದಕ್ಕೆ ಎಷ್ಟು ಹಾರ್ಡ್ ವರ್ಕ್ ಮಾಡಬೇಕು ಅಂತ ನನಗೆ ಗೊತ್ತು. ನಾನೂ ಹಿಂದಿಯಲ್ಲಿ ಆರಂಭ ಮಾಡಿದೆ". -ಧನುಷ್


ಸುದೀಪ್ ಗೆ ಸೆಲ್ಯೂಟ್

"ಕನ್ನಡ ಚಿತ್ರರಂಗದಲ್ಲಿ ಅವರು ಸೂಪರ್ ಸ್ಟಾರ್ ಆಗಿ, ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರೂ ಕೂಡ, ಬೇರೆ ಭಾಷೆಯಲ್ಲಿ ನಟಿಸಿ, ಅಭಿಮಾನಿಗಳನ್ನು ಸಂಪಾದಿಸುವ ಅವರ ನಟನೆಗೆ, ಅವರದೇ ಆದ ಸ್ಟೈಲ್ ಗೆ ನನ್ನದೊಂದು ಸೆಲ್ಯೂಟ್".-ಧನುಷ್


ಸುದೀಪ್ ಜೊತೆ ನಟಿಸೋ ಆಸೆ

"ನಾನು ತುಂಬಾ ಜನರ ಜೊತೆ ನಟಿಸಿದೆ. ಶಿವಕಾರ್ತಿಕೇಯನ್ ಜೊತೆ, ವಿಜಯ್ ಸೇತುಪತಿ ಜೊತೆ ನಟಿಸಿದೆ. ಅದೇ ರೀತಿ ಸುದೀಪ್ ಅವರ ಜೊತೆ ಕೂಡ ನಟಿಸಬೇಕು ಎಂದು ತುಂಬಾ ಆಸೆ ಇದೆ. ಶೀಘ್ರದಲ್ಲೇ ತೆರೆ ಹಂಚಿಕೊಳ್ಳುತ್ತೇನೆ". -ಧನುಷ್


ನಿತ್ಯಾ ಮೆನನ್ ಅತ್ಯುತ್ತಮ ನಟಿ

"ಇನ್ನು ನಿತ್ಯಾ ಮೆನನ್ ಅವರು ತುಂಬಾ ಅತ್ಯುತ್ತಮ ನಟಿ ಅಂತ ಹೇಳಬಹುದು, ನಾನು ಅವರ ನಟನೆಯ ತುಂಬಾ ಸಿನಿಮಾಗಳನ್ನು ನೋಡಿದ್ದೇನೆ. ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ, ಅವರಿಗೂ ಕೂಡ ಶುಭಾಶಯ".-ಧನುಷ್


ಸುದೀಪ್-ಧನುಷ್

'ಮುಡಿಂಜ ಇವನ ಪುಡಿ' ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಧನುಷ್.


ಶಿವಕಾರ್ತಿಕೇಯನ್-ಸುದೀಪ್

ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್ ಜೊತೆ ತಮಿಳು ಕಾಮಿಡಿ ನಟ ಶಿವಕಾರ್ತಿಕೇಯನ್.


ಆತ್ಮೀಯ ಅಪ್ಪುಗೆ

ತಮಿಳು ನಟ ವಿಜಯ್ ಸೇತುಪತಿ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.


ಶಿವಕಾರ್ತಿಕೇಯನ್-ವಿಜಯ್ ಸೇತುಪತಿ

ಸದ್ಯಕ್ಕೆ ಲೀಡ್ ನಲ್ಲಿರುವ ತಮಿಳು ನಟರಾದ ಶಿವಕಾರ್ತಿಕೇಯನ್ ಮತ್ತು ವಿಜಯ್ ಸೇತುಪತಿ ಮಸ್ತಿ.


ಕಿಚ್ಚ ಸುದೀಪ್

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸುದೀಪ್ ಸ್ಟೈಲಿಷ್ ಲುಕ್.


ಕಟೌಟ್/ಸ್ಟ್ಯಾಂಡಿ

ಮುಂದಿನ ತಿಂಗಳು ಸಿನಿಮಾ ತೆರೆ ಕಾಣುತ್ತಿದ್ದು, ಪ್ರಚಾರಕ್ಕೆ ತಯಾರಾಗಿರುವ ಸ್ಟ್ಯಾಂಡಿ ಪೋಸ್ಟರ್ ಗಳು.


ಟ್ವಿಟ್ಟರ್ ನಲ್ಲಿ ಟ್ರೆಂಡ್

ಚೆನ್ನೈನಲ್ಲಿ 'ಮುಡಿಂಜ ಇವನ ಪುಡಿ' ಟ್ವಿಟ್ಟರ್ ನಲ್ಲಿ ಸಖತ್ ಟ್ರೆಂಡಿಂಗ್ ಆಗಿತ್ತು.


ಆಗಸ್ಟ್ ನಲ್ಲಿ ತೆರೆಗೆ?

ಆಗಸ್ಟ್ 14ಕ್ಕೆ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ಸೂರಪ್ಪ ಬಾಬು ಪ್ಲ್ಯಾನ್ ಮಾಡುತ್ತಿದ್ದಾರೆ.


ಸ್ಟಾರ್ ನಟರು

ಕನ್ನಡದ ಸ್ಟಾರ್ ನಟ ಸುದೀಪ್, ತಮಿಳಿನ ಸ್ಟಾರ್ ನಟರಾದ ಧನುಷ್, ವಿಜಯ್ ಸೇತುಪತಿ, ಮತ್ತು ಕಾಮಿಡಿ ನಟ ಶಿವಕಾರ್ತಿಕೇಯನ್ ಒಂದೇ ವೇದಿಕೆಯಲ್ಲಿ ಅಪರೂಪದ ನೋಟ.


English summary
Tamil Actor Dhanush said he would love to share screen space with Kannada Actor Kiccha Sudeep. Tamil Movie Mudinja Ivana Pudi Audio Launch event held at Chennai On July 20th. Sudeep, Sivakarthikeyan, Vijay Sethupathi, Dhaunsh and others graced the event.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada