»   » 'ಯಾರೇ ಕೂಗಾಡಲಿ' ರಿಲೀಸ್ ಡೇಟ್ ಅನೌನ್ಸ್

'ಯಾರೇ ಕೂಗಾಡಲಿ' ರಿಲೀಸ್ ಡೇಟ್ ಅನೌನ್ಸ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಚಿತ್ರ ರೀಮೇಕ್ ಆದರೂ ಚಿತ್ರೋದ್ಯಮದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಡಿಸೆಂಬರ್ 20ರ ಗುರುವಾರದಂದೇ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ರಾಘವೇಂದ್ರ ರಾಜ್ ಕುಮಾರ್ ಘೋಷಿಸಿದ್ದಾರೆ.

'ಯಾರೇ ಕೂಗಾಡಲಿ' ಚಿತ್ರ ಹಲವಾರು ಕಾರಣಗಳಿಗೆ ವಿಶೇಷವಾಗಿದೆ. ಮೊದಲನೆಯದಾಗಿ 'ಮಠ' ಗುರು ಪ್ರಸಾದ್ ಅವರ ಸಂಭಾಷಣೆ. ಎರಡನೆಯ ವಿಶೇಷ ಎಂದರೆ ಸಮುದ್ರ ಖಣಿ ಮೊದಲ ಬಾರಿಗೆ ಕನ್ನಡದಲ್ಲಿ ಆಕ್ಷನ್ ಕಟ್ ಹೇಳಿರುವ ಚಿತ್ರ ಎಂಬುದು.


ಇನ್ನೊಂದು ಆಕರ್ಷನೆ ಚಾರ್ಮಿ ಕೌರ್ ಐಟಂ ಸಾಂಗ್. ಹುಡುಗರು ಚಿತ್ರದ ಬಳಿಕ ಲೂಸ್ ಮಾದ ಯೋಗೀಶ್ ಮತ್ತೊಮ್ಮೆ ಪುನೀತ್ ಗೆ ಸಾಥ್ ನೀಡಿರುವುದು. ಈಗಾಗಲೆ ಪುನೀತ್ ಜೊತೆ 'ಜಾಕಿ' ಚಿತ್ರದಲ್ಲಿ ನಾಯಕಿಯಗಿ ಮಿಂಚಿದ್ದ ಭಾವನಾ ಇಲ್ಲೂ ಕಣ್ಮನ ತಣಿಸುವುದರಲ್ಲಿ ಅನುಮಾನವಿಲ್ಲ.

ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸಿರುವ ಚಿತ್ರ. ಈ ಚಿತ್ರದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ಪೋಷಿಸಿದ್ದಾರೆ.

ಪಾತ್ರವರ್ಗದಲ್ಲಿ ಸಾಧು ಕೋಕಿಲಾ, ಶೋಭರಾಜ್, ಸಿಂಧು, ನಾಗೇಂದ್ರ, ಆಶಾರಾಣಿ, ವರ್ಷಕೃಷ್ಣ, ಚಂದ್ರು, ಅಚ್ಚುತ ಕುಮಾರ್, ಲಕ್ಷ್ಮಿ ಹೆಗಡೆ, ವಿಜಯ ಕೌಂಡಿನ್ಯ, ಡ್ಯಾನಿ ಕುಟ್ಟಪ್ಪ, ಅಖಿಲಾ, ನಿರೋಶ, ಬೇಬಿ ಭೂಮಿ, ಅಕ್ಷಯ್, ಹರೀಶ್, ಶ್ರೀನಿವಾಸ್, ರಂಜಿತಾ, ಧೀರಜ್ ಸೂರ್ಯ, ಲಕ್ಷ್ಮೀಪತಿ, ಶೂಟಿಂಗ್ ಕೃಷ್ಣ, ರಾಧಾಕೃಷ್ಣ, ತುಮಕೂರು ಮೋಹನ್ ಮುಂತಾದವರ ಬಳಗವೇ ಇದೆ. (ಏಜೆನ್ಸೀಸ್)

English summary
Power Star Puneeth Rajkumar and Bhavana starrer Kannada film Yaare Koogadali slated for release on 20th December. is a remake of Tamil movie Porali. It is directed by Samuthirakani and produced by Raghavendra Rajkumar. Puneeth appears in three different get ups in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada