Just In
Don't Miss!
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಯ್ತು 2021ರ ಬಜಾಜ್ ಪಲ್ಸರ್ 220ಎಫ್ ಬೈಕ್
- News
"ಸೋಂಕಿನ ವಿರುದ್ಧ ಲಸಿಕೆಗಳು ಸಂಜೀವಿನಿಯಂತೆ ಕಾರ್ಯ ನಿರ್ವಹಿಸಲಿವೆ"
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ದರ್ಶನ್ 'ಯಜಮಾನ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ನೂರು ದಿನ ಪೂರೈಸಿ ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಬಹಳ ವರ್ಷದ ನಂತರ ದರ್ಶನ್ ಸಿನಿಮಾವೊಂದು ಇಷ್ಟು ದೊಡ್ಡ ಸಕ್ಸಸ್ ಕಂಡಿದೆ ಎಂದೇ ಹೇಳಬಹುದು.
ಮಾರ್ಚ್ 1 ರಂದು ರಾಜ್ಯಾದ್ಯಂತ ತೆರೆಕಂಡಿದ್ದ ಯಜಮಾನ ಸಿನಿಮಾ ಗಳಿಕೆಯಲ್ಲೂ ಕಮಾಲ್ ಮಾಡಿದೆ. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಈಗ ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.
ಸೆಂಚುರಿ ಬಾರಿಸಿದ ದರ್ಶನ್ 'ಯಜಮಾನ' ಸಿನಿಮಾ
ಇದುವರೆಗೂ ಯಾವ ಕನ್ನಡ ಸಿನಿಮಾನೂ ಮಾಡದ ಹೊಸ ದಾಖಲೆಯನ್ನ ತನ್ನ ಖಾತೆಗೆ ಹಾಕಿಕೊಂಡಿದ್ದಾರೆ ಡಿ ಬಾಸ್. ಥಿಯೇಟರ್ ನಲ್ಲಿ ಗಳಿಕೆ, ಟಿವಿಯಲ್ಲಿ ಪ್ರಸಾರವಾದಾಗ ಟಿ.ಆರ್.ಪಿ ರೀತಿಯಲ್ಲಿ ಯೂಟ್ಯೂಬ್ ನಲ್ಲೂ ವೀವ್ಸ್ ಇರುತ್ತೆ. ಈ ವೀವ್ಸ್ ಯಜಮಾನ ಇತಿಹಾಸ ಸೃಷ್ಟಿಸಿದೆ. ಏನಿದು? ಮುಂದೆ ಓದಿ.....

20 ಮಿಲಿಯನ್ ದಾಟಿದ ಟ್ರೈಲರ್ ವೀಕ್ಷಕರ ಸಂಖ್ಯೆ
ಫೆಬ್ರವರಿ 9 ರಂದು ಯೂಟ್ಯೂಬ್ ನಲ್ಲಿ ಅಪ್ ಲೌಡ್ ಆಗಿದ್ದ ಯಜಮಾನ ಟ್ರೈಲರ್ ಈಗ 20 ಮಿಲಿಯನ್ ವೀಕ್ಷಕರ ಸಂಖ್ಯೆಯ ಗಡಿದಾಟಿದೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು. ಕನ್ನಡ ಸಿನಿಮಾದ ಟ್ರೈಲರ್ 20 ಮಿಲಿಯನ್ ಕ್ರಾಸ್ ಮಾಡಿದ್ದು ಇದೇ ಮೊದಲು.
Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..

ಕೆಜಿಎಫ್ ಹಿಂದಿಕ್ಕಿದ ಯಜಮಾನ
ಹಾಗ್ನೋಡಿದ್ರೆ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಟ್ರೈಲರ್ ಈ ಮೊದಲ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಎನಿಸಿಕೊಂಡಿತ್ತು. ಯಜಮಾನ ಟ್ರೈಲರ್ ರಿಲೀಸ್ ಆದ ಬಳಿಕ ಕೆಜಿಎಫ್ ದಾಖಲೆಯನ್ನ ಹಿಂದಿಕ್ಕಿ ಮೊದಲ ಸ್ಥಾನವನ್ನ ಅಲಂಕರಿಸಿಕೊಂಡಿತ್ತು. ಇದೀಗ, ಆ ಸ್ಥಾನವನ್ನ ಯಾರಿಗೂ ಬಿಟ್ಟುಕೊಡದೆ ಮುಂದಕ್ಕೆ ಸಾಗುತ್ತಿದೆ.
ಕೆಜಿಎಫ್ ಕೋಟೆ ಅಲುಗಾಡಿಸಿ 'ಬಾಸ್' ಆದ ಯಜಮಾನ

ಕೆಜಿಎಫ್ ಟ್ರೈಲರ್ ವೀಕ್ಷಣೆ ಎಷ್ಟಿದೆ?
ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಟ್ರೈಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೆಜಿಎಫ್ ಸದ್ಯಕ್ಕೆ 19.60 ಮಿಲಿಯನ್ ಆಗಿದೆ. ಸೋ, ಯಜಮಾನ ಮತ್ತು ಕೆಜಿಎಫ್ ಮಧ್ಯೆ ದೊಡ್ಡ ಅಂತರವಿದ್ದು, ಇನ್ನಷ್ಟು ದಿನಗಳ ಕಾಲ ಈ ಅಂಕಿಅಂಶಗಳ ರೇಸ್ ನಲ್ಲಿ ಯಜಮಾನ ಮುಂದೆಯೇ ಇರಲಿದೆ.
ಅಂದು 'ಬಂಗಾರದ ಮನುಷ್ಯ', ಈಗ 'ಯಜಮಾನ': ಇದೇ ನಿಜವಾದ ಗೆಲುವು

ಕೆಜಿಎಫ್ 2 ಮೇಲೆ ನಿರೀಕ್ಷೆ ಹೆಚ್ಚಿದೆ
ಸದ್ಯದ ಮಟ್ಟಿಗೆ ಯಜಮಾನ ಹಾಗೂ ಕೆಜಿಎಫ್ ಟ್ರೈಲರ್ ಗಳನ್ನ ಹಿಂದಿಕ್ಕುವುದು ಕಷ್ಟಸಾಧ್ಯ. ಆದರೆ, ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಟ್ರೈಲರ್ ಮೇಲೆ ನಿರೀಕ್ಷೆ ಇದೆ. ಹಾಗಾಗಿ, ಪಾರ್ಟ್ 2 ಟ್ರೈಲರ್ ಬಂದಾಗ ಈ ನಂಬರ್ ಕ್ರಾಸ್ ಆಗಬಹುದು ಎಂಬ ಲೆಕ್ಕಾಚಾರ ಮಾಡಬಹುದು. ಬಟ್, ಅಲ್ಲಿಯವರೆಗೂ ಯಜಮಾನ ಮತ್ತು ಕೆಜಿಎಫ್ ಕಿಂಗ್ ಆಫ್ ಯೂಟ್ಯೂಬ್ ಅಷ್ಟೆ.