For Quick Alerts
  ALLOW NOTIFICATIONS  
  For Daily Alerts

  ಶಿವಮೊಗ್ಗದ ಮೂರು ಚಿತ್ರಮಂದಿರಗಳಲ್ಲಿ 'ಯಜಮಾನ' ರಿಲೀಸ್

  |
  Yajamana Movie: ಶಿವಮೊಗ್ಗದ ಮೂರು ಚಿತ್ರಮಂದಿರಗಳಲ್ಲಿ 'ಯಜಮಾನ' ರಿಲೀಸ್ | FILMIBEAT KANNADA

  'ಯಜಮಾನ' ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನಾಳೆ (ಶುಕ್ರವಾರ) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ದರ್ಶನ್ ಅಭಿಮಾನಿಗಳು ಟಿಕೆಟ್ ಹಿಡಿದು ಕಾಯುತ್ತಿದ್ದಾರೆ.

  'ಯಜಮಾನ' ಸಿನಿಮಾದ ಮೂಲಕ ದರ್ಶನ್ ಒಂದುವರೆ ವರ್ಷಗಳ ನಂತರ ಮತ್ತೆ ಬಂದಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಟ್ರೇಲರ್ ಗಳು ಸೂಪರ್ ಹಿಟ್ ಆಗಿದ್ದು, ಚಿತ್ರದ ಮೇಲೆ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.

  'ಯಜಮಾನ' ಚಿತ್ರದ ಯಾವ ಹಾಡು ಎಷ್ಟನೇ ಸ್ಥಾನದಲ್ಲಿದೆ? 'ಯಜಮಾನ' ಚಿತ್ರದ ಯಾವ ಹಾಡು ಎಷ್ಟನೇ ಸ್ಥಾನದಲ್ಲಿದೆ?

  ರಾಜ್ಯಾದಂತ್ಯ ಸಿನಿಮಾದ ಕ್ರೇಜ್ ಜೋರಾಗಿದೆ. ಬೆಂಗಳೂರಿನ ಗಾಂಧಿನಗರದ ನರ್ತಕಿ ಸಿನಿಮಾಗೆ ಮುಖ್ಯ ಚಿತ್ರಮಂದಿರವಾಗಿದೆ. ಕೆಲವೊಂದು ನಗರಗಳಲ್ಲಿ ಸಿನಿಮಾ ಎರಡ್ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶಿವಮೊಗ್ಗದ ಮೂರು ಥಿಯೇಟರ್ ನಲ್ಲಿ 'ಯಜಮಾನ' ದರ್ಶನ ನೀಡುತ್ತಿದ್ದಾನೆ. ಮುಂದೆ ಓದಿ...

  ಶಿವಮೊಗ್ಗದ ಮೂರು ಥಿಯೇಟರ್ ನಲ್ಲಿ 'ಯಜಮಾನ'

  ಶಿವಮೊಗ್ಗದ ಮೂರು ಥಿಯೇಟರ್ ನಲ್ಲಿ 'ಯಜಮಾನ'

  ಶಿವಮೊಗ್ಗ ನಗರದ ಪ್ರಮುಖ ಚಿತ್ರಮಂದಿರಗಳಾದ ವೀರಭದ್ರೇಶ್ವರ, ಮಾಡ್ರನ್ ಹಾಗೂ ಭರತ್ ಸಿನಿಮಾಸ್ ನಲ್ಲಿ 'ಯಜಮಾನ' ಸಿನಿಮಾದ ಪ್ರದರ್ಶನ ಆಗುತ್ತಿದೆ. ಶಿವಮೊಗ್ಗದಲ್ಲಿರುವ ಆರೇಳು ಚಿತ್ರಮಂದಿರಗಳ ಪೈಕಿ ಮೂರು ಥಿಯೇಟರ್ ನಲ್ಲಿ 'ಯಜಮಾನ' ಸಿನಿಮಾದ ಶೋಗಳನ್ನು ಏರ್ಪಡಿಸಲಾಗಿದೆ.

  600ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ

  600ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ

  ಕನ್ನಡ ಭಾಷೆಯಲ್ಲಿ ಮಾತ್ರ 'ಯಜಮಾನ' ರಿಲೀಸ್ ಆಗುತ್ತಿದ್ದು, ದೇಶಾದ್ಯಂತ 600ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಚೆನ್ನೈ, ಹೈದರಾಬಾದ್, ವಿಜಯವಾಡ, ವೈಜಾಕ್, ಅನಂತಪುರ ಸೇರಿದಂತೆ ಸಾಕಷ್ಟು ಕಡೆ ಸಿನಿಮಾ ನಾಳೆಯೇ ರಿಲೀಸ್ ಆಗುತ್ತಿದೆ. ಉತ್ತರ ಅಮೇರಿಕಾದಲ್ಲಿ ಮಾರ್ಚ್ 8 ರಂದು ಸಿನಿಮಾ ಬರ್ತಿದೆ.

  'ಯಜಮಾನ'ನಿಗೆ ಶುಭಕೋರಿದ ಗೆಳೆಯ ವಿನೋದ್ 'ಯಜಮಾನ'ನಿಗೆ ಶುಭಕೋರಿದ ಗೆಳೆಯ ವಿನೋದ್

  ಆರು ಗಂಟೆಯಿಂದಲೇ ಪ್ರದರ್ಶನ

  ಆರು ಗಂಟೆಯಿಂದಲೇ ಪ್ರದರ್ಶನ

  ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ ಆರು ಗಂಟೆಯಿಂದಲೇ ಚಿತ್ರದ ಪ್ರದರ್ಶನಗಳು ಪ್ರಾರಂಭ ಆಗುತ್ತಿವೆ. ಈಗಾಗಲೇ, ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ದರ್ಶನ್ ಕಟ್ ಔಟ್ ರಾರಾಜಿಸುತ್ತಿದೆ. ಅನುಪಮ ಥಿಯೇಟರ್ ನಲ್ಲಿ ರೇಡಿಯೋ ಸಿಟಿ ಕಡೆಯಿಂದ ವಿಶೇಷ ಪ್ರದರ್ಶನ ನಡೆಯುತ್ತಿದೆ.

  ಹರಿಕೃಷ್ಣ ನಿರ್ದೇಶನ, ಶೈಲಜಾ ನಾಗ್ ನಿರ್ಮಾಣ

  ಹರಿಕೃಷ್ಣ ನಿರ್ದೇಶನ, ಶೈಲಜಾ ನಾಗ್ ನಿರ್ಮಾಣ

  ಅಂದಹಾಗೆ, 'ಯಜಮಾನ' ದರ್ಶನ್ ಅಭಿನಯದ 51ನೇ ಸಿನಿಮಾವಾಗಿದೆ. ವಿ ಹರಿಕೃಷ್ಣ ಹಾಗೂ ಪಿ ಕುಮಾರ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಶೈಲಜಾ ನಾಗ್ ಸಿನಿಮಾದ ನಿರ್ಮಾಪಕಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ, ತಾನ್ಯಾ ಹೂಪ್, ರವಿಶಂಕರ್, ಅನೂಪ್ ಠಾಕೂರ್, ದೇವರಾಜ್, ಧನಂಜಯ್ ಸೇರಿದಂತೆ ಸಾಕಷ್ಟು ‌ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಅಮೇರಿಕಾದಲ್ಲಿ ಕ್ಯಾಪ್ಟನ್‌ನೊಂದಿಗೆ ಯಜಮಾನ ಅಮೇರಿಕಾದಲ್ಲಿ ಕ್ಯಾಪ್ಟನ್‌ನೊಂದಿಗೆ ಯಜಮಾನ

  English summary
  Kannada actor Darshan's 'Yajamana' movie will releasing on 3 theaters in shivamogga. Yajamana movie will be releasing on march 1st. The movie is directing by V Harikrishna and producing by Shylaja Nag.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X