Don't Miss!
- News
ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರದ ನೆರವು : ಬಸವರಾಜ ಬೊಮ್ಮಾಯಿ
- Sports
ಸಾಧು ಸಂತರಿಗೆ ಅನ್ನದಾನ ಮಾಡಿ ಆಶೀರ್ವಾದ ಪಡೆದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಕ್ಷಗಾನ ಕಲಾವಿದರನ್ನು ಅತಂತ್ರಕ್ಕೆ ನೂಕಿದ ನೈಟ್ ಕರ್ಫ್ಯೂ
ಕೊರೊನಾ ನಿಯಂತ್ರಣ ಕ್ಕಾಗಿ ಸರ್ಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಧಾರ್ಮಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಸರ್ಕಾರದ ಈ ನಿರ್ಧಾರ ಶ್ರಮಿಕ ವರ್ಗಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಅದರಲ್ಲೂ ಕರಾವಳಿಯ ಕಲಾವಿದರ ಬಾಳನ್ನು ಮತ್ತೆ ಅಧಃಪತನದತ್ತ ದೂಡಿದೆ. ನವೆಂಬರ್ ನಿಂದ ಮಾರ್ಚ್ ತನಕ ಕರಾವಳಿಯಲ್ಲಿ ನಡೆಯುವ ಯಕ್ಷಗಾನ, ನೇಮೋತ್ಸವಕ್ಕೆ ಸರ್ಕಾರದ ಲಾಕ್ ಡೌನ್ ದೊಡ್ಡ ಹೊಡೆತ ನೀಡಿದ್ದು, ಕಳೆದ ವರ್ಷಗಳ ಲಾಕ್‌ಡೌನ್‌ನಿಂದ ಅಪಾರ ಕಷ್ಟ ಅನುಭವಿಸಿದ ಕಲಾವಿದರಿಗೆ ಈ ಬಾರಿಯ ವಾರಾಂತ್ಯದ ಕರ್ಫ್ಯೂ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಕಳೆದ ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವದ, ವಾರ್ಷಿಕ ಉತ್ಸವ ಕಾರ್ಯಗಳು ಈ ಬಾರಿ ಮಾಡೋಕೆ ದೇವಸ್ಥಾನಗಳ ಆಡಳಿತ ಮಂಡಳಿ, ಗ್ರಾಮಸ್ಥರು ನಿರ್ಧಾರ ಮಾಡಿದ್ದರು. ಆದರೆ ಸರ್ಕಾರ ಈಗ ಮತ್ತೆ ಸೆಮಿ ಲಾಕ್‌ಡೌನ್ ಘೋಷಣೆ ಮಾಡಿದ್ದು, ಭಕ್ತರಿಗೆ ನಿರಾಸೆ ಮೂಡಿಸಿದೆ. ಹಲವು ದೇವಸ್ಥಾನಗಳಲ್ಲಿ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು, ಇದೀಗ ಉತ್ಸವಗಳನ್ನು ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ.ಹೀಗಾಗಿ ಸದ್ಯ ದಿನಾಂಕವನ್ನು ಮುಂದೂಡಲಾಗಿದೆ.
ಉತ್ಸವಗಳ ಪರಿಸ್ಥಿತಿ ಈ ರೀತಿಯಾದರೆ, ಇನ್ನು ಯಕ್ಷಗಾನ ಕಲಾವಿದರ ಬದುಕು ಮತ್ತೆ ಅನಿಶ್ಚಿತತೆಯತ್ತ ದೂಡಿದೆ..ಕಳೆದ ಎರಡು ವರ್ಷಗಳಲ್ಲಿ ಲಾಕ್ ಡೌನ್ ಬರೆಯಿಂದ ಕಂಗೆಟ್ಟಿದ್ದ ಕಲಾವಿದರಿಗೆ ಈ ಬಾರಿ ಯಕ್ಷಗಾನ ಆರಂಭದ ಹೊತ್ತಲ್ಲೇ ಸರ್ಕಾರ ಮತ್ತೆ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್‌ಡೌನ್ ನಿಯಮ ಹೇರಿದೆ.

ನೈಟ್ ಕರ್ಫ್ಯೂ ಇಂದಾಗಿ ಜನ ಸೇರುತ್ತಿಲ್ಲ
ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳ ವರೆಗೆ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ನೇಮೋತ್ಸವ, ಕಂಬಳ, ಯಕ್ಷಗಾನ ಸೇರಿದಂತೆ ಹಲವು ಉತ್ಸವಗಳು ನಡೆಯುತ್ತದೆ. ಈ ಹಿನ್ನಲೆಯಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳು ನಿಗದಿ ಯಾಗಿದೆ. ಯಕ್ಷಗಾನ ಕಾರ್ಯಕ್ರಮಗಳು ಕರಾವಳಿಯಾದ್ಯಾಂತ ಈಗಾಗಲೇ ನಿಗದಿಯಾಗಿದೆ. ಆದರೆ ಸರ್ಕಾರದ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂನಿಂದಾಗಿ ಹಲವು ಕಾರ್ಯಕ್ರಮಗಳು ರದ್ದಾಗಿದೆ. ರಾತ್ರಿ ಇಡೀ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಗಳು ಈಗ ಕಾಲಮಿತಿಯಲ್ಲಿ ನಡೆಯುತ್ತಿದೆ. ರಾತ್ರಿ 9.30ವರೆಗೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ ಕಾಲಮಿತಿ ಇರೋದರಿಂದ ಜನರೂ ಸೇರುತ್ತಿಲ್ಲ. ಹೀಗಾಗಿ ಯಕ್ಷಗಾನ ನೋಡೋಕೆ ಜನರೂ ಬರುತ್ತಿಲ್ಲ.ಇದರಿಂದ ಯಕ್ಷಗಾನ ಆಯೋಜಕರು ಕಾರ್ಯಕ್ರಮ ಮುಂದೂಡಿದ್ದಾರೆ.

ಕಲಾವಿದರ ಬದುಕಿನ ಮೇಲೆ ಹೊಡೆತ
ಇದರ ನೇರ ಹೊಡೆತ ಈಗ ಕಲಾವಿದರ ಹೊಟ್ಟೆಯ ಮೇಲೆ ಬಿದ್ದಿದೆ. ಆರು ತಿಂಗಳ ಯಕ್ಷಗಾನ ಪ್ರದರ್ಶನವನ್ನೇ ನಂಬಿ ಜೀವನ ಮಾಡುತ್ತಿದ್ದ ಕಲಾವಿದರಿಗೆ ಸರ್ಕಾರದ ಕರ್ಫ್ಯೂ ಬಡತನದ ಮೇಲೆ ಸವಾರಿ ಮಾಡಿದಂತಾಗಿದೆ. ಯಕ್ಷಗಾನ ರದ್ದಾಗುತ್ತಿರುವ ಹಿನ್ನಲೆಯಲ್ಲಿ ಕಲಾವಿದರು ಮತ್ತೆ ಹೊಟ್ಟೆಗೆ ತಣ್ಣೀರು ಬಟ್ಟೆ ಸುತ್ತಿ ಮಲಗುವಂತಾಗಿದೆ.

ಕೂಲಿಗೆ ತೆರಳಿದ್ದ ಯಕ್ಷಗಾನ ಕಲಾವಿದರು
ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಯಕ್ಷಗಾನ ನಿಂತು ಹೋದಾಗ, ಜೀವನ ನಡೆಸಲು ಕಲಾವಿದರು ಕೂಲಿ ಕೆಲಸಕ್ಕೆ ತೆರಳಿದ್ದರು. ಕಲಾ ಮಾತೆಯನ್ನು ಅಪ್ಪಿದ ಪರಿಣಾಮ ಬದುಕು ಕೂಲಿ ಕೆಲಸದತ್ತ ಹೊರಳಿತ್ತು.ಆದರೆ ಕಲಾಮಾತೆ ಮತ್ತೆ ಕೈ ಹಿಡಿಯುವ ಸಂದರ್ಭದಲ್ಲಿ ಮತ್ತೆ ಸರ್ಕಾರದ ಕರ್ಫ್ಯೂ ಹೊಡೆತ ನೀಡಿದೆ. ಕಲಾವಿದರು ಮತ್ತೆ ಕೂಲಿ ಕೆಲಸದತ್ತ ಹೊರಡುವಂತಾಗಿದೆ.

ಕಲಾವಿದರ ಮೇಲೆ ಸರ್ಕಾರದ ಛಡಿ ಏಟು
ಒಟ್ಟಿನಲ್ಲಿ ರಾಜ ಪೋಷಾಕುನೊಂದಿಗೆ ರಂಗದಲ್ಲಿ ರಾಜನಾಗಬಲ್ಲ, ವೈಯಾರದಿಂದ ರಾಣಿಯಾಗಬಲ್ಲ, ಮಾತಿನಿಂದಲೇ ವಿದೂಷಕ ನಾಗಬಲ್ಲ, ನೋವನ್ನು ಬಣ್ಣದಿಂದ ಮುಚ್ಚಿ ಹಾಸ್ಯಗಾರನಾಗಬಲ್ಲ ಯಕ್ಷಗಾನ ಕಲಾವಿದ ಈಗ ಸರ್ಕಾರದ ಲಾಕ್ ಡೌನ್ ಎಂಬ ಛಡಿಯೇಟಿಗೆ ಮತ್ತೆ ಗುರಿಯಾಗಿದ್ದಾನೆ. ಬಡವನ ಬಡತನದ ಭೀಕರತೆ, ಕೊರೊನಾದ ತೀವ್ರತೆಗಿಂತ ನಾಲ್ಕು ಪಟ್ಟು ಹೆಚ್ಚು ಇರುತ್ತದೆ ಅನ್ನೋದನ್ನು ಸರ್ಕಾರ ಮನಗಾಣಬೇಕಿದೆ.