»   » 'ನವರತನ್ ಜ್ಯುವೆಲರ್ಸ್'ನ ಹೊಸ ಮಳಿಗೆ ಉದ್ಘಾಟಿಸಿದ ರಾಕಿಂಗ್ ಸ್ಟಾರ್ ದಂಪತಿ

'ನವರತನ್ ಜ್ಯುವೆಲರ್ಸ್'ನ ಹೊಸ ಮಳಿಗೆ ಉದ್ಘಾಟಿಸಿದ ರಾಕಿಂಗ್ ಸ್ಟಾರ್ ದಂಪತಿ

Posted By:
Subscribe to Filmibeat Kannada

ಕಳೆದ ಹಲವಾರು ದಶಕಗಳಿಂದ ನಗರದ ಮನೆ ಮಾತಾಗಿರುವ ನವರತನ್ ಜ್ಯುವೆಲರ್ಸ್ ಇದೀಗ ಜಯನಗರದಲ್ಲಿ ತನ್ನ ಹೊಸ ಮಳಿಗೆಯನ್ನು ಆರಂಭಿಸಿದೆ. ಈ ನೂತನ ಮಳಿಗೆಯನ್ನ ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಉದ್ಘಾಟಿಸಿದರು.

ಈ ಮೂಲಕ ಸಿಲಿಕಾನ್ ಸಿಟಿ ಜನರಿಗೆ ಅತ್ಯದ್ಭುತವಾದ ಫಳಫಳ ಹೊಳೆಯುವಂತಹ ಚಿನ್ನಾಭರಣಗಳನ್ನು ತಮ್ಮದಾಗಿಸಿಕೊಳ್ಳುವ ಕನಸನ್ನು ಈಡೇರಿಸಲು ಈ ನವರತನ್ ಡೈಮಂಡ್ ಬಾಟಿಕ್ ಸಿದ್ಧವಾಗಿದೆ.

ಹಾಗಿದ್ರೆ, ನವರತನ್ ಜ್ಯುವೆಲರ್ಸ್ ಹೊಸ ಮಳಿಗೆ ಉದ್ಘಾಟನೆ ಕಾರ್ಯಕ್ರಮ ಹೇಗಿತ್ತು ಎಂದು ಚಿತ್ರಗಳ ಸಮೇತ ನೋಡಿ......

ನವರತನ್ ಜ್ಯುವೆಲರ್ಸ್ ಮಳಿಗೆ ಉದ್ಘಾಟಿಸಿದ ಯಶ್ ದಂಪತಿ

ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಅವರು ಜಯನಗರದಲ್ಲಿ ಸ್ಥಾಪಿಸಲಾಗಿರುವ ನವರತನ್ ಜ್ಯುವೆಲರ್ಸ್ ನೂತನ ಮಳಿಗೆಯನ್ನ ಉದ್ಘಾಟಿಸಿದರು.

'ನವರತನ್ ಜ್ಯುವೆಲರ್ಸ್'ಗೆ ಮೆರಗು ತಂದ ರಾಕಿಂಗ್ ದಂಪತಿ

'ನವರತನ್ ಜ್ಯುವೆಲರ್ಸ್' ಹೊಸ ಮಳಿಗಿಗೆ ಚಾಲನೆ ನೀಡಿದ ರಾಕಿಂಗ್ ದಂಪತಿ ಕಾರ್ಯಕ್ರಮದಲ್ಲಿ ರಾಜ-ರಾಣಿಯಂತೆ ಕಂಗೊಳಿಸಿದ್ದರು. ಉದ್ಘಾಟನೆಯ ಬಳಿಕ ಜ್ಯುವೆಲರ್ಸ್ ನಲ್ಲಿರುವ ಆಭರಣಗಳನ್ನ ನೋಡಿ ಸಂತಸ ವ್ಯಕ್ತಪಡಿಸಿದರು.

ರಾಕಿಂಗ್ ಸ್ಟಾರ್ ದಂಪತಿಗೆ ಕುಪೇಂದ್ರ ರೆಡ್ಡಿ ಸಾಥ್

ನವರತನ್ ಜ್ಯುವಲೆರ್ಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ದಂಪತಿಗೆ, ರಾಜ್ಯಸಭಾ ಸದಸ್ಯರಾದ ಕುಪೇಂದ್ರ ರೆಡ್ಡಿ ಮತ್ತು ಕರ್ನಾಟಕ ಸರ್ಕಾರದ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಮುಖ್ಯಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಈ ವೇಳೆ ನವರತನ್ ನ ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಚಂದ್ ಅವರು ಭಾಗಿಯಾಗಿದ್ದರು.

ರಾಹುಲ್ ಜೈನ್ ಸಂತಸ

ಹೊಸ ಡೈಮಂಡ್ ಬಾಟಿಕ್ ಬಗ್ಗೆ ಮಳಿಗೆಯ ಉಸ್ತುವಾರಿ ಅಧಿಕಾರಿ ರಾಹುಲ್ ಜೈನ್ ಅವರು ಮಾತನಾಡಿ, ``ಗ್ರಾಹಕರ ಈಗಿನ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ಕೇವಲ ವಜ್ರಾಭರಣಕ್ಕೆಂದೇ ಪ್ರತ್ಯೇಕ ಸ್ಟೋರ್ ಅನ್ನು ಆರಂಭಿಸಿದ್ದೇವೆ. ಈ ಮಳಿಗೆಯ ವಿಶೇಷವೆಂದರೆ ಗ್ರಾಹಕರು ವಿಶ್ವಶ್ರೇಷ್ಠವಾದ ಎಲ್ಲಾ ಬಗೆಯ ವಜ್ರಾಭರಣಗಳನ್ನು ಇಲ್ಲಿ ನೋಡಬಹುದಾಗಿದೆ. ಒಂದಕ್ಕಿಂತ ಒಂದು ಆಭರಣ ವಿಶಿಷ್ಟವಾಗಿದ್ದು, ಗ್ರಾಹಕರನ್ನು ಸೆಳೆಯುವಂತಿವೆ. ಅತ್ಯುತ್ತಮವಾದ ವಿನ್ಯಾಸ, ಮಹಿಳೆಯರಿಗೆ ಒಪ್ಪುವಂತಹ ಆಕರ್ಷಣೆಯ ಆಭರಣಗಳು ಇಲ್ಲಿವೆ'' ಎಂದು ತಿಳಿಸಿದರು.

English summary
Rocking Star Yash and His Wife Radhika Pandit inaugurates Navarathan Jewellers New Branch At Jayanagara 4th Blcok

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada