For Quick Alerts
  ALLOW NOTIFICATIONS  
  For Daily Alerts

  ಹಳೆ ಫೋಟೋ ಮೂಲಕ ಯಶ್ ಗೆ ವಿಶ್ ಮಾಡಿದ ರಾಧಿಕಾ ಪಂಡಿತ್

  |

  ನಟ ಯಶ್ ಹಾಗೂ ರಾಧಿಕಾ ಪಂಡಿತ್ ಈಗ ಪತಿ ಮತ್ತು ಪತ್ನಿ ಆಗಿದ್ದಾರೆ. ಆದರೆ, ಆಗಿನ್ನು ಪ್ರೇಮಿಗಳಾಗಿದ್ದರು. ಸುಮಾರು ಎಂಟು ವರ್ಷಗಳ ಹಿಂದಿನ ಫೋಟೋವನ್ನು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಇಂದು (ಡಿಸೆಂಬರ್ 9) ಯಶ್ ಹಾಗೂ ರಾಧಿಕಾ ಪಂಡಿತ್ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಮೂರನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮವನ್ನು ಖುಷಿಯಿಂದ ಆಚರಣೆ ಮಾಡುತ್ತಿದ್ದಾರೆ. ತಮ್ಮ ಹಳೆಯ ಫೋಟೋವೊಂದರ ಮೂಲಕ ಪ್ರೀತಿಯ ಪತಿಗೆ ರಾಧಿಕಾ ಪಂಡಿತ್ ವಿಶ್ ಮಾಡಿದ್ದಾರೆ.

  ಮತ್ತೆ ಯಶ್ ಮೇಲೆ ರಾಧಿಕಾ ಪಂಡಿತ್ ಲವ್ ಆಗಿದೆ

  ''ಒಂದು ಹಳೆಯ ಫೋಟೋ ಮೂಲಕ ತಿಳಿಸುತ್ತಿದ್ದೇನೆ. ನಮ್ಮದು ಮೂರು ವರ್ಷಗಳ ಮದುವೆ ಅಲ್ಲ. ಎಷ್ಟೋ ವರ್ಷಗಳಿಂದ ಕಟ್ಟಿದ ಸಂಬಂಧ. ಹ್ಯಾಪಿ ಆನಿವರ್ಸರಿ ಟು ಮೈಯ್ ಸೋಲ್ ಮೆಟ್'' ಎಂದು ರಾಧಿಕಾ ಪಂಡಿತ್ ಬರೆದಿದ್ದಾರೆ.

  ಒಟ್ಟಿಗೆ ಚಿತ್ರರಂಗದ ಪ್ರಯಾಣ ಶುರು ಮಾಡಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಸ್ನೇಹಿತರಾಗಿ, ಪ್ರೇಮಿಗಳಾಗಿ ಈಗ ಗಂಡ-ಹೆಂಡತಿಯಾಗಿದ್ದಾರೆ. ಡಿಸೆಂಬರ್ 9, 2016 ಯಶ್ ರಾಧಿಕಾ ಮದುವೆಯಾದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

  ಆಯ್ರಾ ಬರ್ತಡೇಯಲ್ಲಿ ಯಶ್-ದರ್ಶನ್ ಅಪ್ಪುಗೆಯ ಫೋಟೋ ವೈರಲ್

  ಒಂದು ಕಡೆ ವಿವಾಹ ವಾರ್ಷಿಕೋತ್ಸವದ ಸಂಭ್ರಮವಾದರೆ, ಮತ್ತೊಂದು ಕಡೆ ಯಶ್ ನಿನ್ನೆ ಸೌತ್ ಇಂಡಿಯಾ ಸೆನ್ಸೆಷನ್ ಹೀರೋ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಚೆನ್ನೈನಲ್ಲಿ ಈ ಪ್ರಶಸ್ತಿಯನ್ನು ಯಶ್ ರಿಗೆ ನೀಡಲಾಗಿದೆ.

  English summary
  Yash and Radhika Pandit 3rd wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X