»   » ನಿಶ್ಚಿತಾರ್ಥ ಮಾಡಿಕೊಳ್ಳುವುದೇ ಉಂಟಂತೆ: ಕಾಗೆ ಹಾರಿಸಿದ್ದು ಯಾಕೆ?

ನಿಶ್ಚಿತಾರ್ಥ ಮಾಡಿಕೊಳ್ಳುವುದೇ ಉಂಟಂತೆ: ಕಾಗೆ ಹಾರಿಸಿದ್ದು ಯಾಕೆ?

Posted By:
Subscribe to Filmibeat Kannada

''ಏನ್ ಸಾರ್, ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥ ಅಂತೆ! ಹೌದಾ?'' ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತು ನಿರ್ಮಾಪಕ ಕೆ.ಮಂಜು ನೀಡಿದ ಉತ್ತರ - ''ನಮ್ಮ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಒಂದು ಐಲ್ಯಾಂಡ್ ನಲ್ಲಿ ಸೆಟ್ ಹಾಕಿದ್ದೀವಿ. ಶೂಟಿಂಗ್ ಜೊತೆ ಎಲ್ಲರೂ ಪಿಕ್ ನಿಕ್ ಮಾಡ್ಕೊಂಡ್ ಬರ್ತೀವಿ'' ಅಂತ ಹೇಳ್ಬಿಟ್ರು.!

ಹಾಗೆ ಮಾಧ್ಯಮದವರಿಗೆ ಸುಳಿವು ನೀಡದೆ ಎಂಗೇಜ್ಮೆಂಟ್ ಮಾಡಿಕೊಂಡು ಬಂದ ರಾಧಿಕಾ ಪಂಡಿತ್ ಹಾಗೂ ಯಶ್ ಗೆ ಪ್ರಶ್ನೆಗಳ ಸುರಿಮಳೆ ಎದುರಾಗಿದ್ದು ನಿನ್ನೆ ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ...

''ನಿಶ್ಚಿತಾರ್ಥದ ಜೊತೆ ಶೂಟಿಂಗ್ ಕೂಡ ಆಯ್ತಾ.?'' ಅಂತ ತೂರಿ ಬಂದ ಪ್ರಶ್ನೆಗೆ ''ಮಂಜು ಕಾಗೆ ಹಾರಿಸಿದ್ರು. ಅದನ್ನ ನೀವು ನಂಬಬೇಡಿ. ಅಲ್ಲಿ ಯಾವ ಶೂಟಿಂಗ್ ಕೂಡ ಇರ್ಲಿಲ್ಲ'' ಅಂದ್ರು ಯಶ್. [ಮಾಧ್ಯಮಗಳ ಮುಂದೆ ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ]

ಅಲ್ಲ, ನಿಶ್ಚಿತಾರ್ಥ ಮಾಡಿಕೊಳ್ಳೋದೇ ಉಂಟಂತೆ, ಕಾಗೆ ಹಾರಿಸೋದು ಬೇಕಿತ್ತಾ.? ಅಂತ ನೀವು ಕೇಳ್ಬೋದು. ಅದಕ್ಕೆ ಉತ್ತರ ನೀಡವ್ರೆ ಯಶ್-ರಾಧಿಕಾ ಪಂಡಿತ್. ಮುಂದೆ ಓದಿ....

ತುಂಬಾ ಸ್ಪೆಷಲ್ ಪ್ರೆಸ್ ಮೀಟ್

''ನಾವಿಬ್ಬರು ಈ ತರಹ ಅದೆಷ್ಟೋ ಪ್ರೆಸ್ ಮೀಟ್ ನಲ್ಲಿ ಬಂದು ಕೂತಿದ್ದೀವಿ. ಆದ್ರೆ, ಇದು ತುಂಬಾ ಸ್ಪೆಷಲ್'' - ಯಶ್ [ಗೋವಾದಲ್ಲಿ ನಿಶ್ಚಿತಾರ್ಥ: ಯಶ್ ಬಿಚ್ಚಿಟ್ಟ ರಹಸ್ಯ]

ದೊಡ್ಡದಾಗಿ ನಿಶ್ಚಿತಾರ್ಥ ಮಾಡಿಕೊಂಡರೆ....

''ಬೆಂಗಳೂರಿಗೆ ಬಂದ ತಕ್ಷಣ ಮೊದಲು ಪ್ರೆಸ್ ಮೀಟ್ ಮಾಡ್ಬೇಕು ಅಂತ ಯೋಚನೆ ಮಾಡಿದ್ದೆ. ಯಾಕಂದ್ರೆ, ನೀವೆಲ್ಲರೂ ನನಗೆ ಮತ್ತು ರಾಧಿಕಾಗೆ ಪ್ರತಿ ಹಂತದಲ್ಲೂ ಸಪೋರ್ಟ್ ಮಾಡಿದ್ದೀರಾ. ದೊಡ್ಡದಾಗಿ ನಿಶ್ಚಿತಾರ್ಥ ಮಾಡಿಕೊಂಡರೆ, ಕಂಟ್ರೋಲ್ ಮಾಡುವುದು ಕಷ್ಟ ಆಗುತ್ತೆ ಅಂತ ಭಯ ಪಟ್ಟಿದ್ದೆ'' - ಯಶ್ [ಮದುವೆ ನಂತರ ನಟಿ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಗುಡ್ ಬೈ.?]

ಪ್ರೈವೇಟ್ ಅಫೇರ್

''ನಿಶ್ಚಿತಾರ್ಥವನ್ನ ತುಂಬಾ ಪ್ರೈವೇಟ್ ಅಫೇರ್ ತರಹ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ವಿ. ನಮಗೆ ಅನಿಸಿಲ್ಲ, ಇಷ್ಟು ದೊಡ್ಡ ಮಟ್ಟದಲ್ಲಿ ಆಗುತ್ತೆ ಅಂತ. ಆ ಉದ್ದೇಶದಿಂದ ತುಂಬಾ ಸೀಕ್ರೆಟ್ ಅನ್ನೋ ತರಹ ಆಯ್ತು'' - ರಾಧಿಕಾ ಪಂಡಿತ್ [ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

ಇಂಡೋ-ವೆಸ್ಟರ್ನ್ ಶೈಲಿಯ ನಿಶ್ಚಿತಾರ್ಥ

''ನನಗೆ ನಿಶ್ಚಿತಾರ್ಥ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಬೇಕಿತ್ತು. ಹೀಗಾಗಿ ಕ್ರಾಪ್ ಟಾಪ್ ಮತ್ತು ಸ್ಕರ್ಟ್ ಔಟ್ ಫಿಟ್ ನ ಸಬ್ಯಸಾಚಿ ಕಲೆಕ್ಷನ್ ನಿಂದ ಪಿಕ್ ಮಾಡಿದ್ದು. ಯಶ್ ಡ್ರೇಪ್ ಕುರ್ತಾ ಹಾಕಿದ್ದರು'' - ರಾಧಿಕಾ ಪಂಡಿತ್ [ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ವೈಟ್ ಸೆಟ್

''ಸೆಟ್ ಫುಲ್ ವೈಟ್ ಕಾನ್ಸೆಪ್ಟ್ ಮೇಲೆ ಮಾಡಿದ್ದು. ಅರುಣ್ ಸಾಗರ್ ಕೂಡ ಸೆಟ್ ವರ್ಕ್ ಮಾಡಿದ್ದರು'' - ರಾಧಿಕಾ ಪಂಡಿತ್

ರಾಧಿಕಾ ಆಸೆಯಂತೆ ನಿಶ್ಚಿತಾರ್ಥ

''ಚಿಕ್ಕವಯಸ್ಸಿಂದಲೂ ರಾಧಿಕಾ ರವರ ಏನೇನು ಆಸೆ ಇತ್ತು. ಅದನ್ನೆಲ್ಲಾ ಲಿಸ್ಟ್ ಮಾಡಿ, ಅದಕ್ಕೆ ತಕ್ಕಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು'' - ಯಶ್

ಮದುವೆ ಯಾವಾಗ?

''ಮದುವೆ ಡೇಟ್ ಇನ್ನೂ ಫೈನಲ್ ಆಗಿಲ್ಲ. ಡಿಸೆಂಬರ್ ಅಥವಾ ಜನವರಿ ಅಂತ ಅಂದುಕೊಂಡಿದ್ದೀವಿ. ಸಂಪ್ರದಾಯದ ಪ್ರಕಾರ ಫಿಕ್ಸ್ ಆದ್ಮೇಲೆ ನಾವೇ ಅನೌನ್ಸ್ ಮಾಡ್ತೀವಿ'' - ರಾಧಿಕಾ ಪಂಡಿತ್

ಯಾಕೆ ಕಾಮೆಂಟ್ ಮಾಡ್ತಿರ್ಲಿಲ್ಲ?

''ತೋರಿಕೆಗಾಗಿ ಪ್ರೀತಿ ಮಾಡಿಲ್ಲ. ಜವಾಬ್ದಾರಿ ಇಂದ ನಡೆದುಕೊಳ್ಳಬೇಕು ಅಂತ ನಾವು ನಮ್ಮ ಸಂಬಂಧದ ಬಗ್ಗೆ ಎಲ್ಲೂ ಹೇಳಿಕೊಂಡಿರ್ಲಿಲ್ಲ'' - ಯಶ್

English summary
Kannada Actor Yash and Kannada Actress Radhika Pandit addressed the Press and Media for the first time after Engagement at Gold Finch Hotel, Bengaluru on Aug 16th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada