»   » ಮಾಧ್ಯಮಗಳ ಮುಂದೆ ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ

ಮಾಧ್ಯಮಗಳ ಮುಂದೆ ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ

Posted By:
Subscribe to Filmibeat Kannada

'ನಂದ ಗೋಕುಲ' ಸೀರಿಯಲ್ ಶುರುವಾದಾಗಿನಿಂದ್ಲೂ ನಟ ಯಶ್ ಮತ್ತು ರಾಧಿಕಾ ಪಂಡಿತ್ ಪರಿಚಿತರು. ಹತ್ತು ವರ್ಷಗಳ ಸ್ನೇಹ ಇರುವ ಯಶ್ ಹಾಗೂ ರಾಧಿಕಾ ಪಂಡಿತ್ ಮಧ್ಯೆ ಪ್ರೀತಿ ಮೊಳಕೆಯೊಡೆದಿದ್ದು ಹೇಗೆ.?

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ರಾಧಿಕಾ ಪಂಡಿತ್ ಗೆ ಯಶ್ ಪ್ರಪೋಸ್ ಮಾಡಿದ್ದ ಶೈಲಿ ಎಲ್ಲರಿಗೂ ಇಷ್ಟವಾಗಿದೆ. ಅದೇ ರೀತಿ ನಿಜ ಜೀವನದಲ್ಲೂ ಮನದನ್ನೆ ರಾಧಿಕಾ ಮುಂದೆ ತಮ್ಮ ಪ್ರೀತಿ ನಿವೇದನೆ ಮಾಡಿಕೊಂಡಿದ್ರಾ ಯಶ್.?

ಅಸಲಿಗೆ ರಾಧಿಕಾ-ಯಶ್ ಫ್ರೆಂಡ್ ಶಿಪ್, ಪ್ರೀತಿಗೆ ತಿರುಗಿದ್ದು ಯಾವಾಗ.? ಇಬ್ಬರಲ್ಲಿ ತುಂಬಾ ಪೊಸ್ಸೆಸ್ಸಿವ್ ಯಾರು.? ಈ ಎಲ್ಲಾ ಪ್ರಶ್ನೆಗಳಿಗೆ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ನಿನ್ನೆ ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮನಬಿಚ್ಚಿ ಉತ್ತರ ನೀಡಿದರು. [ಇನ್ಮುಂದೆ ಯಶ್ ಗೆ ಏನಾದ್ರೂ ಹೇಳ್ಬೊದು-ಕೇಳ್ಬೊದು]

ರಾಧಿಕಾ ಪಂಡಿತ್ 'ಯಶ'ಸ್ವಿ ಪ್ರೇಮ ಪುರಾಣ ತಿಳಿಯುವ ಕುತೂಹಲ ನಿಮಗೆ ಇದ್ದರೆ, ಕೆಳಗಿರುವ ಫೋಟೋ ಸ್ಲೈಡ್ ಗಳನ್ನು ಕ್ಲಿಕ್ಕಿಸಿ, ಓದಿರಿ.....

ಲವ್ ಶುರುವಾಗಿದ್ದು ಯಾವಾಗ.?

''ಫ್ರೆಂಡ್ ಶಿಪ್ ಹತ್ತು ವರ್ಷಗಳಿಂದ ಇತ್ತು. ಸೀರಿಯಲ್ ನಿಂದಲೂ ಪರಿಚಯ ಇತ್ತು. ಆದ್ರೆ, ಲವ್ ಅಂತ ಶುರು ಆಗಿದ್ದು 5 ವರ್ಷಗಳಿಂದ'' - ರಾಧಿಕಾ ಪಂಡಿತ್ [ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ಮೊದಲು ಪ್ರಪೋಸ್ ಮಾಡಿದ್ದು ಯಾರು.?

''ನಾನೇ ಮೊದಲು ಪ್ರಪೋಸ್ ಮಾಡಿದ್ದು'' - ಯಶ್ [ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ]

ಹೇಗೆ ಪ್ರಪೋಸ್ ಮಾಡಿದ್ರು.?

''ಮೊದಲು ಫೋನ್ ನಲ್ಲಿ ಪ್ರಪೋಸ್ ಮಾಡಿದ್ರು. ಸಿನಿಮಾಗಳಲ್ಲಿ ಪ್ರಪೋಸ್ ಸೀನ್ ಗಳು ಎಷ್ಟು ರೋಮ್ಯಾಂಟಿಕ್ ಆಗಿರುತ್ತೆ. ನೀನೇನು ಇಷ್ಟು ನೀರಸವಾಗಿ ಪ್ರಪೋಸ್ ಮಾಡ್ಬಿಟ್ಟೆ ಅಂತ ನಾನು ಹೇಳಿದ್ದೆ'' - ರಾಧಿಕಾ ಪಂಡಿತ್ [ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.?]

ಯಶ್ ಕೊಟ್ಟ ಸರ್ ಪ್ರೈಸ್ ಏನು.?

''ತುಂಬಾ ಬೋರಿಂಗ್ ಆಗಿ ಪ್ರಪೋಸ್ ಮಾಡ್ದೆ ಅಂತ ಯಾವಾಗ್ಲೂ ಅವಳ ಕಂಪ್ಲೇಂಟ್ ಇತ್ತು. ಅದಕ್ಕೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಒಂದು ಪ್ರಪೋಸಲ್ ಸೀನ್ ಮಾಡಿ, ಬೆಸ್ಟ್ ಪ್ರಪೋಸಲ್ ಯಾವ ತರಹ ಇರಬೇಕು ಅಂತ ಐಡಿಯಾ ಮಾಡಿದ್ವಿ. ನನ್ನ ಕಡೆಯಿಂದ ಅದೊಂದು ಗಿಫ್ಟ್ ಅವಳಿಗೆ'' - ಯಶ್ [ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

ಪ್ರಪೋಸ್ ಮಾಡಿದ ತಕ್ಷಣ ಒಪ್ಕೊಂಡ್ ಬಿಟ್ರಾ.?

''ಪ್ರಪೋಸ್ ಮಾಡಿದ ತಕ್ಷಣ ನಾನು ಒಪ್ಪಿಕೊಳ್ಳಲಿಲ್ಲ. ಸ್ವಲ್ಪ ಟೈಮ್ ತಗೊಂಡೆ. ನಾನು ಸಿನಿಮಾ ಕೂಡ ಅಷ್ಟು ಬೇಗ ಒಪ್ಪಿಕೊಳ್ಳಲ್ಲ. ತುಂಬಾ ಯೋಚನೆ ಮಾಡ್ತೀನಿ. ಇನ್ನೂ ಲೈಫ್ ಪಾರ್ಟ್ನರ್ ಅಂದ್ರೆ ತುಂಬಾ ಯೋಚನೆ ಮಾಡ್ಬೇಕು. ಯಶ್ ಒಳ್ಳೆ ಫ್ರೆಂಡ್. ಅದರಲ್ಲಿ ಡೌಟ್ ಇಲ್ಲ. ಇದು ಸೀರಿಯಸ್ ಡಿಸಿಷನ್ ಆದ್ರಿಂದ ಟೈಮ್ ತಗೊಂಡೆ'' - ರಾಧಿಕಾ ಪಂಡಿತ್ [ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.!]

ತಂದೆ-ತಾಯಿ ರೆಸ್ಪಾನ್ಸ್ ಹೇಗಿತ್ತು.?

''ವರಮಹಾಲಕ್ಷ್ಮಿ ಹಬ್ಬದ ದಿನ ನನ್ನನ್ನ ಯಶ್, ಅವರ ಮನೆಗೆ ಮೊದಲ ಬಾರಿ ಕರ್ಕೊಂಡು ಹೋಗಿದ್ರು. ಅವಾಗಲೇ ಯಶ್ ತಾಯಿ ಹೇಳಿದ್ದರು, 'ಮೊದಲನೇ ಹೆಣ್ಣು ಮಗಳನ್ನ ನೀನು ಹಬ್ಬದ ದಿನ ಮನೆಗೆ ಕರ್ಕೊಂಡು ಬಂದಿದ್ದೀಯಾ ಅಂದ್ರೆ ಇವಳೆ ನನ್ನ ಸೊಸೆ'' ಅಂತ'' - ರಾಧಿಕಾ ಪಂಡಿತ್. [ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!]

ನಿಮ್ಮಿಬ್ಬರಲ್ಲಿ ಪೊಸ್ಸೆಸ್ಸಿವ್ ಯಾರು.?

''ನಮ್ಮಿಬ್ಬರಲ್ಲಿ ಪೋಸೆಸ್ಸಿವ್ನೆಸ್ ಇಬ್ಬರಿಗೂ ಇದೆ. ಅದ್ರೆ, ಆಗಾಗ ಡಿಸ್ಪ್ಲೇ ಆಗುವುದು ರಾಧಿಕಾ ಕಡೆಯಿಂದ'' - ಯಶ್

English summary
Kannada Actor Yash and Kannada Actress Radhika Pandit revealed their real love story in a press meet held at Gold Finch Hotel, Bengaluru on Aug 16th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada