For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಮುಂದೆ ಪುಟಾಣಿ ಯಶ್: ಮೊದಲ ಬಾರಿ ಫೋಟೊ ಬಹಿರಂಗ

  |

  ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೆಯ ಮಗು ಜನಿಸಿದ ಏ. 30ಕ್ಕೆ ಆರು ತಿಂಗಳು ಭರ್ತಿ. ಐರಾ ಜನಿಸಿದ ಬೆನ್ನಲ್ಲೇ ಮತ್ತೊಂದು ಖುಷಿ ಸುದ್ದಿ ನೀಡಿದ್ದ ಈ ದಂಪತಿಗೆ ಹುಟ್ಟಿದ ಮಗು ಹೇಗಿದೆ ಎಂಬ ಅಭಿಮಾನಿಗಳ ಕುತೂಹಲ ತಣಿದಿರಲಿಲ್ಲ. ಏಕೆಂದರೆ ಮಗಳು ಐರಾ ಫೋಟೊ ಹಾಗೂ ವಿಡಿಯೋಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದ ಈ ತಾರಾ ದಂಪತಿ, ಮಗ ಹೇಗಿದ್ದಾನೆ ಎಂಬುದನ್ನು ಹೊರ ಜಗತ್ತಿಗೆ ತೋರಿಸಿರಲಿಲ್ಲ.

  ಬಾಲಿವುಡ್ ದಂತಕಥೆ ರಿಷಿ ಕಪೂರ್ ಇನ್ನಿಲ್ಲ | Rishi Kapoor

  ಐರಾ ಮತ್ತು ಜೂನಿಯರ್ ಯಶ್ ಇಬ್ಬರ ಮುದ್ದು ಮುಖವನ್ನು ನೋಡಲು ಕಾತರದಿಂದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಯಶ್ ಮತ್ತು ರಾಧಿಕಾ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಮ್ಮ ಎರಡನೆಯ ಕುಡಿಯ ಮುದ್ದಾದ ಫೋಟೊವನ್ನು ಹಂಚಿಕೊಂಡಿದ್ದಾರೆ. ಪುಟಾಣಿಯ ಚೆಂದ ನಗು ಎಲ್ಲರನ್ನೂ ಮುದಗೊಳಿಸಿದೆ. ಫೋಟೊ ಹಾಕಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್ಸ್‌ಗಳು ಬಂದಿವೆ. ಮುಂದೆ ಓದಿ...

  ಆರು ತಿಂಗಳು ತುಂಬಿದೆ

  ಆರು ತಿಂಗಳು ತುಂಬಿದೆ

  "ನೀವೆಲ್ಲರು ಕಾತರದಿಂದ ಕಾಯುತ್ತಿದ್ದ ಸಮಯ ಬಂದಿದೆ. ಪುತ್ರನಿಗೆ 6 ತಿಂಗಳು ತುಂಬಿದೆ. ನಿಮ್ಮೆಲ್ಲರಿಗೂ ಶುಭಾಶಯ ಹೇಳಲು ಸಿದ್ಧನಾಗಿದ್ದಾನೆ. ನೀವು ರೆಡಿನಾ" ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಪೋಸ್ಟ್ ಮಾಡಿದ್ದರು. ಇದು ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.

  ಯಶ್ ಮುಂದಿನ ಸಿನಿಮಾ ನಿರ್ದೇಶಕರು ಯಾರು? ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಕಿಂಗ್ ಸ್ಟಾರ್?ಯಶ್ ಮುಂದಿನ ಸಿನಿಮಾ ನಿರ್ದೇಶಕರು ಯಾರು? ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಕಿಂಗ್ ಸ್ಟಾರ್?

  ನನ್ನ ಪುಟಾಣಿ ಗೆಳೆಯ

  ನನ್ನ ಪುಟಾಣಿ ಗೆಳೆಯ

  ನನ್ನ ಜೀವದ ಪುಟಾಣಿ ಗೆಳೆಯನಿಗೆ ಹಾಯ್ ಹೇಳಿ. ನಿಮ್ಮ ಎಲ್ಲ ಪ್ರೀತಿ ಮತ್ತು ಹಾರೈಕೆ ಅವನಿಗೆ ನೀಡಿ. ನಿಮ್ಮ ಪ್ರೀತಿ... ಆಶೀರ್ವಾದ... ಹಾರೈಕೆ... ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ ಎಂದು ಯಶ್ ಹೇಳಿದ್ದಾರೆ.

  ನಮ್ಮನೆ ಕಾಮನಬಿಲ್ಲು

  ನಮ್ಮನೆ ಕಾಮನಬಿಲ್ಲು

  'ನನ್ನ ಕಣ್ಣಿನ ಸೇಬನ್ನ, ನಮ್ಮ ಕುಟುಂಬದ ಕಾಮನಬಿಲ್ಲನ್ನು ಹಾಗೂ ಅಮ್ಮನ ಮಗನನ್ನು ಪರಿಚಯಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಅವನ ಮೇಲಿರಲಿ' ಎಂದು ರಾಧಿಕಾ ತಿಳಿಸಿದ್ದಾರೆ.

  ಯಶ್ ಹೊಸ ಸಿನಿಮಾಗೆ ದಕ್ಷಿಣ ಭಾರತದ ಸ್ಟಾರ್ ನಟಿ ನಾಯಕಿ?ಯಶ್ ಹೊಸ ಸಿನಿಮಾಗೆ ದಕ್ಷಿಣ ಭಾರತದ ಸ್ಟಾರ್ ನಟಿ ನಾಯಕಿ?

  ಮೆಚ್ಚಿಕೊಂಡ ಅಖಿಲ್ ಅಕ್ಕಿನೇನಿ

  ಮೆಚ್ಚಿಕೊಂಡ ಅಖಿಲ್ ಅಕ್ಕಿನೇನಿ

  ಲಿಟ್ಲ್ ಮ್ಯಾನ್‌ಗೆ ಶುಭವಾಗಲಿ! ನಿನ್ನ ತಂದೆಯಂತೆಯೇ ಆ ಸ್ಥಾನವನ್ನು ತುಂಬಿಕೊಳ್ಳುವುದು ಬಹಳ ಕಠಿಣ. ಆದರೆ ನಿಜಕ್ಕೂ ನೀನು ಬೆಂಕಿಯಂತಾಗುತ್ತೀಯ ಎಂದು ನನಗೆ ಖಾತರಿಯಿದೆ ಎಂದು ತೆಲುಗು ನಟ ಅಖಿಲ್ ಅಕ್ಕಿನೇನಿ ಪ್ರತಿಕ್ರಿಯಿಸಿದ್ದಾರೆ.

  ಜೂನಿಯರ್ ಯಶ್‌ಗೆ ಶುಭ ಹಾರೈಕೆ

  ಜೂನಿಯರ್ ಯಶ್‌ಗೆ ಶುಭ ಹಾರೈಕೆ

  ಯಶ್ ಹಾಕಿರುವ ಪೋಸ್ಟ್‌ಗೆ ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ ಬಿದ್ದಿವೆ. ಮಗುವಿನ ನಗು ಬಹಳ ಸೊಗಸಾಗಿದೆ. ಜೂನಿಯರ್ ಯಶ್ ನಿಮ್ಮಂತೆಯೇ ಬೆಳೆಯಲಿ. ಸಿನಿಮಾರಂಗದಲ್ಲಿ ಹೆಸರು ಮಾಡಲಿ ಎಂದು ಅನೇಕರು ಹಾರೈಸಿದ್ದಾರೆ.

  ಐಸ್ ಕ್ಯಾಂಡಿ ತಿಂದು ಅಮ್ಮನಿಗೆ ಕೆಲಸ ಕೊಟ್ಟ ಐರಾ ಯಶ್ಐಸ್ ಕ್ಯಾಂಡಿ ತಿಂದು ಅಮ್ಮನಿಗೆ ಕೆಲಸ ಕೊಟ್ಟ ಐರಾ ಯಶ್

  ಮತ್ತೊಂದು ಫೋಟೊ ಬಹಿರಂಗ

  ಮತ್ತೊಂದು ಫೋಟೊ ಬಹಿರಂಗ

  ಯಶ್ ಅವರ ಅಭಿಮಾನಿಗಳ ಖಾತೆಯೊಂದು ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಅವರು ಕುಟುಂಬದ ಸುಂದರವಾದ ಫೋಟೊವನ್ನು ಹಂಚಿಕೊಂಡಿದೆ. ಯಶ್-ರಾಧಿಕಾ ದಂಪತಿ ತಮ್ಮ ಇಬ್ಬರೂ ಮಕ್ಕಳನ್ನು ಒಟ್ಟಿಗೆ ಕ್ಯಾಮೆರಾಕ್ಕೆ ತೋರಿಸಿರುವ ಫೋಟೊ ಇದು.

  English summary
  Yash and Radhika Pandit has shared their son's photo for the first time on social media as the baby turns 6 months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X