For Quick Alerts
  ALLOW NOTIFICATIONS  
  For Daily Alerts

  ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!

  By Harshitha
  |

  ''ಸದ್ಯಕ್ಕೆ ನಾನು ನನ್ನ ವೃತ್ತಿ ಜೀವನದ ಬಗ್ಗೆ ಗಮನ ಹರಿಸುತ್ತಿದ್ದೇನೆ. ಇನ್ನೆರಡು ವರ್ಷ ಮದುವೆ ಬಗ್ಗೆ ಮಾತಾಡುವುದಿಲ್ಲ. ಹಾಗೇನಾದರೂ, ಮದುವೆ ಆಗುವುದಾದರೆ ನಿಮ್ಮೆಲ್ಲರಿಗೂ ಹೇಳುತ್ತೇನೆ. ನನ್ನ ಪ್ರೀತಿ ವೈಯುಕ್ತಿಕ ವಿಚಾರ. ಅದನ್ನ ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ.''

  - ಮದುವೆ, ಪ್ರೀತಿ ಬಗ್ಗೆ ಯಾರೇ ಪ್ರಶ್ನೆ ಕೇಳಿದರೂ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ನೀಡುತ್ತಿದ್ದ ಪ್ರತಿಕ್ರಿಯೆ ಇಷ್ಟೇ.

  ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ನಡುವೆ 'ಸಂಥಿಂಗ್ ಸಂಥಿಂಗ್' ನಡೆಯುತ್ತಿದೆ ಎಂಬ ವಿಷಯ ಗಾಂಧಿನಗರದ ಮಟ್ಟಿಗೆ 'ಓಪನ್ ಸೀಕ್ರೆಟ್' ಆಗಿದ್ರೂ, ತಮ್ಮ ಪ್ರೀತಿ ಬಗ್ಗೆ ಯಶ್ ಆಗ್ಲಿ, ರಾಧಿಕಾ ಪಂಡಿತ್ ಆಗ್ಲಿ ಇದುವರೆಗೂ ಓಪನ್ ಆಗಿ ಒಪ್ಪಿಕೊಂಡಿರ್ಲಿಲ್ಲ, ನಿರಾಕರಣೆ ಕೂಡ ಮಾಡಿರ್ಲಿಲ್ಲ. [ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.!]

  ಈಗ ಏಕ್ದಂ ನಿಶ್ಚಿತಾರ್ಥ ಮಾಡಿಕೊಳ್ಳುವ ಸುದ್ದಿ ಕೊಟ್ಟು ಸ್ಯಾಂಡಲ್ ವುಡ್ ಮಟ್ಟಿಗೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ ಈ ಜೋಡಿ. ಮುಂದೆ ಓದಿ.....

  ಗೃಹಸ್ಥಾಶ್ರಮಕ್ಕೆ ಕಾಲಿಡಲು ಯಶ್ ಸಜ್ಜು.!

  ಗೃಹಸ್ಥಾಶ್ರಮಕ್ಕೆ ಕಾಲಿಡಲು ಯಶ್ ಸಜ್ಜು.!

  ಈ ಸುದ್ದಿ ಕೇಳಿ ಅದೆಷ್ಟು ಹುಡುಗಿಯರಿಗೆ ಹಾರ್ಟ್ ಬ್ರೇಕ್ ಆಗುತ್ತೋ, ಗೊತ್ತಿಲ್ಲ. ಆದ್ರೆ, ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಶ್ ಮಾತ್ರ ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. [ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?]

  ದಾಂಪತ್ಯ ಜೀವನಕ್ಕೆ ಅಡಿಯಿಡಲಿದ್ದಾರೆ ರಾಧಿಕಾ ಪಂಡಿತ್

  ದಾಂಪತ್ಯ ಜೀವನಕ್ಕೆ ಅಡಿಯಿಡಲಿದ್ದಾರೆ ರಾಧಿಕಾ ಪಂಡಿತ್

  ತಮ್ಮ ಪ್ರೀತಿಯ ಇನಿಯ 'ಯಶು' ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರಾಧಿಕಾ ಪಂಡಿತ್ ಮನಸ್ಸು ಮಾಡಿದ್ದಾರೆ. [ನನ್ನ ಪತಿ ಹೀಗಿರಬೇಕೆಂದು ರಾಧಿಕಾ ಹೇಳಿದ್ದು ಯಾರಿಗೆ?]

  ವರಮಹಾಲಕ್ಷ್ಮಿ ಹಬ್ಬದಂದು ನಿಶ್ಚಿತಾರ್ಥ

  ವರಮಹಾಲಕ್ಷ್ಮಿ ಹಬ್ಬದಂದು ನಿಶ್ಚಿತಾರ್ಥ

  ನಾಳೆ (ಆಗಸ್ಟ್ 12) ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಡೆಯಲಿದೆ.

  ನಿಶ್ಚಿತಾರ್ಥ ಎಲ್ಲಿ.?

  ನಿಶ್ಚಿತಾರ್ಥ ಎಲ್ಲಿ.?

  ಗೋವಾದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಶುಕ್ರವಾರ ನಡೆಯಲಿದೆ. [ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ]

  ಗೋವಾ ಯಾಕೆ.?

  ಗೋವಾ ಯಾಕೆ.?

  ನಟಿ ರಾಧಿಕಾ ಪಂಡಿತ್ ತಾಯಿ ಮಂಗಳಾ ಮೂಲತಃ ಗೋವಾದವರು. ಹೀಗಾಗಿ ಗೋವಾದಲ್ಲಿ ಇರುವ ರಾಧಿಕಾ ಪಂಡಿತ್ ರವರ ಅಜ್ಜಿ ಮನೆಯಲ್ಲಿ ನಿಶ್ಚಿತಾರ್ಥ ನಡೆಯಲಿದೆ.

  ಆತ್ಮೀಯರಿಗೆ ಮಾತ್ರ ಆಹ್ವಾನ

  ಆತ್ಮೀಯರಿಗೆ ಮಾತ್ರ ಆಹ್ವಾನ

  ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬದವರು ಹಾಗೂ ಆತ್ಮೀಯರಿಗೆ ಮಾತ್ರ ಆಹ್ವಾನ ಇದೆ. [ರಾಧಿಕಾ ಪಂಡಿತ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಯಶ್ ಹೇಳಿದ್ದೇನು?]

  ಗೋವಾಗೆ ಹಾರಿದ್ದಾರೆ ರಾಧಿಕಾ ಪಂಡಿತ್

  ಗೋವಾಗೆ ಹಾರಿದ್ದಾರೆ ರಾಧಿಕಾ ಪಂಡಿತ್

  ನಿನ್ನೆ (ಬುಧವಾರ) ಬೆಳ್ಳಗೆ ಕುಟುಂಬ ಸಮೇತ ರಾಧಿಕಾ ಪಂಡಿತ್ ಗೋವಾಗೆ ತೆರಳಿದ್ದಾರೆ.

  ಇಂದು ಸಂಜೆ ಗೋವಾಗೆ ತೆರಳಲಿರುವ ಯಶ್

  ಇಂದು ಸಂಜೆ ಗೋವಾಗೆ ತೆರಳಲಿರುವ ಯಶ್

  ಇಂದು ಸಂಜೆ ಬಂಧು-ಬಳಗದ ಜೊತೆಗೂಡಿ ನಟ ಯಶ್ ಗೋವಾಗೆ ಪಯಣ ಬೆಳೆಸಲಿದ್ದಾರೆ.

  ಮದುವೆ ಯಾವಾಗ.?

  ಮದುವೆ ಯಾವಾಗ.?

  ಮೂಲಗಳ ಪ್ರಕಾರ, ಈ ವರ್ಷಾಂತ್ಯ (ಡಿಸೆಂಬರ್) ಯಶ್ ಹಾಗೂ ರಾಧಿಕಾ ಪಂಡಿತ್ ವಿವಾಹ ಮಹೋತ್ಸವ ನಡೆಯಲಿದೆ.

  ಐದು ವರ್ಷಗಳ ಪ್ರೇಮ

  ಐದು ವರ್ಷಗಳ ಪ್ರೇಮ

  ಸತತ ಐದು ವರ್ಷಗಳಿಂದ ನಟ ಯಶ್ ಹಾಗೂ ರಾಧಿಕಾ ಪಂಡಿತ್ 'ಲವ್ವರ್ಸ್'. ಇದೀಗ ಅವರ ಪವಿತ್ರ ಪ್ರೀತಿಗೆ ಅಧಿಕೃತ ಮುದ್ರೆ ಬೀಳಲಿದೆ.

  English summary
  Kannada Actor Yash and Kannada Actress Radhika Pandit are finally getting engaged tomorrow (August 12th, 2016) in Goa. The couple is said to have been dating for five years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X