»   » ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಮಾಡಿರೋ ಪ್ಲಾನ್ ಅದ್ಭುತ.!

ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಮಾಡಿರೋ ಪ್ಲಾನ್ ಅದ್ಭುತ.!

Posted By:
Subscribe to Filmibeat Kannada
ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಮಾಡಿರೋ ಪ್ಲಾನ್ ಅದ್ಭುತ | Filmibeat Kannada

ರಾಧಿಕಾ ಪಂಡಿತ್-ಯಶ್ ಚಂದನವನದ ಮುದ್ದಾದ ಜೋಡಿ. ಇನ್ನು ಹತ್ತು ದಿನಗಳು ಕಳೆದರೆ, ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ತುಂಬುತ್ತೆ. ಯಶ್ ಮತ್ತು ರಾಧಿಕಾರ ಮದುವೆಯ ಪ್ರತಿ ಹಂತವೂ ತುಂಬಾನೇ ಸ್ಪೆಷಲ್ ಆಗಿತ್ತು. ಎಂಗೆಂಜ್ ಮೆಂಟ್ ನಿಂದ ಹಿಡಿದು ಮದುವೆಯವರೆಗೂ ರಾಧಿಕಾ ತುಂಬಾನೇ ಸ್ಪೆಷಲ್ ಆಗಿ ಪ್ಲಾನ್ ಮಾಡಿದ್ರು.

ಇಡೀ ಸಿನಿಮಾರಂಗ ಹಾಗೂ ಅಭಿಮಾನಿ ಬಳಗವೇ ಎಷ್ಟು ಚೆನ್ನಾಗಿ ಮದುವೆಯಾದ್ರು ಎನ್ನುವ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ವರ್ಷದ ಆಚರಣೆಗೂ ಕೂಡ ತುಂಬಾ ಸ್ಪೆಷಲ್ ಆಗಿ ಪ್ಲಾನ್ ಮಾಡಿದ್ದಾರೆ.

ಯಶ್-ರಾಧಿಕಾ ಕಲ್ಯಾಣಕ್ಕೆ ವರ್ಷ

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಮದುವೆ ಆಗಿ ಒಂದು ವರ್ಷದ ತುಂಬಲಿದೆ. ಇನ್ನು ಹತ್ತು ದಿನಗಳು ಕಳೆದರೆ ಯಶ್-ರಾಧಿಕಾ ಅವರ ಮದುವೆಯ ವಾರ್ಷಿಕೋತ್ಸವದ ಸಂಭ್ರಮ ಬರಲಿದೆ. ಯಶಸ್ವಿ ಜೋಡಿಯಾಗಿ ವರ್ಷಗಳ ಕಾಲ ಹ್ಯಾಪಿಯಾಗಿರುವ ತಾರಾ ಜೋಡಿಗೆ ಶುಭಾಶಯ ಕೋರುವ ಸಂದರ್ಭ.

ಅಮೇರಿಕಾದ ಯಶ್ ಅಭಿಮಾನಿ, ರಾಕಿಂಗ್ ಸ್ಟಾರ್ ಬಗ್ಗೆ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಚಾರ

ಹತ್ತು ದಿನ ಹತ್ತು ಖುಷಿ

ಇನ್ನ ಹತ್ತು ದಿನಗಳು ಅಭಿಮಾನಿಗಳಿಗಾಗಿ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಜೋಡಿಯ ಎಕ್ಸ್‌ ಕ್ಲೂಸಿವ್ ಫೋಟೋಗಳು ನಿಮಗೆ ಸಿಗಲಿದೆ. ಇಂದಿನಿಂದ ಈ ಖುಷಿ ಆರಂಭವಾಗಿದ್ದು ಇನ್ನು ಒಂಬತ್ತು ದಿನಗಳು ವಿಶೇಷವಾದ ಫೋಟೋಗಳನ್ನ ನಿರೀಕ್ಷೆ ಮಾಡಬಹುದು.

ರೈತರ ಪಾಲಿಗೆ ಆಧುನಿಕ 'ಭಗೀರಥ'ನಾದ ರಾಕಿಂಗ್ ಸ್ಟಾರ್ ಯಶ್

ಅಭಿಮಾನಿಗಳಲ್ಲಿ ಶುರುವಾಯ್ತು ಕಾತುರ

ತಮ್ಮ ಯಶಸ್ಸಿನಲ್ಲಿ ಭಾಗಿಯಾಗಿದ್ದ ಅಭಿಮಾನಿಗಳನ್ನ ರಾಧಿಕಾ ಮತ್ತು ಯಶ್ ಎಂದಿಗೂ ಮರೆತವರಲ್ಲ. ತಮ್ಮ ಖುಷಿಯಲ್ಲಿ ಅವರನ್ನೂ ಪಾಲುದಾರರನ್ನಾಗಿ ಮಾಡಿದ್ದಾರೆ. ವರ್ಷದ ಹಿಂದೆ ಮದುವೆಗೂ ಅಭಿಮಾನಿಗಳನ್ನ ಕರೆದು ಸತ್ಕರಿಸಿದ್ರು. ಆದರೆ ಈ ಬಾರಿ ವಾರ್ಷಿಕೋತ್ಸವ ಆಚರಣೆಯ ಅವಕಾಶ ಅಭಿಮಾನಿಗಳಿಗಿಲ್ಲ.

ಎಲ್ಲಿರುತ್ತಾರೆ ರಾಧಿಕಾ-ಯಶ್

ಡಿಸೆಂಬರ್ 9 ರಂದು ವಾರ್ಷಿಕೋತ್ಸವದ ದಿನ ಯಶ್ ಮತ್ತು ರಾಧಿಕಾ ಅಭಿಮಾನಿಗಳನ್ನ ಭೇಟಿ ಮಾಡೋದು ಅನುಮಾನ. ಈಗಾಗಲೇ ಪ್ಲಾನ್ ಆಗಿರುವಂತೆ ಇಬ್ಬರು ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಯೇ ತಮ್ಮ ಮೊದಲ ವಾರ್ಷಿಕೋತ್ಸವ ಆಚರಣೆ ಮಾಡುವ ಪ್ಲಾನ್ ಮಾಡಿದ್ದಾರೆ

English summary
Kannada Actor Yash and Radhika to celebrate their first wedding anniversary on December 7th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada