»   » ಜೂನಿಯರ್ ಸಾಹಸಸಿಂಹನಾಗಿ ಘರ್ಜಿಸಿದ ಯಶ್

ಜೂನಿಯರ್ ಸಾಹಸಸಿಂಹನಾಗಿ ಘರ್ಜಿಸಿದ ಯಶ್

Posted By:
Subscribe to Filmibeat Kannada

1972 ರಲ್ಲಿ ತೆರೆಕಂಡ 'ನಾಗರಹಾವು' ಚಿತ್ರವನ್ನೊಮ್ಮೆ ನೆನಪಿಸಿಕೊಳ್ಳಿ. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ, ಸಾಹಸಸಿಂಹ ಡಾ.ವಿಷ್ಣುವರ್ಧನ್ 'ಆಂಗ್ರಿ ಯಂಗ್ ಮ್ಯಾನ್' ಆಗಿ ಅಕ್ಷರಶಃ ಘರ್ಜಿಸಿದ್ದರು. 'ಹಾವಿನ ದ್ವೇಷ 12 ವರುಷ' ಅಂತ ರೋಷಾವೇಶದಿಂದ ಬುಸುಗುಟ್ಟಿದ್ದರು ಅಂದಿನ ರಾಮಾಚಾರಿ.

ಅಂದು ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದ ರಾಮಾಚಾರಿ, ಇಂದು ಅದೇ ರೂಪದಲ್ಲಿ, ಅದೇ ಸೊಕ್ಕಿನ ಹುಡುಗನಾಗಿ ಮತ್ತೊಮ್ಮೆ ತೆರೆಮೇಲೆ ಆರ್ಭಟಿಸಲಿದ್ದಾರೆ. ರಾಮಾಚಾರಿಯ ಬಾಯಿಂದ ಮತ್ತೊಮ್ಮೆ ದ್ವೇಷದ ಕಿಡಿ ಪರದೆ ಮೇಲೆ ಹೊತ್ತು ಉರಿಯಲಿದೆ. ಬಾಯ್ತುಂಬಾ ''ಮೇಷ್ಟ್ರೇ...'' ಅನ್ನುವ ಉದ್ಗಾರ ಮೂಲೆ ಮೂಲೆಯಲ್ಲೂ ಮೊಳಗಲಿದೆ.

MR and MRS Ramachari

ಹಾಗಂತ ಸಾಹಸಸಿಂಹ ಮತ್ತೊಮ್ಮೆ ಬೆಳ್ಳಿತೆರೆಮೇಲೆ ಪ್ರಜ್ವಲಿಸುವುದಿಲ್ಲ. 'ನಾಗರಹಾವು' ಚಿತ್ರ ಮತ್ತೊಮ್ಮೆ ರಿಲೀಸ್ ಆಗುತ್ತಲೂ ಇಲ್ಲ. ಬದ್ಲಾಗಿ ರಾಕಿಂಗ್ ಸ್ಟಾರ್ ಯಶ್, ವಿಷ್ಣು ಪ್ರತಿರೂಪವಾಗಿ ಮಿಂಚಲಿದ್ದಾರೆ..!

'ನಾಗರಹಾವು' ಚಿತ್ರದ ಸೂಪರ್ ಡ್ಯೂಪರ್ ಹಿಟ್ ಡೈಲಾಗ್ ಗಳು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಮರುಕಳಿಸಲಿವೆ. ಆ ಮೂಲಕ ನಾಲ್ಕು ದಶಕಗಳ ಹಿಂದಿನ ಗತವೈಭವವನ್ನು ತೆರೆಮೇಲೆ ತರಲಿದ್ದಾರೆ ಯಶ್. ['ರಾಮಾಚಾರಿ' ಅನ್ನುವ ಹೆಸರೇ ಪ್ರಾಬ್ಲಂ..!]

ಕೆಂಪು ಬಣ್ಣದ ಫಾರ್ಮಲ್ ಪ್ಯಾಂಟು, ಹಳದಿ ಬಣ್ಣದ ಸ್ಟ್ರೈಪ್ ಶರ್ಟು, ಕಪ್ಪು ಬೂಟು ಧರಿಸಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಥೇಟ್ ವಿಷ್ಣುವರ್ಧನ್ ಗೆಟಪ್ ಹಾಕಿದ್ದಾರೆ ಯಶ್. ಹೇಳಿ ಕೇಳಿ ಚಿತ್ರದ ಹೆಸರೇ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', ಚಿತ್ರದಲ್ಲಿ 'ಅಭಿನವ ಭಾರ್ಗವ'ನ ಕಟ್ಟಾ ಅಭಿಮಾನಿಯಾಗಿರುವ ಯಶ್ ಪಾತ್ರದ ಹೆಸರೂ 'ರಾಮಾಚಾರಿ' ಅಂತಲೇ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಇದೇ ಕಾರಣಕ್ಕೋಸ್ಕರ ಎದೆಯ ಮೇಲೆ ಬುಸುಗುಡುವ 'ರಾಮಾಚಾರಿ'ಯ ಟಾಟ್ಯೂ ಹಾಕಿಸಿಕೊಂಡಿರುವ ಯಶ್, ಚಿತ್ರದಲ್ಲಿ 'ರಾಮಾಚಾರಿ'ಯ ಅನುಕರಣೆಯನ್ನೂ ಮಾಡುವುದು ಇದೀಗ ನಮಗೆ ಸಿಕ್ಕಿರುವ ಮಾಹಿತಿ. ಚಿತ್ರದಲ್ಲಿ 'ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘ'ದ ಮುಖ್ಯ ರೂವಾರಿಯಾಗಿ, ಸನ್ನಿವೇಶವೊಂದರಲ್ಲಿ ನಾಗರಹಾವಿನ 'ರಾಮಾಚಾರಿ'ಯಾಗಿ ಯಶ್ ಘರ್ಜಿಸಲಿದ್ದಾರೆ. ['ಅಣ್ತಮ್ಮ' ಯಶ್ ಗಾನಬಜಾನ ಇಲ್ಲಿದೆ ನೋಡಿ]

MR and MRS Ramachari2

ಇದರಿಂದ ಫುಲ್ ಖುಷ್ ಆಗುವ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ ಗೆ ಬಹೃತ್ ಹೂವಿನ ಹಾರದೊಂದಿಗೆ, ದುಡ್ಡಿನ ಹಾರವನ್ನೂ ಹಾಕುತ್ತಾರೆ. ಅದರ ಎಕ್ಸ್ ಕ್ಲೂಸಿವ್ ಝಲಕ್ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ['ಅಣ್ತಮ್ಮ'ನಿಗಾಗಿ ಗಾಯಕನಾದ ಯಶ್ ಅಸಲಿ ಕಥೆ]

ಒಂದ್ಕಡೆ ಯಶ್ 'ಅಣ್ತಮ್ಮ' ಗಾನಬಜಾನ, ಇನ್ನೊಂದ್ಕಡೆ ರಾಮಾಚಾರಿಯ ಗುಣಗಾನ, ಹೀಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಇರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಇದೇ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಮೇಲೆ ಬರ್ತಿದೆ. ಆ ಮೂಲಕ ವಿಷ್ಣು ಕಮ್ ಯಶ್ ಅಭಿಮಾನಿಗಳಿಗೆ ಕ್ರಿಸ್ಮಸ್ ದೊಡ್ಡ ಹಬ್ಬವಾಗುವುದರಲ್ಲಿ ಅಚ್ಚರಿಯಿಲ್ಲ. (ಫಿಲ್ಮಿಬೀಟ್ ಕನ್ನಡ)

English summary
Rocking Star Yash will be seen as Dr.Vishnuvardhan in the movie MR and MRS Ramachari. Yash portraying the role of a Big Fan of Dr.Vishnuvardhan, recreates the magic of the Evergreen movie Nagarahavu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada