For Quick Alerts
  ALLOW NOTIFICATIONS  
  For Daily Alerts

  ಮುಂದಿನ ಚಿತ್ರದಲ್ಲೂ ಯಶ್ 'ಗಡ್ಡ'ದ ಲುಕ್ ಮುಂದುವರಿಕೆ!

  |

  ಕೆಜಿಎಫ್ ಸಿನಿಮಾ ಶುರುವಾಗಿದ್ದೇ, ಆಗಿದ್ದು ನಟ ಯಶ್ ಒಂದೇ ಲುಕ್ ನಲ್ಲಿ ಇದ್ದಾರೆ. ಕೆಜಿಎಫ್ ಸಿನಿಮಾಗೂ ಮೊದಲು ಪ್ರತಿ ಚಿತ್ರಕ್ಕೂ ಒಂದೊಂದು ರೀತಿಯ ವಿಭಿನ್ನ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಸರಿ ಸುಮಾರು 8 ವರ್ಷಗಳಿಂದ ಒಂದೇ ಲುಕ್ ನಲ್ಲಿದ್ದಾರೆ ಯಶ್.

  ಈ ಹಿಂದೆ ಕೆಜಿಎಫ್ ಮೊದಲ ಭಾಗ ರಿಲೀಸ್ ಆದ ಬಳಿಕ ಯಶ್ ಗಡ್ಡಕ್ಕೆ ಕತ್ತರಿ ಹಾಕಿದ್ದರು ಪತ್ನಿ ರಾಧಿಕಾ ಪಂಡಿತ್. ಈಗ 'ಕೆಜಿಎಫ್ 2' ಚಿತ್ರದ ಬಳಿಕ ಈ ಗಡ್ಡದ ಲುಕ್ ಗೆ ಯಶ್ ಮುಕ್ತಿ ನೀಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಾ ಇದ್ದಾರೆ‌.

  ದಕ್ಷಿಣ ಕೊರಿಯಾದಲ್ಲಿ 'ಕೆಜಿಎಫ್ 2' ಕ್ರೇಜ್: ಕೊರಿಯಾ ಬಾಕ್ಸಾಫೀಸ್‌ನಲ್ಲೂ ರಾಕಿ ರೆಕಾರ್ಡ್!ದಕ್ಷಿಣ ಕೊರಿಯಾದಲ್ಲಿ 'ಕೆಜಿಎಫ್ 2' ಕ್ರೇಜ್: ಕೊರಿಯಾ ಬಾಕ್ಸಾಫೀಸ್‌ನಲ್ಲೂ ರಾಕಿ ರೆಕಾರ್ಡ್!

  ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ.‌ 'ಕೆಜಿಎಫ್ 2' ರಿಲೀಸ್ ಆಗಿ ತಿಂಗಳಾದರೂ ಯಶ್ ಗಡ್ಡಕ್ಕೆ ಮುಕ್ತಿ ಸಿಕ್ಕಿಲ್ಲ. ಇದಕ್ಕೆ ಕಾರಣ ಯಶ್ ಮುಂದಿನ ಸಿನಿಮಾ ಎನ್ನುವ ಸುದ್ದಿ ಹರಿದಾಡುತ್ತಿದೆ.

  'ಕೆಜಿಎಫ್' ಮುಗಿದರೂ ಯಶ್ ಗಡ್ಡಕ್ಕೆ ಮುಕ್ತಿ ಇಲ್ಲ!

  'ಕೆಜಿಎಫ್' ಮುಗಿದರೂ ಯಶ್ ಗಡ್ಡಕ್ಕೆ ಮುಕ್ತಿ ಇಲ್ಲ!

  'ಕೆಜಿಎಫ್' ಎನ್ನುವ ಟೈಟಲ್ ಎಷ್ಟು ಫೆಮಸ್ಸ್ ಆಗಿದೆಯೋ, ನಟ ಯಶ್ ಗಡ್ಡದ‌ ಲುಕ್ ಕೂಡ ಅಷ್ಟೇ ಫೇಮಸ್.‌ ಯಶ್ ಈ ಗಡ್ಡದಾರಿ ಅವತಾರ ಅಭಿಮಾನಿಗಳಿಗೆ ಬಲು ಇಷ್ಟವಾಗಿದೆ. ಹಾಗಾಗಿ ಯಶ್ ಕೂಡ ಸಿನಿಮಾ ಬಿಟ್ಟು ಸಾರ್ವಜನಿಕವಾಗಿವೂ ಈ ಲುಕ್ ಮೇಂಟೇನ್ ಮಾಡುತ್ತಿದ್ದಾರೆ. ಆದರೆ ಇನ್ನೂ ಈ ಲುಕ್‌ ಬದಲಾಗಿಲ್ಲ ಹಾಗಾಗಿ‌ ಹೊಸ ಸುದ್ದಿ ಹರಿದಾಡುತ್ತಾ ಇದೆ.

  ಘರ್ಜಿಸಿ ಮಗನನ್ನ ಹೆದರಿಸಿದ ನಟ ಯಶ್: ವಿಡಿಯೋ ವೈರಲ್!ಘರ್ಜಿಸಿ ಮಗನನ್ನ ಹೆದರಿಸಿದ ನಟ ಯಶ್: ವಿಡಿಯೋ ವೈರಲ್!

  ಪ್ರತಿ ಚಿತ್ರಗಳಲ್ಲೂ ಯಶ್ ವಿಭಿನ್ನ ಗಡ್ಡದ ಲುಕ್!

  ಪ್ರತಿ ಚಿತ್ರಗಳಲ್ಲೂ ಯಶ್ ವಿಭಿನ್ನ ಗಡ್ಡದ ಲುಕ್!

  ನಟ ಯಶ್ ಕಥೆಗೆ ತಕ್ಕಂತೆ ತಮ್ಮ ಪಾತ್ರ ಮತ್ತು ಮ್ಯಾನರಿಸಂ ಮಾತ್ರ ಅಲ್ಲ. ತಮ್ಮ ಗಡ್ಡದ ಮೇಲು ಸಾಕಷ್ಟು ಪ್ರಯೋಗ ಮಾಡಿದ್ದಾರೆ. ಬಹುತೇಕ ಎಲ್ಲಾ ಚಿತ್ರಗಳಲ್ಲೂ ಯಶ್ ಲೈಟ್ ಆಗಿ ಗಡ್ಡ ಬಿಟ್ಟಿದ್ದಾರೆ. ಕ್ಲೀನ್ ಶೇವ್ ಆಗಿ ಕಾಣಿಸಿಕೊಂಡಿಲ್ಲ. 'ಕಿರಾತಕ', 'ರಾಜಧಾನಿ', 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ', 'ಗೂಗ್ಲಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಭಿನ್ನ ಗಡ್ಡದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ 'ಲಕ್ಕಿ' ಮತ್ತು 'ರಾಜಹುಲಿ' ಚಿತ್ರಗಳಲ್ಲಿ ಡಿಫ್ರೆಂಟ್ ಲುಕ್ ಟ್ರೈ ಮಾಡಿದ್ದಾರೆ.

  ಲಕ್ಕಿ, ರಾಜಹುಲಿಯಲ್ಲಿ ಯಶ್ ಭಿನ್ನ ಗಡ್ಡದ ಸ್ಡೈಲ್!

  ಲಕ್ಕಿ, ರಾಜಹುಲಿಯಲ್ಲಿ ಯಶ್ ಭಿನ್ನ ಗಡ್ಡದ ಸ್ಡೈಲ್!

  ಇನ್ನು ಯಶ್ ಗಡ್ಡದ ವಿಚಾರಕ್ಕೆ ಬರುವುದಾದರೆ, ಕೆಲವು ಸಿನಿಮಾಗಳಲ್ಲಿ ಯಶ್ ವಿಭಿನ್ನವಾದ ಗಡ್ಡದ ಲುಕ್ ಪ್ರಯೋಗಿಸಿದ್ದಾರೆ. 'ರಾಜಾಹುಲಿ' ಚಿತ್ರದಲ್ಲಿ ದಪ್ಪ ಮೀಸೆ ಬಿಟ್ಟು ಖಡಕ್ ಆಗಿ ಕಾಣಿಸಿಕೊಂಡಿದ್ದರು. 'ಲಕ್ಕಿ' ಸಿನಿಮಾದಲ್ಲಿ ಲಕ್ಕಿ ಪಾತ್ರಕ್ಕೆ ಟೈಗರ್ ಮಾದರಿಯಲ್ಲಿ ಗಡ್ಡ ಬಿಟ್ಟಿದ್ದರು. ಇದು ಕೂಡ ಟ್ರೆಂಡ್ ಆಗಿತ್ತು.

  English summary
  Yash Beard Look Continue To In His Next Movie Also, KNow More,
  Saturday, May 14, 2022, 8:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X