For Quick Alerts
  ALLOW NOTIFICATIONS  
  For Daily Alerts

  Yash Birthday: 'ಸಿಇಒ ಆಫ್ ಬಾಕ್ಸ್‌ಆಫೀಸ್‌' ಯಶ್‌ಗೆ 37ನೇ ಹುಟ್ಟುಹಬ್ಬದ ಸಂಭ್ರಮ

  |

  ಕಿರುತೆರೆಯ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟು ನಟನಾಗಿ ಹಲವು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿ ಕನ್ನಡ ಜನತೆಯ ಮನಸ್ಸನ್ನು ಗೆದ್ದು ಟಾಪ್ ಹೀರೊ ಆಗಿ ನಿಂತಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು ( ಜನವರಿ 8 ) 37ನೇ ಹುಟ್ಟುಹಬ್ಬದ ಸಂಭ್ರಮ. ಕಳೆದ ವರ್ಷ ದೇಶದಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವನ್ನು ನೀಡಿ ಬಾಕ್ಸ್ ಆಫೀಸ್ ಸಿಇಒ ಎನಿಸಿಕೊಂಡ ನಟ ಯಶ್ ಹುಟ್ಟುಹಬ್ಬದ ಪ್ರಯುಕ್ತ ಸದ್ಯ ಕುಟುಂಬ ಹಾಗೂ ಆಪ್ತರೊಡನೆ ದುಬೈ ಪ್ರವಾಸ ಕೈಗೊಂಡಿದ್ದಾರೆ.

  ದುಬೈನಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಯಶ್ ಅಭಿಮಾನಿಗಳಿಗೆ ಈ ಬಾರಿ ಸಿಗುವುದಿಲ್ಲ ಎಂದು ಮೊದಲೇ ಟ್ವೀಟ್ ಮಾಡಿ ತಿಳಿಸಿದ್ದರು ಹಾಗೂ ಆದಷ್ಟು ಬೇಗ ತನ್ನ ಮುಂದಿನ ಚಿತ್ರದ ಅಪ್‌ಡೇಟ್‌ನೊಂದಿಗೆ ನಿಮಗೆ ಸಿಗಲಿದ್ದೇನೆ ಎಂದು ತಿಳಿಸಿದ್ದರು. ಇನ್ನು ಯಶ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಕೋರಿದ್ದಾರೆ.

  ಯಶ್ ಹುಟ್ಟುಹಬ್ಬ ಆಚರಿಸುವ ಸಲುವಾಗಿ ಯಶ್ ಅಭಿಮಾನಿಗಳು ಕಾಮನ್ ಡಿಪಿಯೊಂದನ್ನು ತಯಾರಿಸಿ ಅದನ್ನೇ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಬಳಸಿ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಇನ್ನು ಯಶ್ ಅಭಿಮಾನಿಗಳು ಮಾತ್ರವಲ್ಲದೇ ಪುನೀತ್ ರಾಜ್‌ಕುಮಾರ್, ಸುದೀಪ್, ಶಿವ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳೂ ಸಹ ಯಶ್ ಹುಟ್ಟುಹಬ್ಬಕ್ಕೆ ಭಿನ್ನ ವಿಭಿನ್ನ ಪೋಸ್ಟ್‌ಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

  ಸದ್ಯ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ರೀತಿಯ ಬ್ಯಾಕ್ ಟು ಬ್ಯಾಕ್ ಇಂಡಸ್ಟ್ರಿ ಹಿಟ್‌ಗಳನ್ನು ನೀಡಿ ಬಾಕ್ಸ್ ಆಫೀಸ್ ಕಿಂಗ್ ಆಗಿ ಮೆರೆಯುತ್ತಿರುವ ಯಶ್ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರಿಗೂ ಇದ್ದು, ಯಶ್ 19 ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಇನ್ನು 2007ರಲ್ಲಿ ತೆರೆಕಂಡ ಜಂಭದ ಹುಡುಗಿ ಎಂಬ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಯಶ್ 2008ರಲ್ಲಿ ತೆರೆಕಂಡ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾದರು.

  ಬಳಿಕ ಹಲವಾರು ಚಿತ್ರಗಳಲ್ಲಿ ನಟಿಸಿ ಚಂದನವನದಲ್ಲಿ ಭದ್ರವಾಗಿ ನೆಲೆಯೂರಲು ಯತ್ನಿಸಿ ಏಳುಬೀಳುಗಳನ್ನು ಕಂಡ ಯಶ್ ಡ್ರಾಮಾ ಮೂಲಕ ಮತ್ತೊಂದು ಹಂತ ಮೇಲೇರಿದರು ಹಾಗೂ ಗೂಗ್ಲಿ ಮೂಲಕ ಕ್ಲೀನ್ ಬ್ರೇಕ್ ಪಡೆದರು. ಬಳಿಕ ರಾಜಾಹುಲಿ ಹಾಗೂ ಗಜಕೇಸರಿ ಚಿತ್ರಗಳಲ್ಲಿ ನಟಿಸಿದ ಯಶ್ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಚಿತ್ರದಲ್ಲಿ ನಟಿಸಿ ಇಂಡಸ್ಟ್ರಿ ಹಿಟ್ ಬಾರಿಸಿದರು. ಈ ಚಿತ್ರದ ಮೂಲಕ ಯಶ್ ಚಂದನವನದ ಪಿಲ್ಲರ್‌ಗಳಲ್ಲಿ ಓರ್ವರಾದರು. ಇದಾದ ಬಳಿಕ ಮಾಸ್ಟರ್‌ಪೀಸ್ ಹಾಗೂ ಸಂತು ಸ್ಟ್ರೈಟ್ ಫಾರ್ವಾರ್ಡ್ ರೀತಿಯ ಸಾಮಾನ್ಯ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿದ ಯಶ್ ಬಳಿಕ ಕೆಜಿಎಫ್ ಚಿತ್ರ ಸರಣಿಯಲ್ಲಿ ನಟಿಸಿ ಹಠಕ್ಕೆ ಬಿದ್ದು ಅದನ್ನು ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ಬಿಡುಗಡೆಗೊಳಿಸಿ ಈಗ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿ ಅನೇಕರಿಗೆ ಮಾದರಿಯಾಗಿದ್ದಾರೆ.

  English summary
  Yash Birthaday: Rocking Star Yash celebrating his 37th birthday
  Sunday, January 8, 2023, 7:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X