For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಚಿತ್ರದಲ್ಲಿ ನಟಿಸ್ತಾರಾ ಯಶ್.? ರಾಕಿಂಗ್ ಸ್ಟಾರ್ ಬಿಚ್ಚಿಟ್ಟ ಸತ್ಯ ಇದು.!

  |
  ಟಾಲಿವುಡ್ ಗೆ ಎಂಟ್ರಿಯಾಗುವ ಬಗ್ಗೆ ಯಶ್ ಹೇಳಿದ್ದು ಹೀಗೆ | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಇದೀಗ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದ್ಯಾವಾಗ 'ಕೆ.ಜಿ.ಎಫ್' ಟ್ರೈಲರ್ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡಿತೋ, ಯಶ್ ಬಗ್ಗೆ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿಯೂ ಡಿಮ್ಯಾಂಡ್ ಕ್ರಿಯೇಟ್ ಆಯ್ತು.

  ಇಂತಿಪ್ಪ ಯಶ್ ಬಗ್ಗೆ ನಿನ್ನೆಯಿಂದ ಒಂದು ಗುಸುಗುಸು ಕೇಳಿಬರುತ್ತಿದೆ. ಅದೇನಪ್ಪಾ ಅಂದ್ರೆ, ಟಾಲಿವುಡ್ ನ ಹೆಸರಾಂತ ನಿರ್ದೇಶಕ ಎಸ್.ಎಸ್.ರಾಜಮೌಳಿ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಒಂದು ಸಿನಿಮಾ ಮಾಡ್ತಾರಂತೆ ಎಂಬ ಅಂತೆ-ಕಂತೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ.

  ಹಾಗಾದ್ರೆ, ಎಸ್.ಎಸ್.ರಾಜಮೌಳಿಗೆ ಯಶ್ ಕಾಲ್ ಶೀಟ್ ಕೊಡ್ತಾರಾ.? ಅಂತ ಕುತೂಹಲದಿಂದ ಕಾಯುತ್ತಿರುವವರಿಗೆ ಇದೇ ವಿಚಾರದ ಕುರಿತು ರಾಕಿಂಗ್ ಸ್ಟಾರ್ ಯಶ್ ಕ್ಲಾರಿಟಿ ಕೊಟ್ಟಿದ್ದಾರೆ. ಮುಂದೆ ಓದಿರಿ...

  ಫೇಸ್ ಬುಕ್ ನಲ್ಲಿ ಕ್ಲಾರಿಟಿ ಕೊಟ್ಟ ಯಶ್

  ಫೇಸ್ ಬುಕ್ ನಲ್ಲಿ ಕ್ಲಾರಿಟಿ ಕೊಟ್ಟ ಯಶ್

  ''ನಿನ್ನೆಯಿಂದ ಕೆಲ‌ ಮಾಧ್ಯಮಗಳಲ್ಲಿ ನನ್ನನ್ನು ಎಸ್.ಎಸ್.ರಾಜಮೌಳಿಯವರು ಸಂಪರ್ಕಿಸಿದ್ದಾರೆ.. ಅವ್ರ ಹೊಸ‌ಚಿತ್ರದಲ್ಲಿ‌ ನಾನು ನಟಿಸುತ್ತಿದ್ದೇನೆಂದು ಸುದ್ದಿ ಬಿತ್ತರಿಸುತ್ತಿದ್ದಾರೆ. ಇದು ಸತ್ಯಕ್ಕೆ‌ ದೂರವಾದ ಮಾತು'' ಎಂದು ನಟ ಯಶ್ ಇದೀಗಷ್ಟೇ ತಮ್ಮ ಫೇಸ್ ಬುಕ್ ಪುಟದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

  'ಕೆ.ಜಿ.ಎಫ್' ಟ್ರೈಲರ್ ನೋಡಿ ಫಿದಾ ಆದ ವಿದೇಶಿ ಪ್ರಜೆಗಳು.!

  ಮಾತುಕತೆಯೇ ನಡೆದಿಲ್ಲ.!

  ಮಾತುಕತೆಯೇ ನಡೆದಿಲ್ಲ.!

  ''ನಾನು ಅವರ (ರಾಜಮೌಳಿ) ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಅವರು ಆ ವಿಚಾರವಾಗಿ ನನ್ನ‌ ಸಂಪರ್ಕಿಸಿಯೂ ಇಲ್ಲ... ಅಂತಹ ದೊಡ್ಡ ನಿರ್ದೇಶಕರ ಹೆಸರನ್ನ ಹೀಗೆ‌ ಸುಖಾಸುಮ್ಮನೆ ಬಳಸುವುದು ಸರಿಯಲ್ಲ...ಅದು ಯಾರಿಗೂ ಶೋಭೆ ತರುವಂತಹದಲ್ಲ...'' ಎಂದಿದ್ದಾರೆ ನಟ ಯಶ್.

  'ಕೆಜಿಎಫ್' ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ಈ ಬಾಲಿವುಡ್ ನಟ.!

  ಕೆಜಿಎಫ್ ಬಗ್ಗೆ ಮಾತ್ರ ಮಾತಾಡೋಣ

  ''ಸದ್ಯಕ್ಕೆ‌ ನನ್ನ‌ ಗುರಿ ಕೆ.ಜಿ.ಎಫ್.... ಕೆ.ಜಿ.ಎಫ್‌ ಕೆಲಸದಲ್ಲಿ‌ ನಾನು ನನ್ನ ತಂಡ ಮಗ್ನರಾಗಿದ್ದೀವಿ... ದಯವಿಟ್ಟು ಊಹಾಪೋಹಗಳಿಗೆ ಕಿವಿಕೊಡದಿರಿ... ಸುಳ್ಳು‌ ಸುದ್ದಿಯನ್ನ ಬಿತ್ತರಿಸದಿರಿ... ಈಗ ಕೆ.ಜಿ.ಎಫ್ ಬರುತಿರುವಂತಹ ಸಮಯ...ಬರೀ‌ ಈ ಚಿತ್ರದ ಬಗ್ಗೆ ಮಾತಾಡೋಣ...'' ಎಂದು ಮನವಿ ಮಾಡಿದ್ದಾರೆ ನಟ ಯಶ್

  'KGF'ಗೆ ಪೈಪೋಟಿ ನೀಡಲು ಡಿಸೆಂಬರ್ ಗೆ ಬರ್ತಿರೋ ಕನ್ನಡ ಸಿನಿಮಾಗಳಿವು

  ಮುಂದಿನ ತಿಂಗಳು ರಿಲೀಸ್

  ಮುಂದಿನ ತಿಂಗಳು ರಿಲೀಸ್

  ನಟ ಯಶ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಅಭಿನಯಿಸಿರುವ 'ಕೆ.ಜಿ.ಎಫ್' ಮೊದಲನೇ ಭಾಗ ಡಿಸೆಂಬರ್ 21 ರಂದು ಬಿಡುಗಡೆ ಆಗಲಿದೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹಾಕಿದ್ದಾರೆ.

  English summary
  Yash clarifies that he has not got film offer from Tollywood Director SS Rajamouli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X