For Quick Alerts
  ALLOW NOTIFICATIONS  
  For Daily Alerts

  ಫಾರ್ಮ್ ಹೌಸ್ ನಲ್ಲಿ ರಾಕಿಂಗ್ ದಂಪತಿಯ ಮುದ್ದು ಮಗಳ ಜಾಲಿ

  By ಫಿಲ್ಮ್ ಡೆಸ್ಕ್
  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಕ್ಕಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ರಾಧಿಕಾ ಪಂಡಿತ್ ಆಗಾಗ ಮಕ್ಕಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತೆ.

  ಇತ್ತೀಚಿಗೆ ಎರಡನೇ ಮಗುವಿಗೆ ಯಥರ್ವ ಯಶ್ ಎಂದು ನಾಮಕರಣ ಮಾಡಿರುವ ವಿಡಿಯೋ ಹಂಚಿಕೊಂಡಿದ್ದ ಯಶ್ ದಂಪತಿ, ಇದೀಗ ಮುದ್ದು ಮಗಳ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅಂದ್ಹಾಗೆ ಯಶ್ ಕುಟುಂಬವೀಗ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದೆ. ಫಾರ್ಮ್ ಹೌಸ್ ಡೈರೀಸ್ ನಿಂದ ರಾಧಿಕಾ ಹಂಚಿಕೊಂಡ ಫೋಟೋ ಎಲ್ಲಾ ಕಡೆ ವೈರಲ್ ಆಗಿದೆ. ಮುಂದೆ ಓದಿ..

  ಯಶ್-ರಾಧಿಕಾ ಮುದ್ದು ಮಗನ ಹೆಸರು ಬಹಿರಂಗಯಶ್-ರಾಧಿಕಾ ಮುದ್ದು ಮಗನ ಹೆಸರು ಬಹಿರಂಗ

   ಹಾಸನದಲ್ಲಿ ಯಶ್ ಕುಟುಂಬ

  ಹಾಸನದಲ್ಲಿ ಯಶ್ ಕುಟುಂಬ

  ಯಶ್ ದಂಪತಿ ಇಬ್ಬರು ಮಕ್ಕಳ ಜೊತೆ ಹಾಸನದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಮಗಳು ಐರಾ ಮಸ್ತಿ ಮಾಡುತ್ತಿರುವ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಅಪ್ಪ ಯಶ್ ಜೊತೆ ಹಸುವಿಗೆ ಬಾಳೆಹಣ್ಣು ತಿನಿಸುತ್ತಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ "ಫಾರ್ಮ್ ಹೌಸ್ ಡೈರೀಸ್" ಎಂದು ಕ್ಯಾಪ್ಷನ್ ನೀಡಿದ್ದಾರೆ.

   ಮಗನ ನಾಮಕರಣ ಮಾಡಿದ್ದು ಇದೇ ಫಾರ್ಮ್ ಹೌಸ್ ನಲ್ಲಿ

  ಮಗನ ನಾಮಕರಣ ಮಾಡಿದ್ದು ಇದೇ ಫಾರ್ಮ್ ಹೌಸ್ ನಲ್ಲಿ

  ಐರಾ ಮತ್ತು ಯಶ್ ಇಬ್ಬರ ಫಾರ್ಮ್ ಹೌಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಅಭಿಮಾನಿಗಳು ಲೈಕ್ಸ್-ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿಗೆ ಇದೇ ಫಾರ್ಮ್ ಹೌಸ್ ನಲ್ಲಿ ಯಶ್ ದಂಪತಿ, ಕುಟುಂಬದ ಜೊತೆ ಎರಡನೇ ಮಗುವಿನ ನಾಮಕರಣ ಮಾಡಿದ್ದರು. ಸದ್ಯ ಯಶ್ ಮತ್ತು ರಾಧಿಕಾ ಅಲ್ಲಿಯೇ ಸಮಯ ಕಳೆಯುತ್ತಿದ್ದಾರೆ.

  ಸ್ಯಾಂಡಲ್ ವುಡ್ ಗೆ ನಶೆಯ ನಂಟು: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

   ಡ್ರಗ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಯಶ್

  ಡ್ರಗ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಯಶ್

  ಯಶ್ ಇತ್ತೀಚಿಗೆ ಸ್ಯಾಂಡಲ್ ವುಡ್ ನಶೆ ನಂಟಿನ ಬಗ್ಗೆ ಮಾತನಾಡಿದ್ದಾರೆ. ಡ್ರಗ್ಸ್ ಎನ್ನುವುದು ಇಡೀ ದೇಶಕ್ಕೆ, ಯುವಜನಾಂಗಕ್ಕೆ ಮಾರಕ. ಕೇವಲ ಚಿತ್ರರಂಗ ಮಾತ್ರವಲ್ಲ. ಎಲ್ಲಾ ವಲಯದಲ್ಲಿಯೂ ಇದೆ. ಕನ್ನಡ ಚಿತ್ರರಂಗ ಅಂತ ಮಾತ್ರ ಹೇಳಬೇಡಿ. ಪೋಷಕರು ಕಷ್ಟ ಪಟ್ಟು ಬೆಳಸಿ ಮಕ್ಕಳ ಬಗ್ಗೆ ದೊಡ್ಡ ಕನಸು ಕಾಣುತ್ತಿರುತ್ತಾರೆ. ಆದರೆ ಈ ದರಿದ್ರ ಗ್ರಡ್ಸ್ ತೆಗೆದುಕೊಂಡು ಹಾಳಾಗಬೇಡಿ ಎಂದು ಯುವ ಜನಾಂಗಕ್ಕೆ ಕಿವಿ ಮಾತು ಹೇಳಿದ್ದರು.

  Sanjjana ಗೊಳಾಟಕ್ಕೆ full stop | Filmibeat Kannada
   ಕೆಜಿಎಫ್-2 ಸಿನಿಮಾದಲ್ಲಿ ಯಶ್ ಬ್ಯುಸಿ

  ಕೆಜಿಎಫ್-2 ಸಿನಿಮಾದಲ್ಲಿ ಯಶ್ ಬ್ಯುಸಿ

  ಯಶ್ ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಪ್ರಕಾಶ್ ರೈ ಮತ್ತು ಮಾಳವಿಕಾ ಅವಿನಾಶ್ ಪಾತ್ರವನ್ನು ಸಿನಿಮಾತಂಡ ಸೆರೆ ಹಿಡಿಯುತ್ತಿದೆ. ಸದ್ಯದಲ್ಲೇ ಯಶ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. 90ರಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಇನ್ನೇನು ಕೆಲವೇ ಕೆಲವು ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ.

  English summary
  Yash daughter Ayra Yash Feeds cow in farm house. Photo goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X