For Quick Alerts
  ALLOW NOTIFICATIONS  
  For Daily Alerts

  'ಕೆ.ಜಿ.ಎಫ್' ಚಿತ್ರದ ಫಸ್ಟ್ ಡೈಲಾಗ್ ಬಹಿರಂಗ ಪಡಿಸಿದ ರಾಕಿಂಗ್ ಸ್ಟಾರ್.!

  By Bharath Kumar
  |
  Yash dialogue from KGF movie revealed

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಚಿತ್ರ ದಕ್ಷಿಣ ಭಾರತದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಚಿತ್ರದ ಮೊದಲ ಪೋಸ್ಟರ್ ನಲ್ಲೇ ಸೌತ್ ಸಿನಿರಂಗವನ್ನೇ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಮಾಡಿದೆ. ಕನ್ನಡದ ಮಟ್ಟಿಗೆ ದೊಡ್ಡ ಬಜೆಟ್ ಸಿನಿಮಾ ಎಂಬ ಹಗ್ಗಳಿಕೆ.

  ಅದರಲ್ಲೂ, ಯಶ್ ಅವರ ಗೆಟಪ್ ಅಂತೂ ಚಿಂದಿ ಉಡಾಯಿಸ್ತಿದೆ. ಇಷ್ಟೆಲ್ಲಾ ಹೈಪ್ ಇರುವ ಚಿತ್ರದಲ್ಲಿ ಯಶ್ ಅವರ ಡೈಲಾಗ್ ಹೇಗಿರುತ್ತೆ ಎಂಬ ಕುತೂಹಲ ಮತ್ತಷ್ಟು ಕಾಡಿದೆ.

  ಇದೀಗ, 'ಕೆಜಿಎಫ್' ಚಿತ್ರದ ಫಸ್ಟ್ ಡೈಲಾಗ್ ಹೊರಬಿದ್ದಿದೆ. ಈ ಡೈಲಾಗ್ ಗನ್ನ ಸ್ವತಃ ರಾಕಿಂಗ್ ಸ್ಟಾರ್ ಅಭಿಮಾನಿಗಳ ಮುಂದೆ ಹೇಳಿದ್ದಾರೆ. ಹಾಗಿದ್ರೆ, 'ಕೆ.ಜಿ.ಎಫ್' ಚಿತ್ರದ ಫಸ್ಟ್ ಡೈಲಾಗ್ ಯಾವುದು? ಹೇಗಿದೆ ಎಂದು ಮುಂದೆ ಓದಿ.....

  'ಯಶಸ್ ವಿನಾಯಕ'ದಲ್ಲಿ 'ಕೆಜಿಎಫ್' ಡೈಲಾಗ್

  'ಯಶಸ್ ವಿನಾಯಕ'ದಲ್ಲಿ 'ಕೆಜಿಎಫ್' ಡೈಲಾಗ್

  ಇತ್ತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ 'ಯಶಸ್ ವಿನಾಯಕ' ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ತಮ್ಮ ಫೇಮಸ್ ಡೈಲಾಗ್ ಗಳನ್ನ ಹೊಡೆದರು. ಈ ವೇಳೆ 'ಕೆಜಿಎಫ್' ಚಿತ್ರದ ಎಕ್ಸ್ ಕ್ಲೂಸಿವ್ ಡೈಲಾಗ್ ಕೂಡ ಹೇಳಿ ಅಭಿಮಾನಿಗಳ ಗಮನ ಸೆಳೆದರು.

  ರಾಕಿಂಗ್ ಸ್ಟಾರ್ ಯಶ್ ಗಡ್ಡದ ಬಗ್ಗೆ ಪ್ರಶ್ನೆ ಕೇಳಿದ ಪತ್ನಿ ರಾಧಿಕ ಪಂಡಿತ್

  ಇದೇ 'ಕೆಜಿಎಫ್' ಡೈಲಾಗ್

  ಇದೇ 'ಕೆಜಿಎಫ್' ಡೈಲಾಗ್

  ''ಇನ್ ಮೇಲಿಂದ ಅವರಪ್ಪ, ನನ್ನ ಮಾವ.....ನಾನು ನಿಮ್ಮೆಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗಿ ನೋಡ್ಕೊಳ್ರೋ....ಚೆನ್ನಾಗಿ ನೋಡ್ಕೊಳ್ಳಿ''

  ರಾಧಿಕಾ ಪಂಡಿತ್ ಎದುರಲ್ಲೇ ಯಶ್ ಗೆ ಗೂಗ್ಲಿ ಹಾಕಿದ ಅಭಿಮಾನಿ.!

  ಈ ಡೈಲಾಗ್ ಬರುವ ಸಂದರ್ಭ

  ಈ ಡೈಲಾಗ್ ಬರುವ ಸಂದರ್ಭ

  ನಾಯಕ ನಟಿ ವಿಚಾರದಲ್ಲಿ ಯಶ್ ತಮ್ಮ ಶಿಷ್ಯರಿಗೆ ಹೇಳುವ ಸಂದರ್ಭ. ಈ ಡೈಲಾಗ್ ಕೇಳಿದ ಮೇಲೆ, 'ಕೆಜಿಎಫ್' ಚಿತ್ರ ಬರಿ ರೌಡಿಸಂ ಕಥೆಯಲ್ಲ. ಇದರಲ್ಲೂ ಲವ್ ಸ್ಟೋರಿ ಕಥೆ ಕೂಡ ಹೊಂದಿದೆ ಎಂಬುದು ಗೊತ್ತಾಗುತ್ತಿದೆ.

  ರಾಕಿಂಗ್ ಸ್ಟಾರ್ ಯಶ್ ಗಡ್ಡದ ಬಗ್ಗೆ ಪ್ರಶ್ನೆ ಕೇಳಿದ ಪತ್ನಿ ರಾಧಿಕ ಪಂಡಿತ್

  'ಕೆಜಿಎಫ್' ಚಿತ್ರದ ಬಗ್ಗೆ

  'ಕೆಜಿಎಫ್' ಚಿತ್ರದ ಬಗ್ಗೆ

  ಅಂದ್ಹಾಗೆ, 'ಕೆಜಿಎಫ್' ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

  English summary
  Kannada Actor, Rocking star Yash Has revealed The First Dialogue of 'KGF' Movie in YashasVinayaka Programme on colours channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X