»   » 'ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್

'ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಜೊತೆಗಿನ ತಮ್ಮ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ತಮ್ಮ ಬಂಧು-ಬಳಗ, ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗದ ತಾರೆಯರಿಗೆ ಹಂಚುವ ಕಾರ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ತೊಡಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅನಂತ್ ನಾಗ್, ಕುಮಾರ್ ಬಂಗಾರಪ್ಪ ಸೇರಿದಂತೆ ಸ್ಯಾಂಡಲ್ ವುಡ್ ನ ದಿಗ್ಗಜರಿಗೆ ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಆಮಂತ್ರಣ ಪತ್ರಿಕೆ ನೀಡಿದ್ದಾಗಿದೆ. ಇಲ್ಲಿ ನೀವ್ಯಾರೂ ಗಮನಿಸದ ಅಂಶದ ಬಗ್ಗೆ ನಾವು ಹೇಳ್ತೀವಿ ಕೇಳಿ....

ಆಮಂತ್ರಣ ಪತ್ರಿಕೆ ಜೊತೆ ಪುಸ್ತಕ ಹಂಚುತ್ತಿರುವ ಯಶ್

ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಜೊತೆಗೆ ಪುಸ್ತಕವನ್ನೂ ಉಡುಗೊರೆ ರೂಪದಲ್ಲಿ ಎಲ್ಲರಿಗೂ ನೀಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. [ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

ಯಾವುದು 'ಆ' ಪುಸ್ತಕ

ಪತ್ರಕರ್ತ ಜೋಗಿ ರವರು ಬರೆದ 'ಲೈಫ್ ಈಸ್ ಬ್ಯೂಟಿಫುಲ್' ಪುಸ್ತಕವನ್ನ ಲಗ್ನ ಪತ್ರಿಕೆ ಜೊತೆ ಹಂಚುತ್ತಿದ್ದಾರೆ ಯಶ್. [ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು.?]

1000 ಪ್ರತಿಗಳನ್ನು ಖರೀದಿಸಿರುವ ಯಶ್.!

ಮದುವೆ ಕಾಗದದ ಜೊತೆಗೆ 'ಲೈಫ್ ಈಸ್ ಬ್ಯೂಟಿಫುಲ್' ಪುಸ್ತಕವನ್ನು ಹಂಚಲಿಕ್ಕೆಂದೇ 1000 ಪ್ರತಿಗಳನ್ನು ಯಶ್ ಖರೀದಿಸಿದ್ದರಂತೆ. [ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು]

ಸಂತಸ ವ್ಯಕ್ತಪಡಿಸಿರುವ ಜೋಗಿ.!

ಯಶ್ ರವರ ಈ ಪುಸ್ತಕ ಪ್ರೀತಿ ಕಂಡು ಫೇಸ್ ಬುಕ್ ನಲ್ಲಿ ಪತ್ರಕರ್ತ ಜೋಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಂಪಿಗೆ ಸಸಿ ಕೂಡ ಕೊಡ್ತಿದ್ದಾರೆ.!

''ಪ್ರಕೃತಿಯಿಂದ ಎಷ್ಟೆಷ್ಟೋ ತೆಗೆದುಕೊಂಡಿರ್ತೀವಿ, ಒಂದು ಗಿಡ ವಾಪಸ್ ಕೊಡೋಣ. ಹೊಸ ವರ್ಷಕ್ಕೆ ಈ ಭೂಮಿಗೆ ನಮ್ಮ ಕಾಣಿಕೆ'' ಎಂಬ ಬರಹ ಹೊಂದಿರುವ ಕಾರ್ಡ್ ಹೊತ್ತ ಸಸಿಯನ್ನ ತಮ್ಮ ಲಗ್ನ ಪತ್ರಿಕೆ ಹಾಗೂ 'ಲೈಫ್ ಈಸ್ ಬ್ಯೂಟಿಫುಲ್' ಪುಸ್ತಕದ ಜೊತೆ ನೀಡುತ್ತಿದ್ದಾರೆ ಯಶ್.

ಪರಿಸರ ಪ್ರೇಮ ಹಾಗೂ ಪುಸ್ತಕ ಪ್ರೇಮ

'ಯಶೋಮಾರ್ಗ' ಮೂಲಕ ಈಗಾಗಲೇ ಅನೇಕ ಸಾಮಾಜಿಕ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯಶ್, ಈಗ ಅದೇ 'ಯಶೋಮಾರ್ಗ' ಮುಖಾಂತರ, ಲಗ್ನ ಪತ್ರಿಕೆ ಜೊತೆಗೆ ಪರಿಸರ ಪ್ರೇಮ ಹಾಗೂ ಪುಸ್ತಕ ಪ್ರೇಮ ಮೆರೆಯುತ್ತಿದ್ದಾರೆ ಯಶ್.

ಎಂಟ್ರಿ ಪಾಸ್.!

ಆಮಂತ್ರಣ ಪತ್ರಿಕೆ ನೀಡುತ್ತಿರುವ ಎಲ್ಲರಿಗೂ 'ಗೇಟ್ ಪಾಸ್' ಕೂಡ ಕೊಡುತ್ತಿದ್ದಾರೆ ಯಶ್.

ಯಶ್-ರಾಧಿಕಾ ಪಂಡಿತ್ ಮದುವೆ ಯಾವಾಗ.?

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವ ಡಿಸೆಂಬರ್ 10 ಹಾಗೂ 11 ರಂದು ನಡೆಯಲಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಡಿಸೆಂಬರ್ 11 ರಂದು ಸಂಜೆ 7 ಗಂಟೆಯಿಂದ ಆರತಕ್ಷತೆ ನಡೆಯಲಿದೆ.

English summary
Along with Wedding Invitation and Sampige Sapling, Rocking Star Yash is also distributing 'Life is Beautiful' book written by Jogi to Celebrities. Yash-Radhika Pandit wedding is scheduled on December 10th and 11th at Tripura Vasini, Bengaluru Palace Ground.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada