»   » ಯಶ್, ದುನಿಯಾ ವಿಜಯ್, ಪ್ರೇಮ್...ಎಲ್ಲರಿಗೂ 'ಇವರೇ' ಬೇಕು!

ಯಶ್, ದುನಿಯಾ ವಿಜಯ್, ಪ್ರೇಮ್...ಎಲ್ಲರಿಗೂ 'ಇವರೇ' ಬೇಕು!

Posted By:
Subscribe to Filmibeat Kannada

'ಗಜಕೇಸರಿ' ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆಟಪ್ ಸೂಪರ್ ಆಗಿತ್ತು ಅಲ್ವಾ? ದುನಿಯಾ ವಿಜಯ್ ಕಟ್ಟುಮಸ್ತಾದ ದೇಹ ಯಾರಿಗ್ತಾನೆ ಕಣ್ಣು ಕುಕ್ಕಲ್ಲ ಹೇಳಿ? 'ಲವ್ಲಿ ಸ್ಟಾರ್' ಪ್ರೇಮ್ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿದ್ದು ಹೇಗೆ ಅಂತ ನಿಮಗೆ ಗೊತ್ತಾ?

ಇವರಿಷ್ಟೇ ಅಲ್ಲ, 'ಕೃಷ್ಣ' ಅಜೇಯ್ ರಾವ್, ಚೇತನ್ ಚಂದ್ರ ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರ ಬಾಡಿ ಈಗ ದಷ್ಟಪುಷ್ಟವಾಗಿದೆ. ಅದಕ್ಕೆಲ್ಲಾ ಕಾರಣ ಯಾರು ಅಂತೀರಾ?

ಬೇರಾರೂ ಅಲ್ಲ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಬಾಡಿ ಬಿಲ್ಡರ್ ಪಾನಿ ಪೂರಿ ಕಿಟ್ಟಿ. ['ಆಕ್ಷನ್ ಹೀರೋ' ಆಗ್ಬೇಕೆನ್ನೋ ಆಸೆ ನಿಮಗೂ ಇದ್ಯಾ?]

ಬರೋಬ್ಬರಿ 24 ಬಾರಿ ಮಿಸ್ಟರ್ ಕರ್ನಾಟಕ, 11 ಬಾರಿ ಮಿಸ್ಟರ್ ಇಂಡಿಯಾ ಗೋಲ್ಡ್ ಹಾಗೂ ಮೂರು ಬಾರಿ ಚಾಂಪಿಯನ್ ಆಫ್ ಚಾಂಪಿಯನ್ ಪುರಸ್ಕಾರ ಪಡೆದಿರುವ ಪಾನಿ ಪೂರಿ ಕಿಟ್ಟಿ, ಸ್ಯಾಂಡಲ್ ವುಡ್ ಸ್ಟಾರ್ ನಟರಿಗೆ ಬೇಕೇ ಬೇಕು. ಮುಂದೆ ಓದಿ....

ಯಶ್ ಗೆ ಹೊಸ ಲುಕ್ ಕೊಟ್ಟಿದ್ದು ಇವರೇ!

ಮೊದಮೊದಲು ಚಾಕಲೇಟ್ ಬಾಯ್ ಅವತಾರದಲ್ಲಿ ತೆಳ್ಳಗಿದ್ದ ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ' ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡಿದರು. ಯಶ್ ಗೆ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಲು ಮಾರ್ಗದರ್ಶನ ನೀಡಿದವರು ಇದೇ ಪಾನಿ ಪೂರಿ ಕಿಟ್ಟಿ. ಈಗಲೂ ಯಶ್ ರವರ ಪರ್ಸನಲ್ ಟ್ರೇನರ್ ಇವರೇ.

ದುನಿಯಾ ವಿಜಯ್ ಗೆ ರೆಗ್ಯೂಲರ್ ಟ್ರೇನರ್!

'ಶಂಕರ್ ಐ.ಪಿ.ಎಸ್' ಸಿನಿಮಾದಿಂದ ಈಗಿನವರೆಗೂ ಕಟ್ಟುಮಸ್ತಾದ ದೇಹ ಮೇನ್ಟೇನ್ ಮಾಡುವಲ್ಲಿ ದುನಿಯಾ ವಿಜಯ್ ಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವವರು ಪಾನಿ ಪೂರಿ ಕಿಟ್ಟಿ.

ಪ್ರೇಮ್ ಗೂ ಇವರೇ ಬೇಕು!

ಯಶ್ ಹಾಗೂ ದುನಿಯಾ ವಿಜಯ್ ಗೆ ಹೊಸ ಮೇಕ್ ಓವರ್ ನೀಡಿರುವ ಪಾನಿ ಪೂರಿ ಕಿಟ್ಟಿ ಲವ್ಲಿ ಸ್ಟಾರ್ ಪ್ರೇಮ್ ಗೂ ತರಬೇತಿ ನೀಡಿದ್ದಾರೆ

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಟ್ರೇನರ್

ಅಜೇಯ್ ರಾವ್, ಚೇತನ್ ಚಂದ್ರ ಸೇರಿದಂತೆ ಸ್ಟಾರ್ ನಟರಿಗೆ ಉತ್ತಮ ತರಬೇತಿ ನೀಡುತ್ತಿರುವ ಪಾನಿ ಪೂರಿ ಕಿಟ್ಟಿ, ಇದೀಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಟ್ರೇನರ್ ಆಗಿದ್ದಾರೆ. ಎಲ್ಲರಿಗೂ ಪಾನಿ ಪೂರಿ ಕಿಟ್ಟಿ ಬೇಕೇ ಬೇಕು.

ಸ್ವಂತ ಜಿಮ್ ಓಪನ್ ಮಾಡುತ್ತಿದ್ದಾರೆ

'ಮಸಲ್ ಪ್ಲಾನೆಟ್' ಎಂಬ ಹೆಸರಿನಲ್ಲಿ ಈಗಾಗಲೇ ಅನೇಕ ಕಡೆ ಜಿಮ್ ತೆರೆದಿರುವ ಪಾನಿ ಪೂರಿ ಕಿಟ್ಟಿ, ಇದೀಗ ವಿದ್ಯಾರಣ್ಯಪುರದಲ್ಲೂ ಹೊಸ ಬ್ರ್ಯಾಂಚ್ ಓಪನ್ ಮಾಡುತ್ತಿದ್ದಾರೆ.

ಜಿಮ್ ನಲ್ಲಿ ಏನೇನಿದೆ?

ಅತ್ಯಾಧುನಿಕ ಸೌಲಭ್ಯಗಳಿರುವ ಎರಡು ಅಂತಸ್ತಿನ 'ಮಸಲ್ ಪ್ಲಾನೆಟ್' ನಲ್ಲಿ ಏರೋಬಿಕ್ಸ್, ಝುಂಬಾ, ಬಾಡಿ ವರ್ಕೌಟ್ ಗೆ ಬೇಕಾದ ಎಲ್ಲಾ ತರಬೇತಿ ನೀಡಲಾಗುತ್ತೆ.

ಕಿಟ್ಟಿಗೆ ಸ್ಟಾರ್ ನಟರ ಸಹಾಯ!

ಪಾನಿ ಪೂರಿ ಕಿಟ್ಟಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ದುನಿಯಾ ವಿಜಯ್ 'ಮಸಲ್ ಪ್ಲಾನೆಟ್' ಜಿಮ್ ಗಾಗಿ ಪ್ರಚಾರ ಮಾಡುತ್ತಿರುವುದು ವಿಶೇಷ. ಇದೇ ತಿಂಗಳ 24 ರಂದು 'ಮಸಲ್ ಪ್ಲಾನೆಟ್' ಉದ್ಘಾಟನೆಗೊಳ್ಳಲಿದ್ದು, ಯಶ್ ಹಾಗೂ ದುನಿಯಾ ವಿಜಯ್ ಕೂಡ ಪಾಲ್ಗೊಳ್ಳಲಿದ್ದಾರೆ.

English summary
Kannada Actor Yash and Duniya Vijay are promoting 'Muscle Planet' gym which is owned by Pani Puri Kitty.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada