For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ನನ್ನ ಹೃದಯದಲ್ಲಿ ಅತ್ಯಂತ ವಿಶೇಷ ಸ್ಥಾನ ಹೊಂದಿದೆ- ಯಶ್

  |

  ''ಕೆಜಿಎಫ್ ಚಾಪ್ಟರ್ 2 ನನ್ನ ಹೃದಯದಲ್ಲಿ ಅತ್ಯಂತ ವಿಶೇಷ ಸ್ಥಾನ ಪಡೆದುಕೊಂಡಿದೆ'' ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಇತ್ತೀಚಿಗಷ್ಟೆ ಕೆಜಿಎಫ್ 2 ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಜೀ ಗ್ರೂಪ್ ಖರೀದಿ ಮಾಡಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಟಿವಿ ಹಕ್ಕು ಮಾರಾಟವಾದ ಹಿನ್ನೆಲೆ ನಟ ಯಶ್ ಪ್ರತಿಕ್ರಿಯಿಸಿದ್ದು, ಕೆಜಿಎಫ್ ಚಿತ್ರದ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಕುರಿತು ಕೃತಜ್ಞತೆಯ ಮಾತುಗಳನ್ನಾಡಿದ್ದಾರೆ.

  ಕೆಜಿಎಫ್ ಚಾಪ್ಟರ್ 1 ಸುಮಾರು 1000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಮತ್ತು 50ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನಗೊಂಡಿತ್ತು. ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 100 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊಸ ದಾಖಲೆ ಬರೆದಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಆ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಲಿದೆ ಎಂಬ ಅಭಿಪ್ರಾಯಗಳು ಹುಟ್ಟಿಕೊಂಡಿದೆ. ಈಗಾಗಲೇ ಚಾಪ್ಟರ್ 2 ಟೀಸರ್ ಯೂಟ್ಯೂಬ್‌ನಲ್ಲಿ 208 ಮಿಲಿಯನ್ ವೀಕ್ಷಣೆ ಕಂಡಿದ್ದು, ಭಾರತೀಯ ಚಿತ್ರರಂಗದಲ್ಲಿ ಟ್ರೆಂಡ್ ಆಗಿದೆ.

  ರಾಕಿ ಭಾಯ್‌ಗೆ ಚಾಲೆಂಜ್ ಆಗಲಿದ್ಯಾ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ?ರಾಕಿ ಭಾಯ್‌ಗೆ ಚಾಲೆಂಜ್ ಆಗಲಿದ್ಯಾ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ?

  ಇಂತಹ ಮೆಗಾ ಸಿನಿಮಾದ ಟಿವಿ ಹಕ್ಕನ್ನು ಜೀ ನೆಟ್ ವರ್ಕ್ ಖರೀದಿ ಮಾಡಿರುವುದು ಸಹಜವಾಗಿ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಮುಂದೆ ಓದಿ...

  ಜೀ ಗ್ರೂಪ್‌ಗೆ ನಾನು ಆಭಾರಿ

  ಜೀ ಗ್ರೂಪ್‌ಗೆ ನಾನು ಆಭಾರಿ

  ಟಿವಿ ಹಕ್ಕು ಸೇಲ್ ಆದ ಬಗ್ಗೆ ಮಾತನಾಡಿದ ಯಶ್ ''ಕೆಜಿಎಫ್ ಚಾಪ್ಟರ್ 2 ನನ್ನ ಹೃದಯದಲ್ಲಿ ಅತ್ಯಂತ ವಿಶೇಷ ಸ್ಥಾನ ಪಡೆದುಕೊಂಡಿದೆ. ನನ್ನ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ನಾನು ಅತ್ಯಂತ ವಿಭಿನ್ನವಾದ ಮನರಂಜನೆ ನೀಡಬೇಕು ಎಂಬ ಗುರಿಯನ್ನು ಹೊಂದಿದ್ದೇವೆ. ನಾವು ನಂಬಿರುವ ಕೆಲಸದ ಮೇಲೆ ಪ್ರೇಕ್ಷಕರೂ ಅಷ್ಟೇ ನಂಬಿಕೆ ಇರಿಸಿದ್ದಕ್ಕೆ ನಾವು ಆಭಾರಿಗಳಾಗಿದ್ದೇವೆ. ಪ್ರೇಕ್ಷಕರಿಂದ ದೊರೆತ ಪ್ರೀತಿ ಮತ್ತು ಬೆಂಬಲ ಅಭೂತಪೂರ್ವವಾದುದು. ಕನ್ನಡ ಸಿನಿಮಾವೂ ಭಾರತದಾದ್ಯಂತ ಪ್ರೇಕ್ಷಕರಲ್ಲಿ ಒಗ್ಗಟ್ಟು ತಂದಿರುವುದು ನನಗೆ ಬಹಳ ಸಂತೋಷ ತಂದಿದೆ. ಪ್ರಾರಂಭದಿಂದಲೂ ಭಾರತೀಯ ವೀಕ್ಷಕರನ್ನು ರಂಜಿಸುತ್ತಿರುವ ಜೀ ನೆಟ್ ವರ್ಕ್ ನೊಂದಿಗೆ ಸಹಯೋಗಕ್ಕೆ ನಾನು ಬಹಳ ಉತ್ಸಾಹದಲ್ಲಿದ್ದೇನೆ. ನಾನು ಜೀ ನೆಟ್ ವರ್ಕ್ ಗೆ ನನ್ನ ಕೃತಜ್ಞತೆ ಹೇಳುತ್ತೇನೆ. ಮತ್ತು ಅವರಿಗೆ ಶುಭ ಕೋರುತ್ತೇನೆ. ನಮ್ಮ ಭವಿಷ್ಯದ ಯೋಜನೆಗಳಿಗೆ ಯಶಸ್ವಿ ಸಹಯೋಗಗಳನ್ನು ಮುಂದುವರಿಸುವ ಭರವಸೆ ಹೊಂದಿದ್ದೇವೆ' ಎಂದರು.

  ಕೆಜಿಎಫ್ ಚಾಪ್ಟರ್ 2 ಸ್ಯಾಟ್‌ಲೈಟ್ ಹಕ್ಕು ಖರೀದಿಸಿದ ಜೀ ಸಂಸ್ಥೆಕೆಜಿಎಫ್ ಚಾಪ್ಟರ್ 2 ಸ್ಯಾಟ್‌ಲೈಟ್ ಹಕ್ಕು ಖರೀದಿಸಿದ ಜೀ ಸಂಸ್ಥೆ

  ಪ್ರೇಕ್ಷಕರ ಸುರಕ್ಷತೆ ನಮಗೆ ಮುಖ್ಯ

  ಪ್ರೇಕ್ಷಕರ ಸುರಕ್ಷತೆ ನಮಗೆ ಮುಖ್ಯ

  ಜೀ ಎಂಟರ್ ಪ್ರೈಸಸ್ ಲಿಮಿಟೆಡ್(ಜೀಲ್)ನ ಇ.ವಿ.ಪಿ ಅಂಡ್ ಕ್ಲಸ್ಟರ್ ಹೆಡ್ ಸೌಥ್ ಬ್ಯುಸಿನೆಸ್ ಸಿಜು ಪ್ರಭಾಕರನ್ ಮಾತನಾಡಿ, ''ಕೆಜಿಎಫ್ ಚಾಪ್ಟರ್ 2 ಟಿ.ವಿ ಪ್ರಸಾರ ಹಕ್ಕುಗಳನ್ನು ದಕ್ಷಿಣದ ಎಲ್ಲ 4 ಭಾಷೆಗಳಲ್ಲೂ ಪಡೆದುಕೊಳ್ಳುವ ಮೂಲಕ ದೇಶದ ಅತ್ಯಂತ ನಿರೀಕ್ಷೆಯ ಚಿತ್ರವನ್ನು ದಕ್ಷಿಣದ ಪ್ರತಿ ಸ್ಕ್ರೀನ್ ಗೆ ತರುವುದಕ್ಕೆ ನಾವು ಬಹಳ ಥ್ರಿಲ್ ಆಗಿದ್ದೇವೆ. ನಮ್ಮ ವೀಕ್ಷಕರಿಗೆ ಸುರಕ್ಷತೆಯ ಮನರಂಜನೆ ಒದಗಿಸುವ ನಮ್ಮ ಭರವಸೆಯನ್ನು ಈಡೇರಿಸಲು ನಾವು ಕೈಗೊಂಡ ಮತ್ತೊಂದು ಕ್ರಮ ಇದಾಗಿದೆ. ನಮ್ಮ ವೀಕ್ಷಕರಿಗೆ ಅತ್ಯಂತ ಬೃಹತ್ತಾದ ಗುಣಮಟ್ಟದ ಮನರಂಜನೆ ನೀಡುವ ಮೂಲಕ ಗುಣಮಟ್ಟದ ಕಂಟೆಂಟ್ ನೀಡಲು ಮತ್ತು ಈ ಸಹಯೋಗದ ಮೂಲಕ ವಿಶ್ವದಾದ್ಯಂತ ವೈವಿಧ್ಯಮಯ ಪ್ರೇಕ್ಷಕರನ್ನು ರಂಜಿಸುವುದು ನಮ್ಮನ್ನು ನಮ್ಮ ವೀಕ್ಷಕರಿಗೆ ಮತ್ತಷ್ಟು ಹತ್ತಿರ ತರಲಿದೆ'' ಎಂದರು.

  ಕನ್ನಡ ಟು ಪ್ಯಾನ್‌ಇಂಡಿಯಾ: 'ಹೊಂಬಾಳೆ ಸಂಸ್ಥೆ' ಬೆಳೆದು ಬಂದ ಕಥೆಕನ್ನಡ ಟು ಪ್ಯಾನ್‌ಇಂಡಿಯಾ: 'ಹೊಂಬಾಳೆ ಸಂಸ್ಥೆ' ಬೆಳೆದು ಬಂದ ಕಥೆ

  ರೇಟಿಂಗ್‌ನಲ್ಲಿ ಇತಿಹಾಸ ಬರೆಯಲಿದೆ

  ರೇಟಿಂಗ್‌ನಲ್ಲಿ ಇತಿಹಾಸ ಬರೆಯಲಿದೆ

  ''ಕೆಜಿಎಫ್ ಚಿತ್ರದೊಂದಿಗೆ ನಮ್ಮ ಸಹಯೋಗಕ್ಕೆ ಬಹಳ ಸಂತೋಷ ಮತ್ತು ಉತ್ಸಾಹ ಹೊಂದಿದ್ದೇವೆ. ಹೊಂಬಾಳೆ ಫಿಲ್ಮ್ಸ್ ಅವರ ಬಲವಾದ ಕಂಟೆಂಟ್ ಸೃಷ್ಟಿ ಮತ್ತು ಸಾಮರ್ಥ್ಯದಿಂದ ರಾಷ್ಟ್ರ ಮಟ್ಟದಲ್ಲಿ ಬ್ರಾಂಡ್ ಆಗಿ ಬೆಳೆದಿದೆ. ದಕ್ಷಿಣದ ಎಲ್ಲ 4 ಭಾಷೆಗಳಲ್ಲಿ ಕೆಜಿಎಫ್-2 ಟಿ.ವಿ ಹಕ್ಕುಗಳನ್ನು ಪಡೆಯುವುದು ವೀಕ್ಷಕರ ಕುರಿತು ಬ್ರಾಂಡ್ ಆಗಿ ನಮ್ಮ ಆ ಬದ್ಧತೆಗೆ ಮತ್ತೊಂದು ಸಾಕ್ಷಿಯಾಗಿದೆ. ನಮ್ಮ ವೀಕ್ಷಕರನ್ನು ರಂಜಿಸಲು ಭವಿಷ್ಯದಲ್ಲಿ ಅಂತಹ ಮತ್ತಷ್ಟು ಸಹಯೋಗಗಳಿಗೆ ಎದುರು ನೋಡುತ್ತಿದ್ದೇವೆ. ಕೆಜಿಎಫ್-2 ಎಲ್ಲ ದಾಖಲೆಗಳನ್ನು ಮುರಿಯಲಿದೆ ಮತ್ತು ಟಿ.ವಿ ರೇಟಿಂಗ್‌ನಲ್ಲಿ ಇತಿಹಾಸ ಸೃಷ್ಟಿಸಲಿದೆ ಮತ್ತು ದಕ್ಷಿಣ ಭಾಗದ ಜೀ ಚಾನೆಲ್ ಗಳ ಕಿರೀಟಕ್ಕೆ ಮತ್ತೊಂದು ಗರಿಯಾಗಲಿದೆ ಎನ್ನುವುದು ನಿಶ್ಚಿತ ಎಂದರು.'' ಜೀ ಕನ್ನಡ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಎಂದರು.

  ನಿಮ್ಮಲ್ಲರ ನಿರೀಕ್ಷೆ ವ್ಯರ್ಥ ಆಗಲ್ಲ

  ನಿಮ್ಮಲ್ಲರ ನಿರೀಕ್ಷೆ ವ್ಯರ್ಥ ಆಗಲ್ಲ

  ''ಕೆಜಿಎಫ್ ಚಾಪ್ಟರ್ 2ರ ಸ್ಯಾಟ್‌ಲೈಟ್ ಹಕ್ಕುಗಳನ್ನು ದಕ್ಷಿಣ ಭಾಷೆಗಳಿಗೆ ಜೀ ಪಡೆದಿರುವುದು ನನಗೆ ಬಹಳ ಸಂತೋಷ ತಂದಿದೆ. ನಾನು ಜೀ ಜೊತೆಯಲ್ಲಿನ ಸಂಬಂಧಕ್ಕೆ ಅಪಾರ ಮೌಲ್ಯ ನೀಡುತ್ತೇನೆ. ಅವರ ಅತಿ ದೊಡ್ಡ ನೆಟ್‌ವರ್ಕ್‌ ಸಹಾಯದಿಂದ ಕೆಜಿಎಫ್ ಚಾಪ್ಟರ್ 2 ಹೆಚ್ಚಿನ ಪ್ರಮಾಣದ ವೀಕ್ಷಕರಿಗೆ ತಲುಪಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನ್ನದು. ಈ ಸಿನಿಮಾದ ಟೀಸರ್ ಗೆ ದೊರೆತ ಪ್ರತಿಕ್ರಿಯೆಯಿಂದ ನಾನು ಬಹಳ ಥ್ರಿಲ್ ಆಗಿದ್ದೇನೆ. ಈ ಚಿತ್ರವು ಅವರ ನಿರೀಕ್ಷೆಯನ್ನು ಉಳಿಸಿಕೊಳ್ಳುತ್ತದೆ. ಕೆಜಿಎಫ್ ಚಿತ್ರರಂಗದ ಪರಂಪರೆಯಲ್ಲಿ ಹೊಸ ಅಧ್ಯಾಯ ಬರೆಯುತ್ತದೆ ಎಂಬ ಭರವಸೆ ನೀಡುತ್ತೇನೆ. ನಿಮ್ಮೆಲ್ಲರ ನಿರೀಕ್ಷೆ ವ್ಯರ್ಥವಾಗದು ಎಂಬ ಭರವಸೆ ನನ್ನದು'' ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದರು.

  ಕೆಜಿಎಫ್ ಚರಿತ್ರೆ ಸೃಷ್ಟಿಸಲಿದೆ

  ಕೆಜಿಎಫ್ ಚರಿತ್ರೆ ಸೃಷ್ಟಿಸಲಿದೆ

  ''ಕೆಜಿಎಫ್ ಚಾಪ್ಟರ್ 2 ದಕ್ಷಿಣ ಭಾಷೆಗಳ ಟವಿ ಪ್ರಸಾರ ಹಕ್ಕುಗಳಿಗೆ ಜೀ ಜೊತೆಯಲ್ಲಿ ನಾವು ಸಹಯೋಗ ಹೊಂದಿರುವುದನ್ನು ತಿಳಿಸಲು ಬಹಳ ಸಂತೋಷವಾಗಿದೆ. ಜೀ ಜೊತೆಯಲ್ಲಿ ನಮ್ಮ ಸಹಯೋಗದ ಮೂಲಕ ಹೆಚ್ಚು ವೀಕ್ಷಕರಿಗೆ ನಾವು ತಲುಪುವ ಭರವಸೆ ಹೊಂದಿದ್ದೇವೆ. ಹೊಂಬಾಳೆ ಫಿಲ್ಮ್ಸ್ ಮೂಲಕ ನಾವು ಜಾಗತಿಕ ಪ್ರೇಕ್ಷಕರಿಗೆ ಕನ್ನಡ ಸಿನಿಮಾಗಳನ್ನು ತಲುಪಿಸುವ ಮತ್ತು ಶಕ್ತಿಯುತ ಕಂಟೆಂಟ್ ನಿರ್ಮಿಸಲು ಶ್ರಮಿಸುತ್ತೇವೆ. ಕೆಜಿಎಫ್ ಚಾಪ್ಟರ್ 1ರ ದಾಖಲೆ ಯಶಸ್ಸಿನ ನಂತರ ಕೆಜಿಎಫ್ ಚಾಪ್ಟರ್ 2 ಕುರಿತಾದ ನಿರೀಕ್ಷೆಗಳು ಅಪಾರವಾಗಿ ಹೆಚ್ಚಿವೆ. ಈ ಚಿತ್ರದ ಟ್ರೈಲರ್ ಆಕ್ಷನ್ ಥ್ರಿಲ್ಲರ್ ಕುರಿತಾದ ಕುತೂಹಲಕ್ಕೆ ಮತ್ತಷ್ಟು ಸೇರ್ಪಡೆ ಮಾಡಿದೆ. ಕೆಜಿಎಫ್ ಚಾಪ್ಟರ್ 2 ಮೂಲಕ ನಾವು ನಮ್ಮ ಅಭಿಮಾನಿಗಳಿಗೆ ಅತ್ಯುತ್ತಮ ಮನರಂಜನೆ ಅನುಭವ ನೀಡಲು ಪ್ರಯತ್ನಿಸಿದ್ದೇವೆ. ಕೆಜಿಎಫ್ ಚಾಪ್ಟರ್ 2 ಚಿತ್ರೋದ್ಯಮದಲ್ಲಿ ಹೊಸ ಚರಿತ್ರೆ ಸೃಷ್ಟಿಸುವ ವಿಶ್ವಾಸವಿದೆ'' ಎಂದರು.

  English summary
  Rocking star Yash express happy after Zee Kannada Bought KGF Chapter 2 Satellite Rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X