»   » ಕಿಚ್ಚನ 'ಹುಡುಗರು' ಮತ್ತು ಯಶ್ 'ಅಣ್ತಮ್ಮಂದಿರು' ನಡುವೆ ಕಲಹ-ಕೋಲಾಹಲ

ಕಿಚ್ಚನ 'ಹುಡುಗರು' ಮತ್ತು ಯಶ್ 'ಅಣ್ತಮ್ಮಂದಿರು' ನಡುವೆ ಕಲಹ-ಕೋಲಾಹಲ

Posted By:
Subscribe to Filmibeat Kannada

''ಸ್ಪರ್ಧೆ ಇರಬಹುದು.. ಆದ್ರೆ, ನಮ್ಮ ನಮ್ಮಲ್ಲಿ ಕಿತ್ತಾಟ ಇಲ್ಲ. ನಾವು ವೈರಿಗಳು ಅಲ್ಲ. ಭಿನ್ನಾಭಿಪ್ರಾಯ ಅಂತೂ ಇಲ್ಲವೇ ಇಲ್ಲ. ನಾವೆಲ್ಲ ಒಂದೇ... ಅಭಿಮಾನಿಗಳು ಇದನ್ನ ಅರಿತುಕೊಳ್ಳಬೇಕು'' ಅಂತ ಸ್ಟಾರ್ ನಟರು ಎಷ್ಟೇ ಬಾಯಿ ಬಡ್ಕೊಂಡ್ರೂ, ಅಭಿಮಾನಿಗಳು ಮಾತ್ರ ತಮ್ಮ 'ಬಾಸ್'ಗಾಗಿ ಕಿತ್ತಾಡುವುದನ್ನ ನಿಲ್ಲಿಸಲ್ಲ. ಇದಕ್ಕೆ ತಾಜಾ ಉದಾಹರಣೆಯೊಂದನ್ನ ನಾವು ನಿಮ್ಮ ಮುಂದೆ ಇಡ್ತಿದ್ದೀವಿ ಓದಿ...

ಹಿಂದೊಮ್ಮೆ ಕೆಚ್ಚೆದೆಯ ಕಿಚ್ಚ ಸುದೀಪ್ ಪರ ಫೇಸ್ ಬುಕ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಬ್ಯಾಟಿಂಗ್ ಮಾಡಿದ್ದು ನಿಮಗೆ ನೆನಪಿರಬಹುದು. ಆದ್ರೆ, ಅಪ್ಪಟ ಅಭಿಮಾನಿಗಳು ಮಾತ್ರ ಅಭಿಮಾನದ ಪರಾಕಾಷ್ಟೆಯಲ್ಲಿ ಅದೆನ್ನೆಲ್ಲ ಮರೆತು ಬೀದಿ ರಂಪ ಮಾಡಿಕೊಂಡಿದ್ದಾರೆ. ಆ ಘಟನೆಯ ಸಂಪೂರ್ಣ ವಿವರ ಇಲ್ಲಿದೆ....

ಯಶ್ ಫ್ಯಾನ್ಸ್ V/S ಸುದೀಪ್ ಫ್ಯಾನ್ಸ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇರೂರು ಗ್ರಾಮದಲ್ಲಿ ನಟ ಯಶ್ ಅಭಿಮಾನಿಗಳು ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. [ಯಾದಗಿರಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ಯಶ್: ಕಾರಿನ ಗಾಜು ಪುಡಿ ಪುಡಿ]

ಗಲಾಟೆಗೆ ಕಾರಣ 'ಫ್ಲೆಕ್ಸ್'

ಗಂಗಾವತಿ ಜಿಲ್ಲೆಯ ಹೇರೂರು ಗ್ರಾಮದ ಕಾರ್ಯಕ್ರಮವೊಂದಕ್ಕಾಗಿ ಯಶ್ ಅಭಿಮಾನಿಗಳು 30 ಅಡಿ ಎತ್ತರ ಫ್ಲೆಕ್ಸ್ ನಿಲ್ಲಿಸಿದ್ದರು.['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]

40 ಅಡಿ ಎತ್ತರ ಫ್ಲೆಕ್ಸ್ ತಂದ ಸುದೀಪ್ ಫ್ಯಾನ್ಸ್

ಯಶ್ ಅಭಿಮಾನಿಗಳು 30 ಅಡಿ ಎತ್ತರದ ಫ್ಲೆಕ್ಸ್ ನಿಲ್ಲಿಸಿದ್ದನ್ನು ನೋಡಿ ಜಿದ್ದಿಗೆ ಬಿದ್ದ ಸುದೀಪ್ ಅಭಿಮಾನಿಗಳು 40 ಅಡಿ ಎತ್ತರದ ಫ್ಲೆಕ್ಸ್ ಅಳವಡಿಸಿದರು.[ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]

ಹಾಲಿನ ಅಭಿಷೇಕ ಶುರು ಆಯ್ತು

ಪಂಚಾಯತಿ ಮುಂಭಾಗ ಅಳವಡಿಸಿದ್ದ ಈ ಫ್ಲೆಕ್ಸ್ ಗಳಿಗೆ ಹಾಲಿನ ಅಭಿಷೇಕ ಮಾಡಲು ಉಭಯ ನಟರ ಅಭಿಮಾನಿಗಳು ಶುರು ಮಾಡಿದರು.[ಯಾದಗಿರಿಯಲ್ಲಿ ನಿನ್ನೆ ಆಗಿದ್ದೇನು.? ನಟ ಯಶ್ ಬಾಯಿಂದ ಬಂದ ತಪ್ಪು-ಒಪ್ಪು]

ಮಾತಿನ ಚಕಮಕಿ... ಬಿಗುವಿನ ವಾತಾವರಣ

ಇದೇ ಗ್ಯಾಪ್ ನಲ್ಲಿ ಸುದೀಪ್ ಅಭಿಮಾನಿಗಳು ಹಾಗೂ ಯಶ್ ಅಭಿಮಾನಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ತಿರುಗಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಪೊಲೀಸ್ ಎಂಟ್ರಿಕೊಟ್ಟಮೇಲೆ....

ಯಶ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ನಡುವಿನ ಕಿತ್ತಾಟದಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ಪೊಲೀಸರು ಆಗಮಿಸಿ, ಯುವಕರನ್ನು ಚದುರಿಸಿದ್ದಾರೆ. ಗ್ರಾಮ ಪಂಚಾಯತಿ ನೆರವಿನಿಂದ ಫ್ಲೆಕ್ಸ್ ಗಳನ್ನ ತೆರವು ಮಾಡಲಾಗಿದೆ.

ಫೇಸ್ ಬುಕ್ ನಲ್ಲಿ ಸುದೀಪ್ ಪರ ಯಶ್ ಏನಂದಿದ್ದರು.?

''ಯಶ್ ನೀವು ಉತ್ತಮ ನಟ. ಸುದೀಪ್ ಅವರನ್ನ ನೀವು ನಂಬಬೇಡಿ. ಅವರಿಗೆ ಸಪೋರ್ಟ್ ಮಾಡಬೇಡಿ. ಸುದೀಪ್ ಇಂಡಸ್ಟ್ರಿಗೆ ಬಂದಿದ್ದೇ ಡಿವೈಡ್ ಮಾಡೋಕೆ. ನೀವು ಒಳ್ಳೆಯವರು. ನೀವು ಹೀಗೇ ಇರಬೇಕು. ಜೈ ಶಿವಣ್ಣ. ಜೈ ಯಶ್. ಲವ್ ಯೂ ಬ್ರೋ'' ಎಂದು ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ ಮಾಡಿದ ಕಾಮೆಂಟ್ ನೋಡಿ, ''ಒಬ್ಬ ಹೀರೋ ಬಗ್ಗೆ ಹಂಗೆ ಮಾತಾಡೋದು ತಪ್ಪು. ನಿಂಗೆ ಇಷ್ಟ ಇಲ್ಲ ಅಂದ್ರೆ ಸುಮ್ನೆ ಇರು. ಹಾಗೆಲ್ಲಾ ಕೆಟ್ಟದಾಗಿ ಮಾತಾಡ್ಬೇಡ. ನೀವ್ ಮಾತಾಡಿದ್ರೆ ಸುದೀಪ್ ಫ್ಯಾನ್ಸ್ ಕೂಡ ಮಾತಾಡ್ತಾರೆ. ಹೀಗೆ ಇಂಡಸ್ಟ್ರಿ ಹಾಳಾಗೋದು. ಯಾರ ಬಗ್ಗೆನೂ ಯಾರೂ ಕೆಟ್ಟದಾಗಿ ಮಾತಾಡಬಾರದು'' ಅಂತ ನಟ ಯಶ್ ತಿರುಗೇಟು ನೀಡಿದ್ದರು. [ಫೇಸ್ ಬುಕ್ ನಲ್ಲಿ ಕಿಚ್ಚ ಸುದೀಪ್ ಪರ ಯಶ್ ಸಮರ.!]

ಇದೆಲ್ಲ ಮರೆತುಹೋಯ್ತಾ.?

ತೆರೆಮೇಲೆ ಸ್ಟಾರ್ ಗಳು ಹೊಡೆಯುವ ಡೈಲಾಗ್ ಗಳನ್ನ ಕಂಠಪಾಠ ಮಾಡುವ ಅಭಿಮಾನಿಗಳಿಗೆ ಯಶ್ ರವರ ಈ ಮಾತು ಕೇಳಿಸಲಿಲ್ವಾ.? ಹಾಗೆ ಕೇಳಿಸಿದ್ರೆ, ಈ ಗಲಾಟೆ ನಡೆಯುತ್ತಿತ್ತೇ.? [ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್]

ಇಂಡಸ್ಟ್ರಿ ಹಾಳಾಗೋದು ಹೀಗೆ...

ಯಾರೋ ಒಬ್ಬರು ಮಾಡಿದ ಎಡವಟ್ಟಿನಿಂದ ಇಂದು ಇಡೀ ಸುದೀಪ್ ಹಾಗೂ ಯಶ್ ಅಭಿಮಾನಿ ಬಳಗಕ್ಕೆ ಕೆಟ್ಟ ಹೆಸರು.! ಫ್ಲೆಕ್ಸ್ ಅಳವಡಿಕೆಗೆ ಕಿತ್ತಾಡುವ ಬದಲು ಅದೇ ಸ್ಟಾರ್ ಗಳ ಹೆಸರಿನಲ್ಲಿ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಿದ್ದರೆ.. ಅಭಿಮಾನಿಗಳೇ 'ರಿಯಲ್ ಹೀರೋ' ಆಗುತ್ತಿದ್ದರು. ಅಲ್ಲವೇ.?

English summary
Kiccha Sudeep fans outraged against Rocking Star Yash fans over Flex issue in Gangavathi, Koppal.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada