For Quick Alerts
  ALLOW NOTIFICATIONS  
  For Daily Alerts

  ಪೋರ್ಬ್ಸ್ ಮ್ಯಾಗಜೀನ್‌ ಮುಖಪುಟದಲ್ಲಿ ರಾಕಿಂಗ್ ಸ್ಟಾರ್

  |

  'ಕೆಜಿಎಫ್' ನಂತರ ಯಶ್‌ರ ದಶೆಯೇ ಬದಲಾಗಿದೆ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. 'ಕೆಜಿಎಫ್' ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಯಶ್ ಇದೀಗ ವಿಶೇಷ ಗೌರವೊಂದಕ್ಕೆ ಪಾತ್ರರಾಗಿದ್ದಾರೆ.

  ನಟ ಯಶ್‌ ಪೋರ್ಬ್ಸ್ ಮ್ಯಾಗಜೀನ್‌ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಫೋರ್ಬ್ಸ್ ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದ ಮೊದಲ ನಟ ಎಂಬ ಖ್ಯಾತಿಗೆ ನಟ ಯಶ್ ಪಾತ್ರರಾಗಿದ್ದಾರೆ.

  ಫೋರ್ಬ್ಸ್ ಮ್ಯಾಗಜೀನ್ ಈ ಬಾರಿ ದಕ್ಷಿಣ ಭಾರತ ಸಿನಿಮಾಗಳು, ಸಿನಿಮಾಗಳ ಕತೆಗಳು ಬದಲಾದ ರೀತಿ, ದಕ್ಷಿಣ ಭಾರತದ ಸಾಮಾಜಿಕ ಜಾಲತಾಣ ತಾರೆಗಳು ಹೀಗೆ ದಕ್ಷಿಣ ಭಾರತ ಮನೊರಂಜನಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಸಂಚಿಕೆ ಹೊರತಂದಿದ್ದು, ದಕ್ಷಿಣ ಭಾರತದ ಚಿತ್ರರಂಗದ ಪ್ರತಿನಿಧಿಯಂತೆ ನಟ ಯಶ್‌ರ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿದ್ದಾರೆ.

  'ಫೀಲ್ಡ್ಸ್ ಆಫ್ ಗೋಲ್ಡ್'

  'ಫೀಲ್ಡ್ಸ್ ಆಫ್ ಗೋಲ್ಡ್'

  ನಟ ಯಶ್‌ ಬಗ್ಗೆ ಫೋರ್ಬ್ಸ್ ಮುಖಪುಟ ಲೇಖನವನ್ನೂ ಪ್ರಕಟಿಸಿದ್ದು, 'ಫೀಲ್ಡ್ಸ್ ಆಫ್ ಗೋಲ್ಡ್' ಎಂಬ ಹೆಡ್‌ಲೈನ್ ನೀಡಿದೆ. 'ಮೈಸೂರಿನಿಂದ ಬೆಂಗಳೂರಿಗೆ ಬಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಜನಪ್ರಿಯ ನಟರಾದ ಯಶ್‌ ಜೀವನದ ಬಗ್ಗೆ ಆಳವಾದ ಮಾಹಿತಿ'' ಎಂದು ಫೋರ್ಬ್ಸ್ ಹೇಳಿದೆ. ನಟ ಯಶ್‌ರ ಜೀವನ ಪಯಣ, ಯಶ್ ಎದುರಿಸಿದ ಅಡೆ-ತಡೆಗಳು, ಅವಕಾಶಗಳು, 'ಕೆಜಿಎಫ್' ತಂದ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಫೋರ್ಬ್ಸ್ ಜೊತೆ ಮಾತನಾಡಿದ್ದಾರೆ ಯಶ್.

  ಸಖತ್‌ ಆಗಿ ಫೋಸು ನೀಡಿದ್ದಾರೆ ಯಶ್

  ಸಖತ್‌ ಆಗಿ ಫೋಸು ನೀಡಿದ್ದಾರೆ ಯಶ್

  ಪೋರ್ಬ್ಸ್‌ಗಾಗಿ ಸಖತ್ ಪೋಸು ನೀಡಿದ್ದಾರೆ ಯಶ್. 'ಕೆಜಿಎಫ್' ಮಾದರಿಯಲ್ಲಿಯೇ ಗಡ್ಡ ಬಿಟ್ಟು, ಸ್ಟೈಲ್ ಆಗಿ ಅರೆ ಶಯನಾವಸ್ತೆಯ ಗಂಭೀರವಾಗಿ ನೋಡುತ್ತಿರುವ ಯಶ್‌ ಕಣ್ಣಿಗೆ ಹಾಕಿಕೊಂಡಿರುವ ಕನ್ನಡಕ ರಗಡ್ ಲುಕ್‌ ಜೊತೆಗೆ ಕಾರ್ಪೊರೇಟ್ ಲುಕ್ ಸಹ ನೀಡುತ್ತಿದೆ. ಕೂದಲನ್ನು ಹಿಂದೆ ಕಟ್ಟಿ ಪೊನೀಟೇಲ್ ಮಾಡಿದ್ದಾರೆ.

  ಲುಕ್ ಬದಲಾಯಿಸಿಕೊಂಡ ಯಶ್

  ಲುಕ್ ಬದಲಾಯಿಸಿಕೊಂಡ ಯಶ್

  ನಟ ಯಶ್ ತಮ್ಮ ಲುಕ್‌ ಬದಲಾಯಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮುಂಬೈಗೆ ಭೇಟಿ ನೀಡಿರುವ ಯಶ್, ಪ್ರಸಿದ್ಧ ಹೇರ್ ಸ್ಟೈಲಿಶ್ ಆಲಿಮ್ ಹಕೀಮ್ ಅನ್ನು ಭೇಟಿ ಮಾಡಿ ಹೇರ್‌ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಯಶ್‌ ಹೊಸ ಹೇರ್‌ಸ್ಟೈಲ್‌ನಲ್ಲಿ ಮುಂಬೈನಲ್ಲಿ ಓಡಾಡುತ್ತಿರುವ ಚಿತ್ರಗಳು ಸಖತ್ ವೈರಲ್ ಆಗಿವೆ. ಕೆಲವು ದಿನಗಳ ಹಿಂದೆ ಜಾಹೀರಾತು ಚಿತ್ರೀಕರಣಕ್ಕಾಗಿ ನಟ ಯಶ್ ಮುಂಬೈಗೆ ಭೇಟಿ ನೀಡಿದ್ದರು, ಆಗ ಅಭಿಮಾನಿಗಳು ಅವರನ್ನು ಮುತ್ತಿಕೊಂಡಿದ್ದರು.

  ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಯಶ್

  ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಯಶ್

  ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ಕ್ಕೆ ಬಿಡುಗಡೆ ಆಗಲಿದೆ. 'ಕೆಜಿಎಫ್' ಹುಟ್ಟಿಸಿರುವ ನಿರೀಕ್ಷೆಯ ಭಾರ ದೊಡ್ಡದಾಗಿದ್ದು, ಮುಂದೆ ಯಾವ ಸಿನಿಮಾ ಒಪ್ಪಿಕೊಳ್ಳಬೇಕು ಎಂಬ ಗೊಂದಲ್ಲಿದ್ದಾರೆ ಯಶ್. 'ಕೆಜಿಎಫ್' ಬಳಿಕ ಯಾವೊಂದು ಸಿನಿಮಾವನ್ನು ಸಹ ಯಶ್ ಒಪ್ಪಿಕೊಂಡಿಲ್ಲ. ತಮಿಳಿನ ಶಂಕರ್ ಜೊತೆ ಯಶ್ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು ಆದರೆ ಅದು ಸುಳ್ಳಾಯಿತು. ಮೂಲಗಳ ಪ್ರಕಾರ ನರ್ತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಯಶ್ ನಾಯಕರಾಗಿ ನಟಿಸಲಿದ್ದಾರೆ.

  English summary
  Actor Yash features in Forbes magazine. He is first Kannada actor to appear on Forbes magazine cover.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X