For Quick Alerts
  ALLOW NOTIFICATIONS  
  For Daily Alerts

  ಅಂಬಿ ನಂತರ ಯಶ್: 'ರಾಜಾಹುಲಿ' ಬಗ್ಗೆ ಮೈಸೂರು 'ಸಿಂಹ' ಹೀಗೆ ಹೇಳಿದ್ದೇಕೆ?

  |

  ರೆಬೆಲ್ ಸ್ಟಾರ್ ಅಂಬರೀಶ್ ಅವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ. ನೇರ ನುಡಿ, ನೇರ ವ್ಯಕ್ತಿತ್ವ, ಕಷ್ಟ ಅಂತ ಬಂದವರಿಗೆ ಸಹಾಯ ಮಾಡುವುದು, ಇಷ್ಟವಾಗದವರನ್ನ ದೂರು ಇಡುವುದು ಇದೆಲ್ಲವೂ ಅಂಬಿ ಸ್ವಭಾವ.

  ಅಂಬರೀಶ್ ಏನೇ ಬೈಯ್ದರೂ ಪ್ರೀತಿಯಿಂದ ಅಂತಿದ್ರು ಅವರ ಅಭಿಮಾನಿಗಳು. ಯಾವುದೇ ವೇದಿಕೆಯಾಗಿರಬಹುದು, ಯಾವುದೇ ಮಾಧ್ಯಮವಾಗಿರುವುದು, ಎದುರುಗಡೆ ಯಾರೇ ಇರಬಹುದು ಅವರು ಮಾತನಾಡೋ ಶೈಲಿ ಬದಲಾಗುತ್ತಿರಲಿಲ್ಲ.

  'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ

  ಇಂತಹ ಅಂಬರೀಶ್ ನಂತರ ನಟ ಯಶ್ ಆ ರೀತಿ ಸ್ವಭಾವ ಹೊಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ.....

  ಯಾರಿಗೂ ಕ್ಯಾರೇ ಅನ್ನದ ನಟ

  ಯಾರಿಗೂ ಕ್ಯಾರೇ ಅನ್ನದ ನಟ

  ''ಅಂಬರೀಶಣ್ಣನ ನಂತರ ಯಾರಿಗೂ ಕ್ಯಾರೇ ಅನ್ನದೆ ತನಗನಿಸಿದ್ದನ್ನು ನೇರವಾಗಿ ಹೇಳುವ, ಮಾಧ್ಯಮಗಳಿಗೂ ಮಂಗಳಾರತಿ ಮಾಡುವ ಏಕಮಾತ್ರ ವ್ಯಕ್ತಿ ಯಶ್'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ದರ್ಶನ್ ಭೇಟಿ ನಂತರ 'ಕರಿಯ'ನ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು.?

  ಈ ವಿಷ್ಯ ಹೇಳಲು ಕಾರಣವೇನು?

  ಈ ವಿಷ್ಯ ಹೇಳಲು ಕಾರಣವೇನು?

  ಸಂಸದ ಪ್ರತಾಪ್ ಸಿಂಹ ಅವರು ಯಶ್ ಬಗ್ಗೆ ಹೀಗೆ ಹೇಳಲು ಕಾರಣ, ಐಟಿ ವಿಚಾರಣೆ ಬಳಿಕ ಯಶ್ ಮಾತನಾಡಿದ ರೀತಿ. ಐಟಿ ರೇಡ್ ಬಳಿಕ ಯಶ್ ವಿಚಾರಣೆಗೆಂದು ಅಧಿಕಾರಿಗಳು ನೋಟಿಸ್ ನೀಡಿದ್ದರು. ಹಾಗಾಗಿ, ವಿಚಾರಣೆಗೆ ಹಾಜರಾದ ಯಶ್ ನಂತರ ಮಾಧ್ಯಮದವರ ನಡೆಯನ್ನ ಪ್ರಶ್ನಿಸಿದರು. ಈ ಡೇರಿಂಗ್ ಮಾತುಗಳನ್ನ ಕೇಳಿ ಸಂಸದರು ಹೀಗೆ ಹೇಳಿದ್ದಾರೆ.

  ದರ್ಶನ್ ಭೇಟಿ ನಂತರ 'ಕರಿಯ'ನ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು.?

  ಯಶ್ ಹೇಗೆ ಮಾತಾಡಿದ್ರು

  ಯಶ್ ಹೇಗೆ ಮಾತಾಡಿದ್ರು

  ''ಯಾವುದೇ ಸರಿಯಾದ ಮಾಹಿತಿ ಇಲ್ಲದೇ, ವೈಯಕ್ತಿವಾಗಿ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಆ ಒಂದು ಮಾಧ್ಯಮ ನನ್ನನ್ನು ಟಾರ್ಗೆಟ್ ಮಾಡಿದೆ. ಇದನ್ನೆಲ್ಲಾ ಜನರು ನೋಡ್ತಿದ್ದಾರೆ. ಸುಮ್ಮನೆ ತೇಜೋವಧೆ ಮಾಡಿದ್ರೆ ಸುಮ್ಮನೆ ಇರೋರಲ್ಲ ನಾವು'' ಎಂದು ಖಾರವಾಗಿ ಮಾತನಾಡಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  ಅಂಬಿ ಮಾತುಗಳು ನೆನಪಾಗುತ್ತೆ

  ಅಂಬಿ ಮಾತುಗಳು ನೆನಪಾಗುತ್ತೆ

  ಹಾಗ್ನೋಡಿದ್ರೆ, ಮಾಧ್ಯಮದವರು ಕೇಳೋ ಪ್ರಶ್ನೆಗಳಿಗೆ ಡೇರಿಂಗ್ ಆಗಿ ಉತ್ತರ ಕೊಡ್ತಿದ್ದ ನಟ ಅಂದಾಕ್ಷಣ ಮೊದಲು ನೆನಪಾಗುವುದು ಅಂಬರೀಶ್. ಯಾವುದಕ್ಕೂ ಯಾರಿಗೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಾಧ್ಯಮದವರು ಅಷ್ಟೇ ಅಂಬಿಯ ರೆಬೆಲ್ ಮಾತುಗಳನ್ನ ಹಾಗೇಯೇ ಸ್ವೀಕರಿಸುತ್ತಿದ್ದರು. ಈಗ ಯಶ್ ಅವರ ಸ್ವಭಾವವೂ ಅದೇ ರೀತಿ ಕಾಣ್ತಿದೆ ಎಂಬುದು ಪ್ರತಾಪ್ ಸಿಂಹ ಅವರ ಅಭಿಪ್ರಾಯ

  English summary
  Mp pratap simha support to yash for his daring attitude with media people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X