For Quick Alerts
  ALLOW NOTIFICATIONS  
  For Daily Alerts

  ಅಣ್ತಮ್ಮ ಯಶ್ 'ಗಜಕೇಸರಿ' ಟ್ರೇಲರ್ ನೋಡಿದ್ಯಾ

  By ಜೇಮ್ಸ್ ಮಾರ್ಟಿನ್
  |

  ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಮಹತ್ವಾಕಾಂಕ್ಷಿ ಚಿತ್ರ ಗಜಕೇಸರಿಯ ಝಲಕ್ ತೋರಿಸಲಾಗಿತ್ತು. ಗಜ ಕೇಸರಿ ಚಿತ್ರದ ಮೇಕಿಂಗ್ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ಯಶ್ ಅವರ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತೆ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಕಾಣಿಸುತ್ತಿದೆ.

  2013ರಲ್ಲಿ ಗೂಗ್ಲಿ, ರಾಜಾಹುಲಿ ಭರ್ಜರಿ ಯಶಸ್ವಿ ಚಿತ್ರಗಳ ನಾಯಕರಾಗಿರುವ ಯಶ್ ಅವರು ಹೊಸಬಗೆಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ ಮೂಡಿಸಿದ್ದಾರೆ. ಯಶ್ ಅವರ ಹುಟ್ಟುಹಬ್ಬಕ್ಕಾಗಿಯೇ ಗಜಕೇಸರಿ ಚಿತ್ರ ತಂಡ ವಿಶೇಷವಾದ ಮೇಕಿಂಗ್ ವಿಡಿಯೋ ಮಾಡಿ ಪ್ರಚಾರ ಗಿಟ್ಟಿಸಿಕೊಂಡಿದ್ದು ಸುಳ್ಳಲ್ಲ.

  ಬಹುತೇಕ ಚಿತ್ರೀಕರಣ ಥಾಯ್ಲೆಂಡ್ ನ‌ಲ್ಲಿ ನಡೆಸಲಾಗಿದೆ. ಥಾಯ್ಲೆಂಡಿನಲ್ಲಿ ಇಲ್ಲಿಗಿಂತ ಚೆನ್ನಾಗಿ ಪಳಗಿದ ಆನೆಗಳಿರುವುದು ಒಂದು ಕಾರಣ ಎನ್ನುತ್ತದೆ ಚಿತ್ರ ತಂಡ. ಥಾಯ್ಲೆಂಡಿನ ಎಲಿಫೆಂಟ್ ಪಾರ್ಕ್ ನಲ್ಲಿ 30 ಆನೆಗಳ ನಡುವೆ ಚಿತ್ರೀಕರಣ ನಡೆಸಲಾಗಿದೆ. ಕೇರಳದ 15 ಅಡಿ ಎತ್ತರದ ಅರ್ಜುನ ಎಂಬ ಆನೆ ಗಜಕೇಸರಿ ಯಶ್ ಸಂಗಾತಿಯಾಗಿ ವಿಶೇಷವಾಗಿ ಕಾಣಿಸಿಕೊಳ್ಳಲಿದೆ. ಯಶ್ ವಿಭಿನ್ನ ಗೆಟೆಪ್ ನಲ್ಲಿ ಕಾಣಿಸಿಕೊಂಡಿರುವ ಗಜಕೇಸರಿ ಚಿತ್ರದ ಬಗ್ಗೆ ಇನ್ನೊಂದಿಷ್ಟು ಮಾಹಿತಿ, ಗಜಕೇಸರಿ ಚಿತ್ರತಂಡದ ಪರಿಚಯ ನಿಮ್ಮ ಮುಂದಿದೆ...

  ಗಜಕೇಶರಿ ನಿರ್ದೇಶಕ ಕೃಷ್ಣಗೆ ಸಂಭ್ರಮ

  ಗಜಕೇಶರಿ ನಿರ್ದೇಶಕ ಕೃಷ್ಣಗೆ ಸಂಭ್ರಮ

  ಸುಮಾರು ಆರೇಳು ತಿಂಗಳುಗಳ ಕಾಲ ಚಿತ್ರ ತಂಡ ಪಟ್ಟ ಪರಿಶ್ರಮದ ಝಲಕ್ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ. ಚಿತ್ರೀಕರಣದ ದೃಶ್ಯಗಳ ಜತೆಗೆ ಗಜಕೇಸರಿ ಸಿನಿಮಾದ ಎರಡು ತುಣುಕುಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಕಾಣುವಂತೆ ಮಾಡಿದ್ದೆವು. ಈಗ 1.34 ಅವಧಿಯಲ್ಲಿ ಯಶ್ ವಿಭಿನ್ನ ಪಾತ್ರಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ಕೃಷ್ಣ ಸಂಭ್ರಮದಿಂದ ಹೇಳಿದ್ದಾರೆ.

  ಯಶ್ ಹೇರ್ ಸ್ಟೈಲ್ ವಿಶೇಷ

  ಯಶ್ ಹೇರ್ ಸ್ಟೈಲ್ ವಿಶೇಷ

  ಈ ಚಿತ್ರಕ್ಕಾಗಿ ಯಶ್ ತಮ್ಮ ಕೇಶ ವಿನ್ಯಾಸ ಬದಲಿಸಲಿದ್ದಾರೆ. ಪಾತ್ರಕ್ಕಾಗಿ ಇನ್ನಷ್ಟು ಉದ್ದಗೂದಲು ಬಿಟ್ಟಿದ್ದಾರೆ. ಮೂರು ಗಂಟೆಗಳ ಕಾಲ ಕೂದಲನ್ನು ಹೆಣೆದು ಅಂಟಿಸಿ ಉದ್ದ ಮಾಡಲಾಗಿದೆ. ಕೇಶ ವಿನ್ಯಾಸಕ್ಕಾಗಿ ಹೈದರಾಬಾದಿನ ಅಲೆಕ್ಸ್ ಎಂಬ ಹೇರ್ ಸ್ಟೈಲಿಸ್ಟ್ ಬಂದು ಯಶ್ ಗೆ ಹೊಸ ಹೇರ್ ಸ್ಟೈಲ್ ನೀಡಿದ್ದಾರೆ. ಹೊಸ ಹೇರ್ ಸ್ಟೈಲ್ ಫುಲ್ ಗೆಟೆಪ್ ಸಿಗಲು ಸುಮಾರು 12-16 ಗಂಟೆ ಬೇಕಂತೆ. ಉದ್ದ ಕೂದಲಿರುವ ಹೆಣ್ ಮಕ್ಕಳ ಕಷ್ಟ ಏನಂತಾ ಈಗ ಅರ್ಥ ಆಯ್ತು ಎಂದು ಯಶ್ ನಮಸ್ಕರಿಸುತ್ತಾರೆ.

  ವಿಶೇಷವಾದ ಮೇಕಿಂಗ್ ವಿಡಿಯೋ

  ಯಶ್ ಅವರ ಹುಟ್ಟುಹಬ್ಬಕ್ಕಾಗಿಯೇ ಗಜಕೇಸರಿ ಚಿತ್ರ ತಂಡ ವಿಶೇಷವಾದ ಮೇಕಿಂಗ್ ವಿಡಿಯೋ

  ಮುದ್ದಾಗಿ ಕಾಣುವ ಅಮೂಲ್ಯ ಯಶ್ ಗೆ ಜೋಡಿ

  ಮುದ್ದಾಗಿ ಕಾಣುವ ಅಮೂಲ್ಯ ಯಶ್ ಗೆ ಜೋಡಿ

  ಮುದ್ದಾಗಿ ಕಾಣುವ ಅಮೂಲ್ಯ ಮೊದಲ ಬಾರಿಗೆ ಯಶ್ ಗೆ ಜೋಡಿಯಾಗಿದ್ದಾರೆ.ಇದರ ಜತೆಗೆ ಕೃಷ್ಣ ಅವರು ನಿರ್ದೇಶಕನಾಗಿ ಬಡ್ತಿ ಪಡೆದಿರುವುದು, ಯಶ್ ಚಿತ್ರ ಮೊದಲ ಬಾರಿಗೆ ನಿರ್ದೇಶಿಸುತ್ತಿರುವುದು, ಹಿಟ್ ಚಿತ್ರ ನೀಡಿ ಕೂಡಾ ಸಹಾಯಕ ನಿರ್ದೇಶಕರಾಗಿ ತರುಣ್ ಸುಧೀರ್ ಅವರು ಕಲಿಕೆಗಾಗಿ ಈ ಚಿತ್ರದಲ್ಲಿ ದುಡಿದಿರುವುದು ಚಿತ್ರದ ಹೈಲೇಟ್ ಎನಿಸಲಿದೆ.

  ಗಜಕೇಸರಿ ಚಿತ್ರಕ್ಕೆ ಅನುಭವಿಗಳ ತಂಡ

  ಗಜಕೇಸರಿ ಚಿತ್ರಕ್ಕೆ ಅನುಭವಿಗಳ ತಂಡ

  ನಿರ್ದೇಶಕ ಯೋಗರಾಜಭಟ್ಟರ ಗರಡಿಯ ಛಾಯಾಗ್ರಾಹಕ ಕೃಷ್ಣ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ವಿಕ್ಟರಿ ಯಂಥ ಹಿಟ್ ಸಿನಿಮಾ ನೀಡಿರುವ ತರುಣ್ ಸುಧೀರ್ ಈ ಚಿತ್ರಕ್ಕೆ ಕೋ-ಡೈರೇಕ್ಟರ್. ಮುಖ್ಯವಾದ ವಿಷಯ ಎಂದರೆ ಈ ಚಿತ್ರಕ್ಕೆ ಯೋಗರಾಜ ಭಟ್ ಅವರು ಕಥೆ ಒದಗಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮೆರಾ ಹಿಂದಿದ್ದರೆ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟರ ಸಾಹಿತ್ಯವಿದೆ. ಕಲೆ ವಿಭಾಗದಲ್ಲಿ ಮೋಹನ್, ರವಿವರ್ಮ ಸಾಹಸ, ಹರಿಕೃಷ್ಣ ಸಂಗೀತವಿರುವ ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಿಸಿದೆ.

  ಟ್ರೇಲರ್ ನಲ್ಲಿ ಅಂಥದ್ದೇನಿದೆ?

  ಟ್ರೇಲರ್ ನಲ್ಲಿ ಅಂಥದ್ದೇನಿದೆ?

  ಯಶ್ ಅವರ ಎರಡು ಗೆಟೆಪ್ ಹಿಂಬದಿಯಿಂದ ತೋರಿಸಲಾಗುತ್ತದೆ. ನಂತರ ಫೈಟಿಂಗ್ ಸೀನ್. ನಾಯಕಿ ಛಾಯಾಗ್ರಹಕಿಯಂತೆ ಕಾಣಿಸಿಕೊಳ್ಳುವುದು. ಮಠದಲ್ಲಿ ಕುಳಿತಿರುವ ಜಗದ್ಗುರು ಪಾತ್ರದಲ್ಲಿ ಅನಂತ್ ನಾಗ್, ಮಠಕ್ಕೆ ಶ್ವೇತವಸ್ತ್ರಧಾರಿಯಾಗಿ ಯಶ್ ಪ್ರವೇಶ ಇನ್ನೊಂದಿಷ್ಟು ಫೈಟ್ ಸೀನ್, ಕೊನೆಯಲ್ಲಿ ಕನ್ನಡ ಸಿರಿ ವೀರರ ಗರಿ ಗಜಕೇಸರಿ ಎಂಬ ಟೈಟಲ್ ಕಾರ್ಡ್ ಕೇಳಿ ಬರುತ್ತದೆ.

  ಆದರೆ, ಒಂದೇ ಒಂದು ಡೈಲಾಗ್ ಕೂಡಾ ಇಲ್ಲದೆ ಪ್ರೋಮೋ ಮಾದರಿಯಲ್ಲಿ ಟ್ರೇಲರ್ ರೂಪಿಸಲಾಗಿದೆ. ಇದಕ್ಕಿಂತ ಚಿತ್ರದ ಮೇಕಿಂಗ್ ವಿಡಿಯೋ ಹೆಚ್ಚು ಕುತೂಹಲಕಾರಿಯಾಗಿತ್ತು. ಚಿತ್ರಕ್ಕೆ ಇನ್ನಷ್ಟು ಟ್ರೇಲರ್ ರೂಪಿಸುತ್ತಿದ್ದರೆ ಓಕೆ ಇಲ್ಲಾಂದ್ರೆ ಈ ಟ್ರೇಲರ್ ಕೇವಲ ಯಶ್ ಅಭಿಮಾನಿಗಳ ಮೆಚ್ಚುಗೆಗೆ ಮಾತ್ರ ಎಂಬಂತೆ ಇದೆ.

  ಯಶ್ ಗಜಕೇಸರಿ ಟ್ರೇಲರ್ ಹೀಗಿದೆ ನೋಡಿ

  ಯಶ್, ಅಮೂಲ್ಯ ಜೋಡಿಯ ಗಜಕೇಸರಿ ಟ್ರೇಲರ್ ಹೀಗಿದೆ ನೋಡಿ

  English summary
  The much awaited movie Gajakesari starring Rocking Star Yash is making its way to hit the silver screen. The crew, who had recently released the making video of the movie, has now released the theatrical trailer. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X