For Quick Alerts
  ALLOW NOTIFICATIONS  
  For Daily Alerts

  ಯಶ್, ಅಲ್ಲು ಅರ್ಜುನ್, ಎನ್‌ಟಿಆರ್, ವಿಜಯ್, ಪ್ರಭಾಸ್ ಪೈಕಿ 'ಇನ್ಸ್ಟಾಗ್ರಾಮ್ ಕಿಂಗ್' ಯಾರು?

  |

  ಈ ಹಿಂದೆ ನಟ ನಟಿಯರ ದೈನಂದಿನ ಚಟುವಟಿಕೆಗಳು ವೇಗವಾಗಿ ಅವರ ಅಭಿಮಾನಿಗಳಿಗೆ ತಿಳಿಯುತ್ತಲೇ ಇರಲಿಲ್ಲ. ಆಗಾಗ ದಿನಪತ್ರಿಕೆ ಅಥವಾ ನಿಗದಿತ ಸಮಯದಲ್ಲಿ ಬರುತ್ತಿದ್ದ ದೂರದರ್ಶನ ವಾರ್ತೆಯ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಥವಾ ನಟಿ ಯಾವ ಸ್ಥಳಗಳಿಗೆ ಭೇಟಿ ನೀಡಿದ್ದಾರೆ, ಯಾವ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಎಂಬ ವಿಷಯವನ್ನು ತಿಳಿದುಕೊಳ್ಳಬೇಕಿತ್ತು. ಆದರೆ ಈಗ ಹಾಗಿಲ್ಲ, ಮೊಬೈಲ್ ಒಂದಿದ್ದರೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ತಮ್ಮ ನೆಚ್ಚಿನ ನಟರ ಸುದ್ದಿಗಳನ್ನು ಪ್ರತಿ ದಿನವೂ ಪಡೆದುಕೊಳ್ಳಬಹುದಾಗಿದೆ.

  ಈ ಸಾಮಾಜಿಕ ಜಾಲತಾಣ ಎಷ್ಟರ ಮಟ್ಟಿಗೆ ಸಿನಿಮಾ ನಟರ ಮೇಲೆ ಪ್ರಭಾವ ಬೀರಿಗೆ ಎಂದರೆ ಕಮಲ್ ಹಾಸನ್ ಹಾಗೂ ಶಿವರಾಜ್‌ಕುಮಾರ್ ರೀತಿಯ ಹಿರಿಯ ನಟರೂ ಸಹ ಇನ್ಸ್ಟಾಗ್ರಾಮ್, ಟ್ವಿಟರ್ ಹಾಗೂ ಫೇಸ್‌ಬುಕ್‌ ಉಪಯೋಗಿಲು ಆರಂಭಿಸಿದ್ದಾರೆ. ಇನ್ನು ಈಗಿನ ನಟ ನಟಿಯರ ಬಗ್ಗೆ ಹೇಳುವ ಹಾಗೇ ಇಲ್ಲ. ಪೋಸ್ಟ್, ಸ್ಟೋರಿಗಳ ಮೂಲಕ ತಮ್ಮ ದೈನದಿಂನ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

  ಹೀಗಾಗಿ ಸಿನಿ ರಸಿಕರು ಹಾಗೂ ಸಾಮಾನ್ಯ ಜನರೂ ಸಹ ನಟ ನಟಿಯರನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಅನುಸರಿಸುತ್ತಿದ್ದಾರೆ. ಅದರಲ್ಲಿಯೂ ಈ ಪ್ಯಾನ್ ಇಂಡಿಯಾ ಟ್ರೆಂಡ್ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಅನ್ಯ ರಾಜ್ಯದ ನಟನನ್ನು ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಅನುಸರಿಸಲು ಆರಂಭಿಸುವುದು ಹೆಚ್ಚಾಗಿಬಿಟ್ಟಿದೆ. ಹೀಗಾಗಿ ನಟನೋರ್ವನ ಜನಪ್ರಿಯತೆಯನ್ನು ಅಳೆಯಲು ಈ ಇನ್ಸ್ಟಾಗ್ರಾಮ್‌ನ್ನೂ ಕೂಡ ಈಗ ಒಂದು ಮಾನದಂಡವನ್ನಾಗಿ ಬಳಸಲಾಗುತ್ತಿದೆ. ಹಾಗಿದ್ದರೆ ಸದ್ಯ ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವ ನಟರ ಪೈಕಿ ಯಾವ ನಟ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿದ್ದಾರೆ ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ.

  ಅಲ್ಲು ಅರ್ಜುನ್ ಹೆಚ್ಚು ಫಾಲೋವರ್ಸ್ ಹೊಂದಿದ್ದರೂ ಯಶ್ ಅತಿಹೆಚ್ಚು ಎಂಗೇಜ್‌ಮೆಂಟ್ ಹೊಂದಿರುವ ನಟ!

  ಅಲ್ಲು ಅರ್ಜುನ್ ಹೆಚ್ಚು ಫಾಲೋವರ್ಸ್ ಹೊಂದಿದ್ದರೂ ಯಶ್ ಅತಿಹೆಚ್ಚು ಎಂಗೇಜ್‌ಮೆಂಟ್ ಹೊಂದಿರುವ ನಟ!

  ಸದ್ಯ ಪ್ಯಾನ್ ಇಂಡಿಯಾ ಎಂಬ ವಿಷಯವನ್ನು ತೆಗೆದುಕೊಂಡರೆ ದಕ್ಷಿಣ ಭಾರತದ ಪರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟರ ಪಟ್ಟಿಯಲ್ಲಿ ಯಶ್, ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್, ವಿಜಯ್ ದೇವರಕೊಂಡ ಹಾಗೂ ಪ್ರಭಾಸ್ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತವೆ. ಈ ಪೈಕಿ ಅತಿಹೆಚ್ಚು ಅನುಯಾಯಿಗಳನ್ನು ಅಲ್ಲು ಅರ್ಜುನ್ ಹೊಂದಿದ್ದಾರೆ. ಆದರೆ ಇನ್ಸ್ಟಾಗ್ರಾಮ್‌ನಲ್ಲಿ ಅತಿಹೆಚ್ಚು ಎಂಗೇಜ್‌ಮೆಂಟ್ ಹೊಂದಿರುವ ನಟ ಮಾತ್ರ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳುತ್ತಿದೆ phlanx.com ಇನ್ಸ್ಟಾಗ್ರಾಮ್ ಎಂಗೇಜ್‌ಮೆಂಟ್ ಕ್ಯಾಲ್ಕುಲೇಟರ್!

  ನಟರ ಇನ್ಸ್ಟಾಗ್ರಾಮ್ ಎಂಗೇಜ್‌ಮೆಂಟ್ ಹೀಗಿದೆ

  ನಟರ ಇನ್ಸ್ಟಾಗ್ರಾಮ್ ಎಂಗೇಜ್‌ಮೆಂಟ್ ಹೀಗಿದೆ

  ಮೊದಲೇ ಹೇಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರುವ ದಕ್ಷಿಣ ಭಾರತದ ಚಿತ್ರ ನಟರ ಪೈಕಿ ಯಾವ ನಟರ ಖಾತೆ ಎಷ್ಟು ಇನ್ಸ್ಟಾಗ್ರಾಮ್ ಎಂಗೇಜ್‌ಮೆಂಟ್ ಹೊಂದಿದ್ದಾರೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ

  ಯಶ್ ಇನ್ಸ್ಟಾಗ್ರಾಮ್ ಖಾತೆ: 18.87% ಎಂಗೇಜ್‌ಮೆಂಟ್

  ಜೂನಿಯರ್ ಎನ್‌ಟಿಆರ್ ಇನ್ಸ್ಟಾಗ್ರಾಮ್ ಖಾತೆ: 15.32% ಎಂಗೇಜ್‌ಮೆಂಟ್

  ರಾಮ್ ಚರಣ್ ಇನ್ಸ್ಟಾಗ್ರಾಮ್ ಖಾತೆ: 10.48 % ಎಂಗೇಜ್‌ಮೆಂಟ್

  ವಿಜಯ್ ದೇವರಕೊಂಡ ಇನ್ಸ್ಟಾಗ್ರಾಮ್ ಖಾತೆ: 7.89% ಎಂಗೇಜ್‌ಮೆಂಟ್

  ಪ್ರಭಾಸ್ ಇನ್ಸ್ಟಾಗ್ರಾಮ್ ಖಾತೆ: 7.76% ಎಂಗೇಜ್‌ಮೆಂಟ್

  ಅಲ್ಲು ಅರ್ಜುನ್ ಇನ್ಸ್ಟಾಗ್ರಾಮ್ ಖಾತೆ: 5.69% ಎಂಗೇಜ್‌ಮೆಂಟ್

  ಈ ಮೂಲಕ ಇನ್ಸ್ಟಾಗ್ರಾಮ್‌ನಲ್ಲಿ ಅತಿಹೆಚ್ಚು ಎಂಗೇಜ್‌ಮೆಂಟ್ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಸದ್ಯ ಇನ್ಸ್ಟಾಗ್ರಾಮ್ ಕಿಂಗ್ ಎನಿಸಿಕೊಂಡಿದ್ದಾರೆ.

  ಇನ್ಸ್ಟಾಗ್ರಾಮ್ ಫಾಲೋವರ್ಸ್ ಲೆಕ್ಕಾಚಾರ ಹೀಗಿದೆ

  ಇನ್ಸ್ಟಾಗ್ರಾಮ್ ಫಾಲೋವರ್ಸ್ ಲೆಕ್ಕಾಚಾರ ಹೀಗಿದೆ

  ಈ ನಟರ ಇನ್ಸ್ಟಾಗ್ರಾಮ್ ಫಾಲೋವರ್ಸ್ 2022ರ ಅಕ್ಟೋಬರ್ 13ರಂದು ಈ ಕೆಳಕಂಡಂತಿದೆ..

  ಅಲ್ಲು ಅರ್ಜುನ್ - 19.5 ಮಿಲಿಯನ್

  ವಿಜಯ್ ದೇವರಕೊಂಡ - 17.7 ಮಿಲಿಯನ್

  ಯಶ್ - 11.5 ಮಿಲಿಯನ್

  ಪ್ರಭಾಸ್ - 8.9 ಮಿಲಿಯನ್

  ರಾಮ್ ಚರಣ್ - 8.8 ಮಿಲಿಯನ್

  ಜೂನಿಯರ್ ಎನ್‌ಟಿಆರ್ - 4.7 ಮಿಲಿಯನ್

  English summary
  Yash instagram account has the higher instagram engagement rate than all south stars. Read on
  Thursday, October 13, 2022, 18:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X