»   » ಚಿಕಿತ್ಸೆಗೆ ಹಣ ನೀಡಿ ಕನಸಿನ ಜೀವನ ಉಳಿಸಿದ ರಾಕಿಂಗ್ ಸ್ಟಾರ್

ಚಿಕಿತ್ಸೆಗೆ ಹಣ ನೀಡಿ ಕನಸಿನ ಜೀವನ ಉಳಿಸಿದ ರಾಕಿಂಗ್ ಸ್ಟಾರ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಓಡುವ ಕುದುರೆ. ಯಶ್ ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳು ಹೆಚ್ಚಾಗುತ್ತಲೇ ಇದ್ದಾರೆ. ಯುವಕರಿಗಂತು ಯಶ್ ಅಭಿನಯ, ಚಿತ್ರಗಳು ಮತ್ತು ರಾಕಿಂಗ್ ಸ್ಟಾರ್ ಮಾಡುತ್ತಿರುವ ಕೆಲಸಗಳು ತುಂಬಾನೇ ಇಷ್ಟವಾಗುತ್ತದೆ.

ಕೆಲವೊಮ್ಮೆ ಅಭಿಮಾನಿಗಳ ಅಭಿಮಾನ ಎಷ್ಟರ ಮಟ್ಟಿಗೆ ಆತಂಕ ತರುವಂತೆ ಮಾಡುತ್ತೆ ಅನ್ನುವುದನ್ನ ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತದ್ದೆ ಒಂದು ಘಟನೆ ಇತ್ತಿಚಿಗಷ್ಟೇ ನಡೆದಿತ್ತು. ಊರಿನ ಹಬ್ಬದ ಸಂದರ್ಭದಲ್ಲಿ ಯಶ್ ಅವರ ಕಟೌಟ್ ಹಾಕಲು ಹೋಗಿ ಅಭಿಮಾನಿಯೊಬ್ಬರು ವಿದ್ಯುತ್ ತಂತಿ ತಗುಲಿ ಅಪಘಾತಕ್ಕೆ ಸಿಲುಕಿದ್ದರು.

ನಟಿ ರಾಧಿಕ ಪಂಡಿತ್ ಕುಟುಂಬಕ್ಕೆ ಬಂದ ಮಹಾಲಕ್ಷ್ಮಿ

ಈ ವಿಚಾರ ತಿಳಿದು ಅನೇಕರು ಆತಂಕಕ್ಕೆ ಒಳಗಾಗಿದ್ದರು. ಅಭಿಮಾನಿಗಳಿಂದ ವಿಷಯ ತಿಳಿದ ರಾಕಿಂಗ್ ಸ್ಟಾರ್ ಅಭಿಮಾನಿಯ ನೆರವಿಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಒಂದೊಳ್ಳೆ ಕಿವಿ ಮಾತನ್ನು ತಿಳಿಸಿದ್ದಾರೆ. ಅಪಘಾತ ಹೇಗಾಯ್ತು? ಯಶ್ ಕಡೆಯಿಂದ ಅಭಿಮಾನಿಗೆ ಯಾವ ರೀತಿಯಲ್ಲಿ ಸಹಾಯವಾಯ್ತು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಅಭಿಮಾನಿಯ ನೆರವಿಗೆ ಯಶ್

ಉತ್ತರ ಕರ್ನಾಟಕದ ಅಗಡಿ ಊರಿನಲ್ಲಿ ನಡೆಯುತ್ತಿದ್ದ ಜಾತ್ರೆ ಸಂದರ್ಭದಲ್ಲಿ ಯಶ್ ಕಟೌಟ್ ಕಟ್ಟಲಾಗುತ್ತಿತ್ತು. ಕಟೌಟ್ ಹಾಕುವ ಸಂದರ್ಭದಲ್ಲಿ ಅಭಿಮಾನಿಯೊಬ್ಬರಿಗೆ ವಿದ್ಯುತ್ ತಗುಲಿ ಮೈ ತುಂಬಾ ಗಾಯಗಳಾಗಿತ್ತು. ನಂತರ ಒಂದು ಕೈಯನ್ನೂ ಕೂಡ ಕಳೆದುಕೊಂಡರು.

ಯೋಗಕ್ಷೇಮ ವಿಚಾರಿಸಿದ ಯಶ್

ಅಭಿಮಾನಿ ಕೈ ಕಳೆದುಕೊಂಡ ವಿಚಾರ ತಿಳಿದ ತಕ್ಷಣ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಸದಸ್ಯರು ಅಗಡಿ ಗ್ರಾಮಕ್ಕೆ ಭೇಟಿ ನೀಡಿ ಗಾಯಗೊಂಡ ಅಭಿಮಾನಿಯ ಆರೋಗ್ಯವನ್ನ ವಿಚಾರಿಸಿದ್ದಾರೆ. ಅದರ ಜೊತೆಗೆ ಒಂದು ಲಕ್ಷದ ಚೆಕ್ ನೀಡಿದ್ದಾರೆ.

ಕನಸಿನ ಜೀವನವನ್ನ ಕಾಪಾಡಿಕೊಳ್ಳಿ

ಯಾವುದೇ ಕೆಲಸ ಮಾಡುವಾಗ ಸಮಯ ಪ್ರಜ್ಞೆ ಇರಲಿ. ಅಭಿಮಾನವಿರಲಿ ಆದರೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಉತ್ಸಾಹದಿಂದ ಏನೋ ಮಾಡಲಿ ಹೋಗಿ ಕನಸಿನ ಜೀವನವನ್ನ ಕಳೆದುಕೊಳ್ಳಬೇಡಿ ಎನ್ನುವುದು ಯಶ್ ಅವರ ಮಾತು.

ಎಲ್ಲದಕ್ಕೂ ಸ್ಟಾರ್ ಗಳೇ ಹೊಣೆಯಲ್ಲ

ಇಂತಹ ಘಟನೆಗಳು ಆಗಾಗ ಆಗುತ್ತಲೇ ಇರುತ್ತವೆ. ಆಗ ಸ್ಟಾರ್ ಗಳು ಜವಾಬ್ದಾರಿ ತೆಗೆದುಕೊಂಡು ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಆದರೆ ಎಲ್ಲದಕ್ಕೂ ಕಲಾವಿದರು ಹೊಣೆ ಆಗಲು ಸಾಧ್ಯವಿಲ್ಲ. ಅಭಿಮಾನ ಇರಲಿ ಆದರೆ ಅದು ಅತೀ ಆಗದಿದ್ದರೆ ಒಳ್ಳೆಯದು.

English summary
Kannada Actor Yash has helped his fan, who had injured while placing cut-out in Agadi Jatra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada