For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕ ಉಪೇಂದ್ರ ಬರ್ತ್ ಡೇ ಪಾರ್ಟಿಯಲ್ಲಿ ಯಶ್

  |

  ನಟಿ ಪ್ರಿಯಾಂಕ ಉಪೇಂದ್ರ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದ್ದೂರಿಯಾಗಿ ಕಾರ್ಯಕ್ರಮ ಮಾಡಿದ್ದು, ಇದರಲ್ಲಿ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಭಾಗಿಯಾಗಿದ್ದರು.

  ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಪಾರ್ಟಿಗೆ ಬಂದು ಪ್ರಿಯಾಂಕ ಉಪೇಂದ್ರರಿಗೆ ವಿಶ್ ಮಾಡಿದರು. ಯಶ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಉಪೇಂದ್ರ ಜೊತೆಗೆ ಯಶ್ ಬಹಳ ಒಡನಾಡ ಹೊಂದಿದ್ದಾರೆ. ಅಲ್ಲದೆ, ತಮ್ಮ ಸಿನಿಮಾ ಪ್ರವೇಶಕ್ಕೆ ಉಪೇಂದ್ರ ಅವರೇ ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ.

  ನಟಿ ರಚಿತಾ ರಾಮ್ ಹೊಗಳಿದ ಪ್ರಿಯಾಂಕ ಉಪೇಂದ್ರನಟಿ ರಚಿತಾ ರಾಮ್ ಹೊಗಳಿದ ಪ್ರಿಯಾಂಕ ಉಪೇಂದ್ರ

  ಪ್ರಿಯಾಂಕ ಉಪೇಂದ್ರ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಟಿ, ಮಂಡ್ಯ ಸಂಸದೆ ಸುಮಲತಾ, ರಾಕ್ ಲೈನ್ ವೆಂಕಟೇಶ್, ನಟಿ ರಾಗಿಣಿ ದ್ವಿವೇದಿ, ಹರ್ಷಿಕಾ ಪೂಣಚ್ಚ, ನಿರ್ಮಾಪಕಿ ಶಿಲ್ಪಾ ಗಣೇಶ್, ಗುರುಕಿರಣ್, ಪಲ್ಲವಿ, ನಿರ್ಮಾಪಕ ಸೌಂದರ್ಯ ಜಗದೀಶ್, ಸೋನು ಗೌಡ, ಜೆಕೆ, ಪಾರೂಲ್ ಯಾದವ್, ಅಮೂಲ್ಯ, ಕಾರುಣ್ಯ ರಾಮ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  ಮತ್ತೆ ಖಾಕಿ ತೊಟ್ಟು ಬಂದ ಪ್ರಿಯಾಂಕಾ ಉಪೇಂದ್ರಮತ್ತೆ ಖಾಕಿ ತೊಟ್ಟು ಬಂದ ಪ್ರಿಯಾಂಕಾ ಉಪೇಂದ್ರ

  ಉಪೇಂದ್ರ ಮಗ ಆಯುಷ್, ಮಗಳು ಐಶ್ವರ್ಯ, ಅಪ್ಪ, ಅಮ್ಮ, ಅಣ್ಣ ಸುಧೀಂದ್ರ ಸೇರಿದಂತೆ ಇಡೀ ಕುಟುಂಬ ಈ ಸಂತೋಷದ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದರು. ಉಪೇಂದ್ರ ಮಕ್ಕಳು ಯಶ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

  ಅಂದಹಾಗೆ, ಪ್ರಿಯಾಂಕ ಉಪೇಂದ್ರ ಸದ್ಯ ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಸೇಂಟ್ ಮಾರ್ಕ್ಸ್ ರಸ್ತೆ', 'ಉಗ್ರಾವತಾರ' ಹಾಗೂ ಮತ್ತೊಂದು ಹಾರರ್ ಸಿನಿಮಾ ಮಾಡುತ್ತಿದ್ದಾರೆ.

  English summary
  Yash in Priyanka Upendra birthday party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X